• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಡ್ಯ ಫಲಿತಾಂಶ LIVE: ಸುಮಲತಾಗೆ ಭಾರಿ ಅಂತರದಿಂದ ಜಯ

|

ಇಡೀ ಇಂಡಿಯಾಕ್ಕೆ ಮಂಡ್ಯ ಎಂದರೆ ಏನು ಎಂಬುದನ್ನು ತೋರಿಸಿದ ಚುನಾವಣೆ ಇದಾಗಿತ್ತು. ದೇಶವೇ ಕಾವೇರಿ ತೀರದ ಜಿಲ್ಲೆಯತ್ತ ಮುಖ ಮಾಡಿ ನೋಡುವಂತಾಗಿತ್ತು. ಲೋಕಸಭೆ ಚುನಾವಣೆ 2019ರ ಫಲಿತಾಂಶದ ದಿನ ಮಂಡ್ಯ ಫುಲ್ ಟ್ರೆಂಡಿಂಗ್ ನಲ್ಲಿತ್ತು. ಸುಮಲತಾ v/s ನಿಖಿಲ್ ಕುಮಾರಸ್ವಾಮಿ ಕದನ ಕುತೂಹಲ ಕೆರಳಿಸಿತ್ತು.

ಗ್ಯಾಲರಿ: ಭರ್ಜರಿ ಜಯದೊಂದಿಗೆ ಸಂಭ್ರಮಾಚರಣೆಯಲ್ಲಿ ಬಿಜೆಪಿ

ರೈತಾಪಿ ವರ್ಗವನ್ನು ಹೊಂದಿರುವ ಒಕ್ಕಲಿಗ ಮತದಾರರೇ ಅಧಿಕವಾಗಿರುವ ಮಂಡ್ಯದಲ್ಲಿ ಕ್ಷೇತ್ರದ ಫಲಿತಾಂಶವನ್ನು ನಿಖರವಾಗಿ ಊಹಿಸುವುದು ಕಷ್ಟಸಾಧ್ಯ ಎಂಬ ಮಾತಿದೆ. ಇದಕ್ಕೆ ತಕ್ಕಂತೆ ಇಂದು ಮಂಡ್ಯದಲ್ಲಿ ಕಂಡು ಬಂದಿದ್ದು ಅಕ್ಷರಶಃ ಹಾವು ಏಣಿಯಾಟ.

ಮಂಡ್ಯದಲ್ಲಿ ನಿಖಿಲ್‌ಗೆ ಸೋಲು: ರಾಜ್ಯ ಸರ್ಕಾರಕ್ಕೆ ಮುಖಭಂಗ

ಚುನಾವಣಾಪೂರ್ವ ಸಮೀಕ್ಷೆ, ಎಕ್ಸಿಟ್ ಪೋಲ್ ಗಳು ಜನರ ನಾಡಿಮಿಡಿತವನ್ನು ಆಧಾರಿಸಿ ಫಲಿತಾಂಶದ ಮುನ್ಸೂಚನೆ ಎಲ್ಲವನ್ನು ಬದಿಗೊತ್ತಿ, ಅಂತಿಮ ಫಲಿತಾಂಶವನ್ನು ಎಲ್ಲರೂ ಎದುರು ನೋಡುತ್ತಿದ್ದರು. ನಿರೀಕ್ಷೆಯನ್ನು ಹುಸಿಗೊಳಿಸದಂತೆ ರೋಚಕವಾಗಿ ಫಲಿತಾಂಶ ಬಂದಿದೆ.

ಇದು ನನ್ನ ಗೆಲುವಲ್ಲ, ಮಂಡ್ಯ ಸ್ವಾಭಿಮಾನದ ಗೆಲುವು: ಸುಮಲತಾ

ಜೆಡಿಎಸ್‌ನ ಎಂಟು ಶಾಸಕರು, ಮೂರು ಸಚಿವರು ಮತ್ತು ಮೂವರು ವಿಧಾನಪರಿಷತ್ ಸದಸ್ಯರು ಇರುವ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸುತ್ತಾರೆ ಎಂದೇ ಭಾವಿಸಲಾಗಿತ್ತು. ಇದು ಮುಖ್ಯವಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಕದನ ಸ್ವಾರಸ್ಯದ ಬಗ್ಗೆ ಮುಂದೆ ಓದಿ..

