ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅವರು ನನಗೆ ಬೇಕಮ್ಮಾ, ಯೋಧನ ಮಡದಿಯ ಹೃದಯ ಹಿಂಡುವ ಆಕ್ರಂದನ

|
Google Oneindia Kannada News

Recommended Video

Pulwama : ಮಂಡ್ಯದ ಹುತಾತ್ಮ ಯೋಧ ಗುರು ಮಡದಿಯ ಮಾತುಗಳು ಕೇಳಿ...ಕರುಳು ಕಿತ್ತು ಬರುತ್ತೆ | Oneindia Kannada

ಮಂಡ್ಯ, ಫೆಬ್ರವರಿ 15: ''ಬೇಗ ಬರ್ತೀನಿ, ಹೋಗಬೇಕಾದರೆ ಯಾಕೆ ಕಣ್ಣೀರು ಹಾಕ್ತೀಯ, ನಾನೇನು ಅಲ್ಲಿಯೇ ಇದ್ದು ಬಿಡ್ತೀನಾ ಆದಷ್ಟು ಬೇಗ ಬರ್ತೀನಿ'' ಎಂದು ಪತ್ನಿಯನ್ನು ಸಮಾಧಾನಪಡಿಸಿ ಮತ್ತೆ ಯುದ್ಧಭೂಮಿಗೆ ಕಾಲಿಟ್ಟಿದ್ದ ಯೋಧ ಗುರು. ಕೆಲವೇ ಗಂಟೆಗಳಾಗಿದೆ. ಆದರೆ ಬಂದಿದ್ದು ಅವರು 'ಇನ್ನಿಲ್ಲ' ಎನ್ನುವ ಒಂದು ಫೋನ್ ಕರೆ ಮಾತ್ರ.

ಅವರೊಂದಿಗೆ ಕಳೆದ ಕೊನೆಯ ಘಳಿಗೆಯ ನೆನಪುಗಳು ಮಾತ್ರ ಇನ್ನು ಗಟ್ಟಿ, ಅವರ ಕೊನೆಯ ದಿನಗಳಲ್ಲಾದರೂ ಹದಿನೈದು ದಿನ ನನ್ನೊಂದಿಗೆ ಇದ್ದರಲ್ಲ ಎನ್ನುವ ಸ್ವಲ್ಪ ಮಟ್ಟಿನ ಸಮಾಧಾನವಷ್ಟೇ ಬಾಕಿ. ಕಣ್ತುಂಬ ನೀರು, ಅವರ ಮಾತುಗಳು, ನಗು ಎಲ್ಲವೂ ಇನ್ನೂ ಕಿವಿಯ ಅಂಚಿನಲ್ಲಿ ಗುಯ್ ಗುಟ್ಟುತ್ತಿದೆ.

ಪುಲ್ವಾಮದ ಉಗ್ರರ ದಾಳಿ : ಮಂಡ್ಯದ ಸಿಆರ್‌ಪಿಎಫ್ ಜವಾನ ಹುತಾತ್ಮಪುಲ್ವಾಮದ ಉಗ್ರರ ದಾಳಿ : ಮಂಡ್ಯದ ಸಿಆರ್‌ಪಿಎಫ್ ಜವಾನ ಹುತಾತ್ಮ

ಮದುವೆಯಾಗಿ ಇನ್ನೂ ಎಂಟು ತಿಂಗಳು ಕಳೆದಿದೆ, ಪತಿ ಸದಾ ಹತ್ತಿರವಿರಬೇಕು ಎಂದು ಬಯಸುವ ಮನಸ್ಸು ಆದರೆ ದೇಶಕ್ಕಾಗಿ ಹೋರಾಡುತ್ತಿರಬೇಕಾದರೆ ತನ್ನ ಆಸೆಗಳನ್ನು ಹೇಗೆ ಹೇಳಿಕೊಳ್ಳುವುದು ಎಂದು ಎಲ್ಲವನ್ನೂ ನುಂಗಿಕೊಂಡೇ ಜೀವನ ಸಾಗಿಸುತ್ತಿರುವ ಯೋಧಪತ್ನಿ ಕಲಾವತಿ.

