ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಡಿ ಬಾಸ್' ವಿರುದ್ಧ ಸಿಡಿಮಿಡಿಗೊಂಡ ಸಿಎಂ ಕುಮಾರಸ್ವಾಮಿ

|
Google Oneindia Kannada News

Recommended Video

Lok Sabha Elections 2019 : ಡಿ ಬಾಸ್' ವಿರುದ್ಧ ಸಿಡಿಮಿಡಿಗೊಂಡ ಸಿಎಂ ಕುಮಾರಸ್ವಾಮಿ

ಮಂಡ್ಯ, ಮಾರ್ಚ್ 25: ಮಂಡ್ಯ ಲೋಕಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಅಭ್ಯರ್ಥಿಗಳ ಪರ ವಿರೋಧ ವಾಗ್ದಾಳಿ, ಖಾಸಗಿ ಬದುಕಿನ ಬಗ್ಗೆ ಟೀಕೆ, ಗೇಲಿ, ಅಪಹಾಸ್ಯ, ಬೆದರಿಕೆ ಮುಂದುವರೆದಿದೆ. ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ನಿಂತಿರುವ ನಟ ದರ್ಶನ್, ಯಶ್ ಅವರ ವಿರುದ್ಧ ಸಿಎಂ ಕುಮಾರಸ್ವಾಮಿ ಅವರು ಸಿಡಿಮಿಡಿಕೊಂಡಿದ್ದಾರೆ.

ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ

ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಷ್ ಅವರಿಗೆ ಬಿಜೆಪಿ ಕೂಡಾ ಬೆಂಬಲ ನೀಡಿದೆ. ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಸುಮಲತಾ ಪರ ಪ್ರಚಾರ ಮಾಡಲು ಮುಂದಾಗಿದ್ದಾರೆ. ಆದರೆ, ಇದಕ್ಕೂ ಮುನ್ನ ಸುಮಲತಾ ಪರ ಮನೆ ಮಕ್ಕಳಂತೆ ' ಡಿ ಬಾಸ್ ' ದರ್ಶನ್​ ಮತ್ತು 'ರಾಕಿಂಗ್ ಸ್ಟಾರ್' ಯಶ್​ಬೆನ್ನೆಲುಬಾಗಿ ನಿಂತಿದ್ದಾರೆ.

ಮೊದಲ ಭಾಷಣದಲ್ಲೇ ಸುಮಲತಾ ಸಿಕ್ಸರ್, ಎದುರಾಳಿಗಳಿಗೆ ಬೌನ್ಸರ್!ಮೊದಲ ಭಾಷಣದಲ್ಲೇ ಸುಮಲತಾ ಸಿಕ್ಸರ್, ಎದುರಾಳಿಗಳಿಗೆ ಬೌನ್ಸರ್!

ಸುಮಲತಾ ಅವರು ನಾಮಪತ್ರ ಸಲ್ಲಿಸಿ ನಡೆಸಿದ ಪ್ರಚಾರ ಸಭೆಯಲ್ಲಿ ಸ್ಟಾರ್ ನಟರು ಮಾತನಾಡಿದ ರೀತಿಯನ್ನು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ. ದರ್ಶನ್, ಯಶ್ ಹೆಸರೆತ್ತದೆ, ಅವರ ಮಾತನ್ನು ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ನಡುವೆ ಸುಮಲತಾ ಅಂಬರೀಷ್ ಅವರು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಚುನಾವಣಾ ಪ್ರಚಾರಕ್ಕೆ ಬೆಂಬಲ ನೀಡುವಂತೆ ಅಧಿಕೃತವಾಗಿ ಮನವಿ ಮಾಡಿಕೊಳ್ಳಲಿದ್ದಾರೆ.

