• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜಾಹುಲಿ, ಐರಾವತ ಬಂದ್ರೂ ಚಕ್ರವ್ಯೂಹ ಭೇದಿಸುವುದು ಅಭಿಮನ್ಯುವೇ: FB ಪೋಸ್ಟ್

|
   ರಾಜಾಹುಲಿ, ಐರಾವತ ಬಂದ್ರೂ ಮಂಡ್ಯ ಚಕ್ರವ್ಯೂಹ ಭೇದಿಸುವುದು ಅಭಿಮನ್ಯುವೇ..! | Oneindia Kannada

   ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಮತ್ತು ಬುಧವಾರ (ಮಾರ್ಚ್ 20) ನಾಮಪತ್ರ ಸಲ್ಲಿಸುವುದಾಗಿ ಸುಮಲತಾ ಅಂಬರೀಶ್ ಹೇಳುವ ಮೂಲಕ, ಮಂಡ್ಯ ಚುನಾವಣಾ ಕಣ ರಂಗೇರಿದೆ.

   ಬಿಜೆಪಿ ತನ್ನ ನಿಲುವನ್ನು ಇನ್ನೂ ಪ್ರಕಟಿಸದಿದ್ದರೂ, ಸುಮಲತಾ ಬೆಂಬಲಿಸಿ ಕಣದಿಂದ ದೂರವುಳಿದರೆ, ಜೆಡಿಎಸ್ಸಿಗೆ ಆಗುವ ಇನ್ನೊಂದು ಸ್ವಲ್ಪ ಮಟ್ಟಿನ ಹಿನ್ನಡೆಯಿದು ಎಂದೇ ಹೇಳಲಾಗುತ್ತಿದೆ.

   ಸುಮಲತಾ ಪರವಾಗಿ ಕನ್ನಡ ಚಿತ್ರೋದ್ಯಮದ ಇಬ್ಬರು ಪ್ರಮುಖ ಸಾಲಿನ ನಟರು ಬೆಂಬಲ ಸೂಚಿಸಿರುವುದು ಮತ್ತು ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು, ಜಿದ್ದಾಜಿದ್ದಿನ ಹಣಾಹಣಿಗೆ ಮುನ್ನುಡಿ ಬರೆದಂತಿದೆ.

   ಟೈಮ್ಸ್‌ ನೌ ಸಮೀಕ್ಷೆ : ಕರ್ನಾಟಕದಲ್ಲಿ ಜೆಡಿಎಸ್‌ಗೆ 1 ಸ್ಥಾನ!

   ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸೇರಿದಂತೆ, ಚಿತ್ರರಂಗದ ಹಲವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ನಡುವೆ, ಸುಮಲತಾ ಮತ್ತು ನಟರಿಬ್ಬರ ವಿರುದ್ದ ಜೆಡಿಎಸ್ ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ ತಿರುಗಿಬಿದ್ದಿದ್ದಾರೆ.

   ಅಭಿಮನ್ಯುವೇ ಚಕ್ರವ್ಯೂಹ ಭೇದಿಸುವುದಾಗಿ ಎನ್ನುವ ಪೋಸ್ಟ್ ಹಾಕಿದ್ದಾರೆ. ಕೆಲವೊಂದು ಸ್ಯಾಂಪಲ್.. (ಶಾಸಕ, ನಿರ್ಮಾಪಕ ಮುನಿರತ್ನಂ ನಾಯ್ಡು ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಬಹುಕೋಟಿ ಪೌರಾಣಿಕ ಚಿತ್ರ 'ಕುರುಕ್ಷೇತ್ರ'ದಲ್ಲಿ ನಿಖಿಲ್ ಅಭಿಮನ್ಯು ಪಾತ್ರಧಾರಿ)