ಹದಿನೈದು ದಿನಗಳ ರಜೆ ಮುಗಿಸಿ ಆಗ ತಾನೆ ಮತ್ತೆ ಕೆಲಸಕ್ಕೆ ಹಾಜರಾಗಿದ್ದರು, ಆದರೆ ಅವರ ಹಿಂದೆಯೇ ಯಮ ಕೂಡ ಪ್ರಯಾಣ ಬೆಳಸಿದ್ದ, ಎಂದಿನಂತೆ ಬೆಳಗ್ಗೆ 11 ಗಂಟೆಗೆ ಕಾಲ್ ಬಂದಿತ್ತು, ಆದರೆ ನನ್ನ ಬುದ್ಧಿಗೆ ಏನಾಗಿತ್ತೋ ಏನೋ ಏನೋ ಕೆಲಸ ಇದೆ ಆಮೇಲೆ ಮಾಡ್ತೀನಿ ಎಂದು ಹೇಳಿಬಿಟ್ಟೆ, ಆಗಲೇ ಇಡೀ ಜೀವನಕ್ಕಾಗುವಷ್ಟು ಮಾತನಾಡಬೇಕಿತ್ತು ಎಂದು ಜೀವವೇ ಹೋಗುವ ಹಾಗೆ ನೋವನ್ನು ಹೊರಹಾಕುತ್ತಾರೆ ಕಲಾವತಿ.

19 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ದಾಳಿ19 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ದಾಳಿ

ಇದೇ ಕೊನೆಯ ಕರೆ ಎಂದು ನನಗೆ ತಿಳಿಯಲೇ ಇಲ್ಲ ಸಂಜೆ ಆರು ಗಂಟೆಯ ಸಮಯಕ್ಕೆ ಪದೇ ಪದೇ ಕಾಲ್ ಮಾಡಿದೆ ಆದರೆ ಯಾವುದೇ ರಿಪ್ಲೇ ಇರಲಿಲ್ಲ, ಆದರೆ ಇನ್ಯಾವತ್ತೂ ಅವರನ್ನು ನೋಡಲು ಸಾಧ್ಯವೇ ಇಲ್ಲ ಅವರು ನನಗೆ ಬೇಕು, ಇಡೀ ಜೀವನ ಅವರೊಂದಿಗೆ ಕಳೆಯಬೇಕು, ಅವರನ್ನು ವಾಪಾಸ್ ತಂದುಕೊಡಿ ಎಂದು ತಾಯಿಯ ಮಡಿನಲ್ಲಿ ಮಲಗಿಕೊಂಡು ಕಣ್ಣೀರು ಸುರಿಸುತ್ತಿದ್ದಾರೆ.

ಮದುವೆಯಾಗಿ ಕೇವಲ ಎಂಟು ತಿಂಗಳು

ಮದುವೆಯಾಗಿ ಕೇವಲ ಎಂಟು ತಿಂಗಳು

ಮದುವೆಯಾಗಿ ಇನ್ನೂ ಎಂಟು ತಿಂಗಳು ಕಳೆದಿದೆ, ಪತಿ ಸದಾ ಹತ್ತಿರವಿರಬೇಕು ಎಂದು ಬಯಸುವ ಮನಸ್ಸು ಆದರೆ ದೇಶಕ್ಕಾಗಿ ಹೋರಾಡುತ್ತಿರಬೇಕಾದರೆ ತನ್ನ ಆಸೆಗಳನ್ನು ಹೇಗೆ ಹೇಳಿಕೊಳ್ಳುವುದು ಎಂದು ಎಲ್ಲವನ್ನೂ ನುಂಗಿಕೊಂಡೇ ಜೀವನ ಸಾಗಿಸುತ್ತಿರುವ ಯೋಧಪತ್ನಿ ಕಲಾವತಿ.

 ದಾಳಿಗೂ ಎರಡು ದಿನ ಮೊದಲೇ ಎಚ್ಚರಿಕೆ ನೀಡಿತ್ತು ವಿಡಿಯೋ

ದಾಳಿಗೂ ಎರಡು ದಿನ ಮೊದಲೇ ಎಚ್ಚರಿಕೆ ನೀಡಿತ್ತು ವಿಡಿಯೋ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿ ಬಗ್ಗೆ ಎರಡು ದಿನ ಮೊದಲೇ ವಿಡಿಯೋ ಒಂದು ಎಚ್ಚರಿಕೆ ನೀಡಿತ್ತು. ಅಫಘಾನಿಸ್ತಾನದಲ್ಲಿ ನಡೆದ ಇಂಥದೇ ಘಟನೆಯ ವಿಡಿಯೋವನ್ನು ಅಪ್ಲೋಡ್ ಮಾಡಿ, ಇಂಥದೇ ಘಟನೆ ಭಾರತದಲ್ಲೂ ನಡೆಯಲಿದೆ ಎಂದು ಅದು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿತ್ತು.

