ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಮಲತಾ ಬಿಜೆಪಿ ಸೇರಿದ್ರೆ ಜೋಡೆತ್ತುಗಳ ಕಥೆ ಏನು?

|
Google Oneindia Kannada News

ಮಂಡ್ಯ ಮೇ 10: ಮುಂಬರುವ 2023 ರ ಚುನಾವಣೆಯಲ್ಲಿ ಮಂಡ್ಯ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಹೀಗಾಗಿ ಮುಂದಿನ ತಿಂಗಳು ಮಂಡ್ಯದಲ್ಲಿ ಬಿಜೆಪಿ ಬೃಹತ್​ ಸಮಾವೇಶ ನಡೆಸಲಿದೆ. ಈ ಮಂಡ್ಯ ಸಮಾವೇಶದಲ್ಲೇ ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಸುಮಲತಾ ಬಿಜೆಪಿ ಸೇರಿದರೆ ಜೋಡೆತ್ತುಗಳ ಕಥೆ ಏನು ಎನ್ನುವ ಪ್ರಶ್ನೇ ಕೂಡ ಉದ್ಬವಿಸಿದೆ.

2023 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಿಗ್ ಪ್ಲ್ಯಾನ್ ರೂಪಿಸಿದೆ. ಸುಮಲತಾ ಅಂಡ್ ಟೀಮ್ ಕರೆತಂದು ಸಂಘಟನೆಗೆ ಬಿಜೆಪಿ ನಾಯಕರು ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಸಂಘಟನೆಯ ಮೂಲಕ ಜೆಡಿಎಸ್ ಭದ್ರಕೋಟೆ ಉರುಳಿಸಲು ಕಾರ್ಯತಂತ್ರಗಳು ನಡೆದಿವೆ. ಚುನಾವಣೆಯಲ್ಲಿ ಅಧಿಕ ಸ್ಥಾನ ಗೆಲ್ಲುವುದು ಬಿಜೆಪಿ ಪ್ಲಾನ್ ಆಗಿದ್ದು ಅದಕ್ಕಾಗಿ ಮುಂಬರುವ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸುತ್ತಿದೆ. ಮಾತ್ರವಲ್ಲದೇ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸಂಸದೆ ಸುಮಲತಾ ಅವರ ಪುತ್ರ ಅಭಿಷೇಕ್ ಸಕ್ರಿಯ ರಾಜಕಾರಣಕ್ಕೆ ಬರುವ ಬಗ್ಗೆ ಕಳೆದ ಕೆಲವು ದಿನಗಳಿಂದ ಸುದ್ದಿಗಳು ಹರಿದಾಡುತ್ತಲೇ ಇದ್ದು ಈ ಬಗ್ಗೆ ಬಿಜೆಪಿ ನಾಯಕರು ಅಡ್ಡಗೋಡೆಯ ಮೇಲೆ ದೀಪ ಇಡುವಂತೆ ಹೇಳಿಕೆಯನ್ನು ನೀಡುತ್ತಿದ್ದಾರೆ.

Mandya MP Sumalatha likly to join bjp before election

ಒಂದು ವೇಳೆ ಬಿಜೆಪಿ ಅಂದುಕೊಂಡಂತೇ ಆದರೆ, ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಬಿಜೆಪಿ ಸೇರಿದರೆ ಮಂಡ್ಯದಲ್ಲಿ ದೊಡ್ಡ ರಾಜಕೀಯ ಪಕ್ಷವಾಗಿ ಬಿಜೆಪಿ ಹೊರಹೊಮ್ಮಲಿದೆ. ಯಾಕೆಂದರೆ ಸುಮಲತಾ ಅಂಬರೀಶ್ ಹಾಗೂ ಅವರ ಪುತ್ರ ಅಭಿಷೇಕ್ ಬಿಜೆಪಿ ಸೇರಿದರೆ ಇವರನ್ನು ಗೆಲ್ಲಿಸಲು ಹಿಂದೆ ಶ್ರಮಿಸಿದ ಜೋಡೆತ್ತುಗಳು (ರಾಕಿಂಗ್ ಸ್ಟಾರ್ ಯಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್) ಸಮಲತಾ ಹಿಂದೆ ಇರುತ್ತವೆ ಅನ್ನೋದು ಮಾತ್ರ ನಿಶ್ಚಿತ. ಇಬ್ಬರು ಸ್ಟಾರ್ ನಟರ ಬೆಂಬಲದೊಂದಿಗೆ ಸುಮಲತಾ ಹಿಂದಿನ ಚುನಾವಣೆಯಲ್ಲಿ ಗೆದ್ದು ಮಂಡ್ಯದ ಸಂಸದೆಯಾದರು. ಹೀಗಾಗಿ ಸುಮಲತಾ ಅವರು ಬಿಜೆಪಿ ಸೇರಿದರೆ ಸ್ಟಾರ್ ನಟರೂ ಇವರೊಂದಿಗೆ ಇರುತ್ತಾರೆನ್ನುವುದು ಬಿಜೆಪಿ ಪ್ಲ್ಯಾನ್ ಆಗಿದೆ ಎನ್ನಲಾಗುತ್ತಿದೆ.

