ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಮಲತಾ ಬೆನ್ನಿಗೆ ಕಾಂಗ್ರೆಸ್ ಮುಖಂಡರು: ಮಂಡ್ಯಗೆ ಡಿಕೆಶಿ ಎಂಟ್ರಿ

|
Google Oneindia Kannada News

Recommended Video

ಸುಮಲತಾ ಬೆನ್ನಿಗೆ ಕಾಂಗ್ರೆಸ್ ಮುಖಂಡರು: ಮಂಡ್ಯಗೆ ಡಿಕೆಶಿ ಎಂಟ್ರಿ

ಮಂಡ್ಯ, ಮಾರ್ಚ್ 9: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿನ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿನ ಬೆಳವಣಿಗೆಗಳು ದಿನದಿಂದ ದಿನಕ್ಕೆ ಕಾಂಗ್ರೆಸ್-ಜೆಡಿಎಸ್ ಪಕ್ಷಕ್ಕೆ ಕಗ್ಗಂಟಾಗಿ ಪರಿಣಮಿಸುತ್ತಿದ್ದು, ಟ್ರಬಲ್ ಶೂಟರ್ ಡಿ ಕೆ ಶಿವಕುಮಾರ್, ಆಖಾಡಕ್ಕೆ ಇಳಿದಿದ್ದಾರೆ.

ಈ ನಡುವೆ, ಕಳೆದ ಸುಮಾರು ಒಂದು ವಾರದಿಂದ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದ ಸುಮಲತಾ, ಶನಿವಾರ (ಮಾ 9) ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಮಂಡ್ಯ ಜಿಲ್ಲೆಯ ಕೆಲವು ಕಾಂಗ್ರೆಸ್ ಮುಖಂಡರೇ ಸುಮಲತಾ ಬೆನ್ನಿಗೆ ನಿಂತಿರುವುದು ಪಕ್ಷಕ್ಕೆ ತೀವ್ರ ಮುಜುಗರವನ್ನು ತಂದೊಡ್ಡುತ್ತಿದೆ.

ರಂಗೇರಿದ ಮಂಡ್ಯ: ಬಣ್ಣದ ಲೋಕದವರಿಗೆ ಮರುಳಾಗಬೇಡಿ ಅಂದ್ರು ತಮ್ಮಣ್ಣ, ಹಾಗಾದ್ರೆ ನಿಖಿಲ್?ರಂಗೇರಿದ ಮಂಡ್ಯ: ಬಣ್ಣದ ಲೋಕದವರಿಗೆ ಮರುಳಾಗಬೇಡಿ ಅಂದ್ರು ತಮ್ಮಣ್ಣ, ಹಾಗಾದ್ರೆ ನಿಖಿಲ್?

ಇದಕ್ಕೆಲ್ಲಾ ಕಡಿವಾಣ ಹಾಕಲು, ಡಿ ಕೆ ಶಿವಕುಮಾರ್, ಬೆಂಗಳೂರಿನ ತಮ್ಮ ಮನೆಯಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಮುಖಂಡರಿಗೆ, ಭಾನುವಾರ ಔತಣಕೂಟ ಏರ್ಪಡಿಸಿದ್ದಾರೆ ಎನ್ನುವ ಮಾಹಿತಿಯಿದೆ.

Mandya LS election: District Congress leaders backing Sumalatha, DK Shivakumar pitch in

ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾರೂ ಸುಮಲತಾ ಪರವಾಗಿ ಮಾತನಾಡಬಾರದು, ಚುನಾವಣೆಯ ವೇಳೆ ಅವರ ಪರವಾಗಿ ಕೆಲಸವನ್ನೂ ಮಾಡಬಾರದು ಎನ್ನುವ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ಔತಣಕೂಟದ ವೇಳೆ ಡಿಕೆಶಿ ನೀಡುವ ಸಾಧ್ಯತೆಯಿದೆ.

ಚೆಲುವರಾಯಸ್ವಾಮಿ, ಕೆ ಬಿ ಚಂದ್ರಶೇಖರ್, ರಮೇಶ್ ಬಂಡೇಸಿದ್ದೇಗೌಡ ಮುಂತಾದ ಕಾಂಗ್ರೆಸ್ ಮುಖಂಡರ ಜೊತೆಗೆ, ಡಿಕೆ ಶಿವಕುಮಾರ್ ಪ್ರತ್ಯೇಕ ಪ್ರತ್ಯೇಕವಾಗಿ ಮಾತುಕತೆ ನಡೆಸುವ ಸಾಧ್ಯತೆಯಿದೆ. ಕಾಂಗ್ರೆಸ್ಸಿನ ಹೆಚ್ಚಿನ ಮುಖಂಡರು ಸುಮಲತಾ ಅವರಿಗೆ ಬೆಂಬಲವನ್ನು ಸೂಚಿಸಿರುವುದು, ಮೈತ್ರಿ ಸರ್ಕಾರದ ಅಸಮಾಧಾನಕ್ಕೆ ಕಾರಣವಾಗಿದೆ.

ಸುಮಲತಾ ಬಗ್ಗೆ ನಾಲಿಗೆ ಹರಿಬಿಟ್ಟ ರೇವಣ್ಣ ವಿರುದ್ಧ ವ್ಯಾಪಕ ಆಕ್ರೋಶಸುಮಲತಾ ಬಗ್ಗೆ ನಾಲಿಗೆ ಹರಿಬಿಟ್ಟ ರೇವಣ್ಣ ವಿರುದ್ಧ ವ್ಯಾಪಕ ಆಕ್ರೋಶ

ಸುಮಲತಾ ಅಂಬರೀಶ್ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿರುವ ಸಚಿವ ಎಚ್‌.ಡಿ.ರೇವಣ್ಣ ಅವರ ವಿರುದ್ಧ ಸಾಮಾಜಿಕ ಜಾಲತಾಣ ಸೇರಿ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

English summary
Mandya LS election: District Congress leaders backing Sumalatha, Minsiter DK Shivakumar pitched in, called district party leaders for dinner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X