   ಮಂಡ್ಯ ಚಕ್ರವ್ಯೂಹ ಭೇದಿಸೋ ಅಭಿಮನ್ಯು ನಿಖಿಲ್ ಕುಮಾರಸ್ವಾಮಿ, FB ಪೋಸ್ಟ್

   ಮಂಡ್ಯ ಚಕ್ರವ್ಯೂಹ ಭೇದಿಸೋ ಅಭಿಮನ್ಯು ನಿಖಿಲ್ ಕುಮಾರಸ್ವಾಮಿ, FB ಪೋಸ್ಟ್

   'ನಿಖಿಲ್ ಕುಮಾರಸ್ವಾಮಿ ಫಾರ್ ಎಂಪಿ' ಎನ್ನುವ ಅಕೌಂಟ್ ಮೂಲಕ, ಪೋಸ್ಟ್ ಮಾಡಲಾಗುತ್ತಿದ್ದು, ಇದಕ್ಕೆ ಕಾಮೆಂಟಿನ ಪ್ರವಾಹವೇ ಹರಿದುಬರುತ್ತಿದೆ. "ರಾಜಾಹುಲಿ ಬಂದರೂ ಅಷ್ಟೇ.. ಐರಾವತ ಬಂದರೂ ಅಷ್ಟೇ.. ಮಂಡ್ಯ ಚಕ್ರವ್ಯೂಹ ಭೇದಿಸೋ ಅಭಿಮನ್ಯು ನಿಖಿಲ್ ಕುಮಾರಸ್ವಾಮಿ, ಜೈ ಜೆಡಿಎಸ್" ಎನ್ನುವ ಕಾಮೆಂಟ್.

   ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ: ಸುಮಲತಾ ಘೋಷಣೆ

   ಅಭಿಮನ್ಯು ಚಕ್ರವ್ಯೂಹ ಭೇದಿಸಲೇ ಇಲ್ಲ ಎನ್ನುವ ತಿರುಗೇಟು

   ಅಭಿಮನ್ಯು ಚಕ್ರವ್ಯೂಹ ಭೇದಿಸಲೇ ಇಲ್ಲ ಎನ್ನುವ ತಿರುಗೇಟು

   ನಾನು ಒಬ್ಬ ಯಶ್ ಅಭಿಮಾನಿ ಆದರೆ ಅವರು ಪ್ರಚಾರ ಮಾಡಿ ಬಿಟ್ಟರೆ ಮತ್ತೆ ಅವರು ಮಂಡ್ಯಗೆ ಬರೋದಿಲ್ಲ ಆದರೆ ನಮ್ಮ ಜೊತೆ ಸದಾ ಇರುವುದು ಕುಮಾರಣ್ಣ, ಆದ್ದರಿಂದ ನಮ್ಮ ಸಂಪೂರ್ಣ ಬೆಂಬಲ ನಿಖಿಲ್ ಕುಮಾರಸ್ವಾಮಿರವರಿಗೆ ನೀಡಿ ಅವರನ್ನು ಗೆಲ್ಲಿಸೋಣ.. ಲೇ ಗೂಬೆ ಅಭಿಮನ್ಯು ಚಕ್ರವ್ಯೂಹ ಭೇದಿಸಲೇ ಇಲ್ಲ .. ಮಂಡ್ಯದಲ್ಲೂ ಚಕ್ರವ್ಯೂಹ ಭೇದಿಸಲು ನಿಖಿಲ್ ಗೆ ಸಾಧ್ಯವಿಲ್ಲ..

   ಬಿಜೆಪಿ ಕುಮ್ಮಕ್ಕಿನಿಂದ ಸುಮಕ್ಕ ಮುಂದಿನ ರಾಜಕೀಯ ಭವಿಷ್ಯವನ್ನ ಹಾಳು ಮಾಡ್ಕೊಳ್ತಾ ಇದ್ದಾರೆ ಎನ್ನುವ ಪೋಸ್ಟ್

   ಬಿಜೆಪಿ ಕುಮ್ಮಕ್ಕಿನಿಂದ ಸುಮಕ್ಕ ಮುಂದಿನ ರಾಜಕೀಯ ಭವಿಷ್ಯವನ್ನ ಹಾಳು ಮಾಡ್ಕೊಳ್ತಾ ಇದ್ದಾರೆ ಎನ್ನುವ ಪೋಸ್ಟ್

   ಸುಮಲತಾ ಅವ್ರಿಗೆ ಗೆಲುವು ಗಗನ ಕುಸುಮ ಅಂತ ಚೆನ್ನಾಗಿ ಗೊತ್ತು..ಈ ಬಿಜೆಪಿ ಅವ್ರ ಕುಮ್ಮಕ್ಕಿನಿಂದ ಸುಮಕ್ಕ ಅವ್ರ ಮುಂದಿನ ರಾಜಕೀಯ ಭವಿಷ್ಯವನ್ನ ಹಾಳು ಮಾಡ್ಕೊಳ್ತಾ ಇದ್ದಾರೆ ..ಆಕಸ್ಮಾತ್ ಸುಮಲತಾ ಅವ್ರು ಏನಾದ್ರು ಗೆದ್ರೆ ಮರುದಿನನೆ BJP ಸೇರ್ಪಡೆ ಆಗೋದು 100% ಸತ್ಯ ಸತ್ಯ ಸತ್ಯ ದಯವಿಟ್ಟು ಮಂಡ್ಯದ ಜನತೆ ಬಣ್ಣದ ಮಾತಿಗೆ ಮರುಳಾಗಿ ಮಂಡ್ಯದ ಸಮಗ್ರ ಅಭಿವೃದ್ಧಿಗೆ ಕೊಳ್ಳಿ ಇಡ್ಕೊಳ್ಬೇಡಿ.. ಬಹುಶಃ ಬಿಜೆಪಿ ಅವ್ರ ಕುತಂತ್ರದ ಐಟಿ ರೈಡ್ ಗೆ ಭಯಪಟ್ಟು ಬಿಜೆಪಿ ಅವ್ರ ಅಣತಿ