ಜೋಡೆತ್ತುಗಳು ಎಂದ ಡಿ ಬಾಸ್ ಗೆ ಟಾಂಗ್

ಜೋಡೆತ್ತುಗಳು ಎಂದ ಡಿ ಬಾಸ್ ಗೆ ಟಾಂಗ್

ತಾವಿಬ್ಬರೂ ಉಳುಮೆ ಮಾಡುವ ಜೋಡೆತ್ತುಗಳು ಎಂದು ಅವರಿಬ್ಬರೂ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಅವರು ಹೊಳದಲ್ಲಿ ಉತ್ತು ಉಳುಮೆ ಮಾಡುವ ಜೋಡೆತ್ತುಗಳಲ್ಲ, ರೈತರು ಬೆಳೆದ ಫಸಲಿರುತ್ತದ್ದಲ್ಲ, ಅದನ್ನು ಅರ್ಧ ರಾತ್ರಿ ಕದ್ದು ತಿನ್ನುವ ಕಳ್ಳೆತ್ತುಗಳು ಎಂದು ಟೀಕಿಸಿದ್ದಾರೆ. ಅವರು (ದರ್ಶನ್) ಬಳಸಿರುವ ಪದ ಇದ್ಯಾಲ್ಲ, ಮಂಡ್ಯ ಜಿಲ್ಲೆಯ ತಾಯಂದಿರ ಬಗ್ಗೆ, ಅದೇನಾದರೂ ಮನೆ ಮನೆಗೆ ತಲುಪಿಬಿಟ್ರೆ ಮಂಡ್ಯ ಜಿಲ್ಲೆಗೆ ಕಾಲಿಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಮಂಡ್ಯ ಜಿಲ್ಲೆ ದುರಂತದ ಬಗ್ಗೆ ಪ್ರಸ್ತಾಪ

ಮಂಡ್ಯ ಜಿಲ್ಲೆ ದುರಂತದ ಬಗ್ಗೆ ಪ್ರಸ್ತಾಪ

ಮಂಡ್ಯ ಜಿಲ್ಲೆಯಲ್ಲಿ ಹಲವು ದುರಂತಗಳು ನಡೆದಾಗ ಇವರಿಬ್ಬರೂ ಎಲ್ಲಿದ್ದರು. ಈಗ ಇವರಿಬ್ಬರೂ ಅಮ್ಮನನ್ನು ಉಳಿಸಲು ಬಂದಿದ್ದಾರಲ್ಲ, ಆಗ ನೀರಿನಲ್ಲಿದ್ದ ಶವಗಳನ್ನು ಎತ್ತಲು ಇವರು ಬಂದಿದ್ದರಾ? ಆಗ ನೆರವಾಗಿದ್ದು ಜಿಲ್ಲೆ ಮಗ ಪುಟ್ಟಸ್ವಾಮಿ ಎಂದರು. ಹೀಗೆ ಮಾತನಾಡಿದರೆ ತುಂಬಾ ವಿಷಯಗಳಿವೆ. ನಾಳೆಯ ಸಾರ್ವಜನಿಕ ಸಭೆಯಲ್ಲಿ ಎಲ್ಲವನ್ನೂ ಮಾತನಾಡುತ್ತೇನೆ ಎಂದರು.

ಸಕ್ಕರೆ ನಾಡಲ್ಲಿ ಅಬ್ಬರಿಸಿದ ಯಶ್, ದರ್ಶನ್: ಟೀಕೆಗಳಿಗೆ ಸುಮಲತಾ ಪ್ರತ್ಯುತ್ತರಸಕ್ಕರೆ ನಾಡಲ್ಲಿ ಅಬ್ಬರಿಸಿದ ಯಶ್, ದರ್ಶನ್: ಟೀಕೆಗಳಿಗೆ ಸುಮಲತಾ ಪ್ರತ್ಯುತ್ತರ

ಚಾಲೆಂಜಿಂಗ್ ಸ್ಟಾರ್ ಮನೆಗೆ ಕಲ್ಲು ಹೊಡೆದಿದ್ದು ಯಾರು?

ಚಾಲೆಂಜಿಂಗ್ ಸ್ಟಾರ್ ಮನೆಗೆ ಕಲ್ಲು ಹೊಡೆದಿದ್ದು ಯಾರು?

