• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆರೆ ಕಾಮೇಗೌಡರು ಬೇಗನೆ ಗುಣಮುಖರಾಗಲಿ: ಸುಮಲತಾ ಟ್ವೀಟ್

|

ಮಂಡ್ಯ, ಜುಲೈ 25: ಕೆರೆ ಕಾಮೇಗೌಡರಿಗೆ ಕೊರೊನಾ ವೈರಸ್ ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಕುರಿತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ ರಾಜ್ಯ ಸರ್ಕಾರ ತುರ್ತು ಅವರ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದರು.

   America ಜೊತೆ ಸೇಡು ತೀರಿಸಿಕೊಂಡ China | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಇದೀಗ, ಮಂಡ್ಯ ಸಂಸದೆ ಸುಮಲತಾ ಅವರು ಕಾಮೇಗೌಡರು ಆದಷ್ಟೂ ಬೇಗ ಕೊವಿಡ್ ಸೋಂಕಿನಿಂದ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

   ಕೊರೊನಾ ಸೋಂಕಿಗೆ ಒಳಗಾಗಿರುವ ಕೆರೆ ಕಾಮೇಗೌಡ್ರ ಆರೋಗ್ಯ ಸ್ಥಿತಿ ಗಂಭೀರ: ಎಚ್ಡಿಕೆ ಟ್ವೀಟ್

   ಈ ಬಗ್ಗೆ ಟ್ವೀಟ್ ಮಾಡಿರುವ ಸುಮಲತಾ ''ಇಡೀ ದೇಶಕ್ಕೆ ಮಾದರಿಯಾಗಿ ಅವರ ನಿಸ್ವಾರ್ಥ ಕೆಲಸಕ್ಕೆ ಮೆಚ್ಚಿ, ಸ್ವತಃ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರೆ ಕೊಂಡಾಡಿದ ನಮ್ಮ ಮಂಡ್ಯದ ಹೆಮ್ಮೆ ಶ್ರೀ ಕಾಮೇಗೌಡ ಅವರು ಕೊರೊನಾ ಸೋಂಕಿನಿಂದ ಬೇಗನೆ ಸಂಪೂರ್ಣ ಗುಣಮುಖರಾಗಲೆಂದು ಪ್ರಾರ್ಥಿಸುವೆ ಮತ್ತೆ ಆರೋಗ್ಯದಿಂದ ಅವರ ಸಾರ್ಥಕ ಜೀವನ ಹೀಗೆಯೇ ನೂರು ಕಾಲ ಸಾಗಲಿ ಎಂದು ಆಶಿಸುತ್ತೇನೆ' ಎಂದು ಹೇಳಿದ್ದಾರೆ.

   ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡರು ಇತ್ತೀಚಿನ ದಿನಗಳಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕಾಲಿಗೆ ತೀವ್ರವಾಗಿ ಗಾಯವಾಗಿದೆ. ಇದರ ಜೊತೆಗೆ ಕೊರೊನಾ ವೈರಸ್ ಸಹ ತಗುಲಿದೆ.

   82 ವರ್ಷದ ಕಾಮೇಗೌಡರು ಸುಮಾರು 15 ಕೆರೆಗಳನ್ನು ಸ್ವಂತವಾಗಿ ನಿರ್ಮಿಸಿ, ಅದರಲ್ಲೂ ಸದಾ ನೀರು ಉಳಿಯುವಂತೆ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಕಾಮೇಗೌಡರ ಕೆಲಸಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು.

   ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರಿಗೂ ಕೊವಿಡ್ ಸೋಂಕು ತಗುಲಿತ್ತು. ನಂತರ ಸೂಕ್ತ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.

   English summary
   Mandya MP Sumalatha has wish to Kere Kamegowda. Lake man Kere Kamegowda tested Covid-19 Positive.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X