ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಜಾಪ್ರಭುತ್ವದ ದೇವಾಲಯ ಪ್ರವೇಶಿಸಿದ ಮಂಡ್ಯ ಸಂಸದೆ ಸುಮಲತಾ

|
Google Oneindia Kannada News

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದ ಪಕ್ಷೇತರ ಅಭ್ಯರ್ಥಿ ಸುಮಲತಾ ಮೊದಲ ಬಾರಿಗೆ ಸಂಸತ್ ಭವನಕ್ಕೆ ಭೇಟಿ ನೀಡಿದ್ದಾರೆ. ಲೋಕಸಭೆ ಭವನದ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿ ಸಂತಸ ಹಂಚಿಕೊಂಡಿದ್ದಾರೆ.

ಅಧಿಕೃತವಾಗಿ ರಾಜಕೀಯ ಜೀವನಕ್ಕೆ ಸಾಕ್ಷಿಯಾಗಲಿರುವ ಸಂಸತ್ ಭವನವನ್ನ 'ಪ್ರಜಾಪ್ರಭುತ್ವದ ಪವಿತ್ರ ದೇವಾಲಯ' ಎಂದು ಕರೆದು, 'ಈ ದೇವಾಲಯದಲ್ಲಿ ಹೊಸ ಜರ್ನಿ ಆರಂಭಿಸುತ್ತಿದ್ದೇನೆ, ಇದು ಗೌರವದಿಂದ ಕೂಡಿದೆ ಜೈ ಕರ್ನಾಟಕ' ಎಂದು ಸಂಸತ್ ಖುಷಿ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ 2019:ಮೋದಿ ಕನಸಿನ ಬಜೆಟ್ ವಿನ್ಯಾಸದಲ್ಲಿ ನಿರ್ಮಲಾ ಹಾಗೂ ತಂಡಕೇಂದ್ರ ಬಜೆಟ್ 2019:ಮೋದಿ ಕನಸಿನ ಬಜೆಟ್ ವಿನ್ಯಾಸದಲ್ಲಿ ನಿರ್ಮಲಾ ಹಾಗೂ ತಂಡ

mandya mp sumalatha first visit to parliament

ಸಂಪ್ರದಾಯದಂತೆ ಮೊದಲ ಸಲ ಲೋಕಸಭೆ ಪ್ರವೇಶ ಮಾಡಿದ ಸಂಸದರು, ಪ್ರಾಥಮಿಕ ದಾಖಲೆಗಳನ್ನ ನೀಡಿ ತಮ್ಮ ಹೆಸರು ಮತ್ತು ಕ್ಷೇತ್ರದ ಹೆಸರು ನಮೂದಿಸಿಕೊಳ್ಳಬೇಕು. ಈ ಕೆಲಸ ಮುಗಿಸಿ ಬಳಿಕ ಲೋಕಸಭೆಯ ಮೊದಲ ಅಧಿವೇಶನ ಆರಂಭದ ದಿನ ಪ್ರಮಾಣ ವಚನ ಸ್ವೀರಿಸಲಿದ್ದಾರೆ.

ಮತ್ತೆ ಮಂಡ್ಯದಲ್ಲಿ ಜೋಡೆತ್ತುಗಳ ಅಬ್ಬರ: ನಿಜಕ್ಕೂ ಸುಮಲತಾ ಪ್ಲಾನ್ ಏನು?ಮತ್ತೆ ಮಂಡ್ಯದಲ್ಲಿ ಜೋಡೆತ್ತುಗಳ ಅಬ್ಬರ: ನಿಜಕ್ಕೂ ಸುಮಲತಾ ಪ್ಲಾನ್ ಏನು?

17ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 15 ರಿಂದ ಜುಲೈ 26ರ ವರೆಗೂ ನಡೆಯಲಿದೆ. ಕರ್ನಾಟಕ ಲೋಕಸಭೆ ಇತಿಹಾಸದಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಗೆಲುವು ಕಂಡ ಮೊದಲ ಮಹಿಳೆ ಎಂಬ ದಾಖಲೆ ಅಭ್ಯರ್ಥಿ ಬರೆದಿದ್ದಾರೆ.

ಏಪ್ರಿಲ್ 18 ರಂದು ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರ್ ವಿರುದ್ಧ ಸುಮಾರು 1 ಲಕ್ಷ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸುಮಲತಾ ಗೆದ್ದಿದ್ದರು.

English summary
Mandya independent mp sumalatha has visit to parliament house in first time and she called 'the sacred temple of democracy' for parliament house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X