ಸುಮಲತಾ ಕೈ ಹಿಡಿದ ಮಹಿಳಾ ಮತದಾರರು

ಸುಮಲತಾ ಕೈ ಹಿಡಿದ ಮಹಿಳಾ ಮತದಾರರು

ಕರ್ನಾಟಕದಲ್ಲಿ ಅತಿ ಹೆಚ್ಚು ಒಕ್ಕಲಿಗರನ್ನು ಹೊಂದಿರುವ ಮಂಡ್ಯ ಕ್ಷೇತ್ರ ಸದ್ಯ ಜೆಡಿಎಸ್ ಪಕ್ಷದ ಭದ್ರಕೋಟೆ. ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ, ಕೃಷ್ಣರಾಜಸಾಗರ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

ಹೀಗಾಗಿ, ನಿಖಿಲ್ ಕುಮಾರಸ್ವಾಮಿ ಅವರಿಗೆ ಎಕ್ಸಿಟ್ ಪೋಲ್ ನಿಂದ ಬಲ ಬಂದಿದ್ದರೂ ಮಹಿಳಾ ಮತದಾರರು, ಅಂಬರೀಷ್ ಮೇಲಿನ ಜನರ ಪ್ರೀತಿಯ ಶ್ರೀರಕ್ಷೆ ಸುಮಲತಾ ಅವರನ್ನು ಗೆಲ್ಲಿಸಿ ದೆಹಲಿ ತನಕ ಕರೆದೊಯ್ಯಲಿದೆ ಎಂಬ ಗ್ರೌಂಡ್ ರಿಪೋರ್ಟ್ ಸಿಕ್ಕಿತ್ತು.

ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದ ಸುಮಲತಾ

ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದ ಸುಮಲತಾ

ಕರ್ನಾಟಕದ ಇತಿಹಾಸದಲ್ಲಿಯೇ 52 ವರ್ಷದಲ್ಲಿ ಇದೇ ಮೊದಲ ಬಾರಿಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಹಿಳಾ ಅಭ್ಯರ್ಥಿಯೊಬ್ಬರು ಲೋಕಸಭೆಗೆ ಪ್ರವೇಶಿಸಿದ್ದಾರೆ. ಈ ಮುಂಚೆ ಕೆನರಾ ಕ್ಷೇತ್ರದಿಂದ ಪುರುಷ ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

2019ರ ಫಲಿತಾಂಶ: ಎಣಿಕೆಯಾದ 13,79,210 ಮತಗಳ ಪೈಕಿ ನಿಖಿಲ್ ಗಳಿಸಿದ ಮತ : 577784(41.89%), ಸುಮಲತಾ: 703660(51.02%)

ಇದು ನನ್ನ ಗೆಲುವಲ್ಲ, ಮಂಡ್ಯ ಸ್ವಾಭಿಮಾನದ ಗೆಲುವು: ಸುಮಲತಾ

ಇದು ನನ್ನ ಗೆಲುವಲ್ಲ, ಮಂಡ್ಯ ಸ್ವಾಭಿಮಾನದ ಗೆಲುವು: ಸುಮಲತಾ

'ಇದು ನನ್ನ ಗೆಲುವಲ್ಲ, ಅಂಬರೀಷ್ ಗೆಲುವು, ಮಂಡ್ಯ ಜನರ ಸ್ವಾಭಿಮಾನದ ಗೆಲುವು' ಎಂದು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪ್ರತಿಕ್ರಿಯಿಸಿದ್ದಾರೆ. ಖಾಸಗಿ ಸುದ್ದಿ ವಾಹಿನಿ ಜೊತೆ ಮಾತನಾಡಿ ತಮ್ಮ ಸಂತಸ ಹಂಚಿಕೊಂಡರು.

'ನನಗೆ ಆತ್ಮವಿಶ್ವಾಸ ಇತ್ತು, ನಂಬಿಕೆ ಇತ್ತು, ನನ್ನ ಜೊತೆಗಿದ್ದ ಹಿತೈಶಿಗಳು, ಬೆಂಬಲಿಗರು ಕೂಡಾ ಸರ್ಕಾರ ಎದುರು ಹಾಕಿಕೊಂಡು ಧೈರ್ಯವಾಗಿ ನಿಂತಿದ್ದರು. ನಾನು ಪ್ರತಿಯೊಬ್ಬರಿಗೆ ಧನ್ಯವಾದ ಅರ್ಪಿಸಬೇಕಿದೆ ಎಂದು ಸುಮಲತಾ ಗೆಲುವು ಖಚಿತವಾಗುತ್ತಿದ್ದಂತೆ ಹೇಳಿದರು.

ಮಂಡ್ಯದಲ್ಲಿ 12 ಗಂಟೆಯಿಂದ 4 ಗಂಟೆ ತನಕ ಇದ್ದ ಟೆನ್ಶನ್

ಮಂಡ್ಯದಲ್ಲಿ 12 ಗಂಟೆಯಿಂದ 4 ಗಂಟೆ ತನಕ ಇದ್ದ ಟೆನ್ಶನ್

3.47: ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ 90 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು.