Mandya MP Sumalatha likly to join bjp before election

ಮಾತ್ರವಲ್ಲದೇ ಬಿಜೆಪಿಗೆ ಎದುರಾಳಿಯಾಗಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ನಿಂತಿತ್ತು. ಹೆಚ್‌.ಡಿ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಜೋಡೆತ್ತುಗಳಾಗಿ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಿದ್ದವು. ಆದರೀಗ ಮೈತ್ರಿ ಸರ್ಕಾರ ಬಿದ್ದ ಬಳಿಕ ಹೆಚ್‌ಡಿ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಇಬ್ಬರೂ ವಿರೋಧಿಗಳಾಗಿದ್ದಾರೆ. ಮೈತ್ರಿ ಸರ್ಕಾರ ನೆಲಕ್ಕಚ್ಚಲು ಕಾಂಗ್ರೆಸ್ ಕಾರಣ ಎಂದು ಜೆಡಿಎಸ್ ದೂರಿದರೆ ಕಾಂಗ್ರೆಸ್ ಜೆಡಿಎಸ್‌ ಮೇಲೆ ಆರೋಪ ಮಾಡಿದೆ. ಹೀಗಾಗಿ ಸದ್ಯ ಜೋಡೆತ್ತುಗಳು ಕೂಡ ಜೋಡಿಯಾಗಿಲ್ಲ. ಇದು ಬಿಜೆಪಿ ಭದ್ರ ಬುನಾದಿಯಾಗಿದೆ. ಒಂದು ವೇಳೆ ಸುಮಲತಾ ಬಿಜೆಪಿ ಸೇರಿದ್ರೆ ಯಸ್‌ ಹಾಗೂ ನಟ ದರ್ಶನ್ ಜೋಡೆತ್ತುಗಳ ಬಲವಿದ್ದರೆ ಇತ್ತ ಡಿಕೆ ಶಿವಕುಮಾರ್ ಹಾಗೂ ಹೆಚ್‌ಡಿ ಕುಮಾರಸ್ವಾಮಿ ಎನ್ನುವ ಜೋಡೆತ್ತುಗಳ ಬಲವಿಲ್ಲದಂತಾಗುತ್ತದೆ. ಇದೇ ಬಿಗ್ ಪ್ಲ್ಯಾನ್‌ನೊಂದಿಗೆ ಬಿಜೆಪಿ ಸಮುಲತಾ ಅವರನ್ನು ಬಿಜೆಪಿ ಸೇರಿಸಲು ಚುನಾವಣಾ ತಂತ್ರ ರೂಪಿಸಿದೆ.

Mandya MP Sumalatha likly to join bjp before election

ಹೀಗಾಗಿ ಮುಂದಿನ 2023 ರ ಚುನಾವಣೆಯಲ್ಲಿ ದೊಡ್ಡ ರಾಜಕೀಯ ಬದಲಾವಣೆಯಾದರೂ ಆಶ್ಚರ್ಯಪಡಬೇಕಾಗಿಲ್ಲ ಎನ್ನಲಾಗುತ್ತಿದೆ. ಆದರೆ ಯಶ್ ಹಾಗೂ ದರ್ಶನ್ ಈವರೆಗೂ ವ್ಯಕ್ತಿಗಳಿಗೆ ಬೆಂಬಲ ನೀಡಿದವರೇ ಹೊರತು ಪಕ್ಷಗಳಿಗೆ ಬೆಂಬಲ ನೀಡಿದವರಲ್ಲ. ಹೀಗಾಗಿ ಸುಮಲತಾ ಬಿಜೆಪಿ ಸೇರಿದರೆ ಯಶ್ ಹಾಗೂ ದರ್ಶನ್ ಮುಂದಿನ ನಡೆ ಏನೂ ಅನ್ನೋದು ಕೂಡ ಕುತುಹಲಕಾರಿಯಾಗಿದೆ.

English summary
Mandya MP Sumalatha BJP is said to be joining the 2023 assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X