ಆತ್ಮಾಹುತಿ ದಾಳಿಕೋರ ಆದಿಲ್ ಎಲ್ಲಿಯವ? ಜೈಷ್ ಆತನನ್ನು ಆರಿಸಿದ್ದೇಕೆ? ಆತ್ಮಾಹುತಿ ದಾಳಿಕೋರ ಆದಿಲ್ ಎಲ್ಲಿಯವ? ಜೈಷ್ ಆತನನ್ನು ಆರಿಸಿದ್ದೇಕೆ?

2001ರ ನಂತರ ಭೀಕರ ಆತ್ಮಾಹುತಿ ದಾಳಿಗೆ ತುತ್ತಾದ ಪುಲ್ವಾಮಾ

2001ರ ನಂತರ ಭೀಕರ ಆತ್ಮಾಹುತಿ ದಾಳಿಗೆ ತುತ್ತಾದ ಪುಲ್ವಾಮಾ

ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೊರ್ ಪ್ರದೇಶದಲ್ಲಿ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಆತ್ಮಾಹುತಿ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿದ್ದಾರೆ. 40ಕ್ಕೂ ಅಧಿಕ ಯೋಧರು ಗಾಯಗೊಂಡಿದ್ದಾರೆ. 2001ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಧಾನಸೌಧದ ಮೇಲೆ ಉಗ್ರರು ನಡೆಸಿದ್ದ ದಾಳಿಯ ನಂತರ ಇದು ಅತಿದೊಡ್ಡ ಉಗ್ರರ ಆತ್ಮಾಹುತಿ ದಾಳಿ ಎನ್ನಬಹುದು.

ಪ್ರೇಮಿಗಳದಿನದಂದು ಮರೆಯಲ್ಲೇ ಬಿಕ್ಕುವ ಇವರ ಅಳಲು ಕಂಡವರ್ಯಾರು?ಪ್ರೇಮಿಗಳದಿನದಂದು ಮರೆಯಲ್ಲೇ ಬಿಕ್ಕುವ ಇವರ ಅಳಲು ಕಂಡವರ್ಯಾರು?

42 ಮಂದಿ ಯೋಧರು ಹುತಾತ್ಮ

42 ಮಂದಿ ಯೋಧರು ಹುತಾತ್ಮ

ಸ್ವಂತ ಮಾವನ ಮಗಳಾದ, ಹಲಗೂರು ಬಳಿಯ ಸಾಸಲಾಪುರ ಗ್ರಾಮದವರಾದ ಕಲಾವತಿಯನ್ನು ವಿವಾಹವಾಗಿದ್ದರು. ಇನ್ಯಾವತ್ತೂ ಬಾರದ ಲೋಕಕ್ಕೆ ತೆರಳಿದ್ದಾರೆ, ಅವರನ್ನು ಕಳಿಸಿಕೊಡಲು ನನಗೆ ಇಷ್ಟವಿಲ್ಲ, ಅವರು ನನಗೆ ಬೇಕು ಎಂದು ಹೇಳಿ ತಾಯಿಯ ಮಡಿಲಲ್ಲಿ ಮಲಗಿ ಕಣ್ಣೀರು ಹಾಕುತ್ತಿದ್ದಾರೆ. ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಅದಿಲ್ ದರ್ ಎಂಬ ಉಗ್ರ ಸ್ಕಾರ್ಪಿಯೋ ಕಾರಿನಲ್ಲಿ ಸ್ಫೋಟಕ ತುಂಬಿ ಆತ್ಮಾಹುತಿ ದಾಳಿ ಮಾಡಿದ್ದನು. ಈ ದಾಳಿಯಲ್ಲಿ ಇದೂವರೆಗೆ 42 ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದರು.

ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ, ಉಗ್ರರ ಜೊತೆ ಹೋರಾಡಲು ಅವರಿಗೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ ಜೈ ಹಿಂದ್....

ವಿಡಿಯೋ: ಅತ್ಮಾಹುತಿ ದಾಳಿಗೂ ಮುನ್ನ ಜೈಷ್ ಉಗ್ರ ಆದಿಲ್ ಹೇಳಿದ್ದೇನು? ವಿಡಿಯೋ: ಅತ್ಮಾಹುತಿ ದಾಳಿಗೂ ಮುನ್ನ ಜೈಷ್ ಉಗ್ರ ಆದಿಲ್ ಹೇಳಿದ್ದೇನು?

English summary
Mandya martyred in deadly pulwama terror attack on CRPF personnel on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X