   ಜೋಡಿ ಎತ್ತುಗಳನ್ನ ಮೂಗುದಾರ ಹಾಕಿ ಕಟ್ಟಿಹಾಕುವುದಕ್ಕೆ, ದೊಡ್ಡ ಗೌಡ್ರುಗೆ ಗೊತ್ತು, ಫೇಸ್ ಬುಕ್ ಪೋಸ್ಟ್

   ಜೋಡಿ ಎತ್ತುಗಳನ್ನ ಮೂಗುದಾರ ಹಾಕಿ ಕಟ್ಟಿಹಾಕುವುದಕ್ಕೆ, ದೊಡ್ಡ ಗೌಡ್ರುಗೆ ಗೊತ್ತು, ಫೇಸ್ ಬುಕ್ ಪೋಸ್ಟ್

   "ಜೋಡಿ ಎತ್ತುಗಳನ್ನ ಮೂಗುದಾರ ಹಾಕಿ ಕಟ್ಟಿಹಾಕುವುದಕ್ಕೆ‌... ದೊಡ್ಡ ಗೌಡ್ರುಗೆ ಗೊತ್ತು ಬಿಡ್ರೋ.. ಅಲ್ಲೆಲ್ಲೋ ಜೋಡ್ಗಟ್ಟೆ ಜಾತ್ರೆಗೆ ಹೊಡೆದು ಮಾರಾಕೋದು ಬಿಟ್ಟು ಕಟ್ಟಾಕ್ತಾ ಬೇರೆ ಕೂತ್ಕಪ್ಪಾ.. ನಿಖಿಲ್ ಗಿಂತ #ದೊಡ್ಡಕಲಾವಿದ ಬೇಕಾ? ಆಗ್ಲೇ #ಅಣ್ಣ #2ಸಿಲ್ವರ್_ಜುಬಿಲಿMovie ಕೊಟ್ಟಿದ್ದಾರೆ" ಈ ರೀತಿಯ ಕಾಮೆಂಟುಗಳು..

   ಸುಮಲತಾ ಮೇಡಂ ಮಗನ ಜೊತೆಗೆ ಮಲೇಷಿಯಾದಲ್ಲಿ ಶೂಟಿಂಗ್ ಅನ್ನೋ ಪೋಸ್ಟ್

   ಸುಮಲತಾ ಮೇಡಂ ಮಗನ ಜೊತೆಗೆ ಮಲೇಷಿಯಾದಲ್ಲಿ ಶೂಟಿಂಗ್ ಅನ್ನೋ ಪೋಸ್ಟ್

   "ಕಾವೇರಿ ನದಿಯ ಗಲಾಟೆ .... ದರ್ಶನ್ ಅವರು ಎಲ್ಲಿ ಸಿನಿಮಾ ಶೂಟಿಂಗ್ ನಲ್ಲಿ.. ಯಶ್ ಅವರು ಎಲ್ಲಿ ಸಿಂಗಾಪುರದಲ್ಲಿ.. ಸುಮಲತಾ ಮೇಡಂ ಅವರು ಎಲ್ಲಿ ಅಭಿಷೇಕ್ ಅವರ ಜೊತೆಗೆ ಮಲೇಷಿಯಾದಲ್ಲಿ ..."ಮತ್ತೆ ನಾವೆಲ್ಲರೂ ದೇವೇಗೌಡರ ಮನೆಗೆ ಹೋಗೋಣ ಬನ್ನಿ,.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Mandya Lok Sabha poll 2019: JDS fans angry on Sandalwood stars Darshan and Yash for supporting Sumalatha Ambarish. JDS fans showing their angry in Facebook.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more