ಚಾಲೆಂಜಿಂಗ್ ಸ್ಟಾರ್ ಮನೆ ಮೇಲೆ ಕಲ್ಲು ಹೊಡೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ನೋಡಿದ ತಕ್ಷಣ ನಾನು ಆ ಭಾಗದ ಎಸಿಪಿಗೆ ಫೋನ್ ಮಾಡಿ, ಆ ಮನೆಗೆ ಕಲ್ಲು ಹೊಡೆದ ಘಟನೆ ಏನ್ ತೋರಿಸ್ತಾ ಇದ್ದಾರೆ, ಅಲ್ಲಿಗೆ ಭೇಟಿ ಕೊಟ್ಟು, ಆ ಮನೆಯ ಅಥವಾ ರಸ್ತೆಯ ಸಿಸಿಟಿವಿ ಫುಟೇಜ್ ಪಡೆಯಲು ಹೇಳಿದೆ. ಆದ್ರೆ, ಸ್ಟಾರ್ ನಟನ ಮನೆ ಸಿಸಿಟಿವಿ ವ್ಯವಸ್ಥೆ ಆಫ್ ಆಗಿರುವುದು ತಿಳಿದು ಬಂದಿದೆ. ಸಿಸಿಟಿವಿ ಯಾಕೆ ಆಫ್ ಆಗಿದೆ. ಯಾರಾದ್ರೂ ಬೆಳಗ್ಗೆ 3 ಗಂಟೆಗೆ ಕಲ್ಲು ಹೊಡೆಯುತ್ತಾರಾ? ಎಂದು ಪ್ರಶ್ನಿಸಿದರು.

ಸುಮಲತಾ ಪರ ಪ್ರಚಾರ ಮಾಡೋದ್ರಿಂದ 'ಜೋಡೆತ್ತು'ಗಳಿಗಾಗುವ ನಷ್ಟವೇನು?

ಡಿ ಬಾಸ್ ಸಿನಿಮಾದಲ್ಲಿ ಮಾತ್ರ

ಡಿ ಬಾಸ್ ಸಿನಿಮಾದಲ್ಲಿ ಮಾತ್ರ

ಇದೆನೋ ಚಾಲೆಂಜಿಂಗ್ ಸ್ಟಾರಾ? ಯಾವುದಕ್ಕೂ ಹೆದರೋದಿಲ್ಲ ಅಂತಿದರಲ್ಲ ಅಭ್ಯರ್ಥಿ. ಅದೆನೋ ಡಿ ಬಾಸ್ ಡಿಬಾಸ್ ಅಂತೆ, ಸಿನಿಮಾದಲ್ಲಿ ಡಿ ಬಾಸ್, ಜನಗಳ ಮುಂದೆ ಎಂದೂ ಡಿ ಬಾಸ್ ಆಗ್ಲಿಕೆ ಆಗಲ್ಲ. ಈ ನಡುವೆ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರು ಸೋಮವಾರ ಮಧ್ಯಾಹ್ನ 2 ರಿಂದ 3ಗಂಟೆಯೊಳಗೆ ನಾಮಪತ್ರ ಸಲ್ಲಿಸುವ ಕಾರ್ಯಕ್ರಮ ನಿಗದಿಯಾಗಿದೆ. ನಂತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಲಕ್ಷಾಂತರ ಬೆಂಬಲಿಗರು ಸೇರುವ ನಿರೀಕ್ಷೆಯಿದ್ದು, ಜೆಡಿಎಸ್ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಲಿದೆ.

ವಿರೋಧಿಗಳಿಗೆ 'ಮಂಡ್ಯ ವೇದಿಕೆ'ಯಲ್ಲಿ ಸವಾಲ್ ಹಾಕಿದ ದರ್ಶನ್

English summary
Mandya LS Election 2019 : CM Kumaraswamy Lambast D Boss and Rocking Star without taking their names, cinema style dialogue and act won't work in real politics
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X