1.48: 14ನೇ ಸುತ್ತಿನ ನಂತರ ಸುಮಲತಾಗೆ 80 ಸಾವಿರ ಮತಗಳ ಅಂತರದಿಂದ ಮುನ್ನಡೆ

1.27: ಸುಮಲತಾಗೆ 55 ಸಾವಿರ ಮತಗಳ ಅಂತರದ ಭಾರಿ ಮುನ್ನಡೆ

12.51: ಸುಮಲತಾಗೆ 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಮುನ್ನಡೆ

12.40: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಇನ್ನೂ 12 ಸುತ್ತಿನ ಮತ ಎಣಿಕೆ ಬಾಕಿ ಇರುವುದರಿಂದ, ಸಂಪೂರ್ಣ ಚಿತ್ರಣವೇ ಬದಲಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.

12.34: ಸುಮಲತಾಗೆ 12 ಸಾವಿರ ಮತಗಳ ಅಂತರದ ಮುನ್ನಡೆ

..

11 ರಿಂದ 12.26 ಸುಮಲತಾಗೆ ಮಹತ್ವದ ತಿರುವು ಕೊಟ್ಟ ಗಳಿಗೆ

11 ರಿಂದ 12.26 ಸುಮಲತಾಗೆ ಮಹತ್ವದ ತಿರುವು ಕೊಟ್ಟ ಗಳಿಗೆ

12.26: ಸುಮಲತಾಗೆ 5053 ಮತಗಳ ಅಂತರದ ಮುನ್ನಡೆ

11.55: ಮತ್ತೆ ಮುನ್ನಡೆ ಪಡೆದ ಸುಮಲತಾ, 2383 ಮತಗಳ ಅಂತರದ ಮುನ್ನಡೆ

11.49: ನಿಖಿಲ್ ಗೆ ಮತ್ತೆ ಮುನ್ನಡೆ, 588 ಮತಗಳಿಂದ ಸುಮಲತಾಗೆ ಹಿನ್ನಡೆ

11.25: ಸುಮಲತಾಗೆ 2616 ಮತಗಳ ಅಂತರದ ಮುನ್ನಡೆ.

11.16: ಮಂಡ್ಯದಲ್ಲಿ ಹಾವು ಏಣಿಯಾಟ, ಒಮ್ಮೆ ಸುಮಲತಾ, ಮತ್ತೊಮ್ಮೆ ನಿಖಿಲ್ ಮುನ್ನಡೆ ಪಡೆದುಕೊಳ್ಳುತ್ತಿದ್ದಾರೆ. ಈಗ ಸುಮಲತಾ 2016 ಮತಗಳ ಅಂತರದಲ್ಲಿ ಮುನ್ನಡೆ ಪಡೆದಿದ್ದಾರೆ.

10 ರಿಂದ 11.11 ರ ತನಕ 500ರೊಳಗೆ ಇಬ್ಬರಿಗೂ ಮುನ್ನಡೆ

10 ರಿಂದ 11.11 ರ ತನಕ 500ರೊಳಗೆ ಇಬ್ಬರಿಗೂ ಮುನ್ನಡೆ

11.11: ಮತ್ತೆ 453 ಮತಗಳಿಂದ ಮುನ್ನಡೆ ಪಡೆದ ನಿಖಿಲ್ ಕುಮಾರ್

10.43: ಸುಮಲತಾಗೆ ಮತ್ತೊಮ್ಮೆ ಮುನ್ನಡೆ 1084 ಮತಗಳ ಅಂತರದ ಮುನ್ನಡೆ

10.39: ಮತ್ತೆ ಮುನ್ನಡೆ ಪಡೆದ ನಿಖಿಲ್, 946 ಮತಗಳ ಅಂತರದ ಮುನ್ನಡೆ

10.29: 1300 ಮತಗಳ ಮುನ್ನಡೆ ಪಡೆದ ಸುಮಲತಾ

10.18: ಸುಮಲತಾಗೆ 525 ಮತಗಳ ಅಂತರದ ಮುನ್ನಡೆ

10.12: ಎರಡನೇ ಸುತ್ತಿನಲ್ಲಿ 130 ಮತಗಳ ಅಂತರದಲ್ಲಿ ಮುನ್ನಡೆ ಪಡೆದ ಸುಮಲತಾ ಅಂಬರೀಷ್.

ಮೇಲುಕೋಟೆಯಲ್ಲಿ ನಿಖಿಲ್ ಪರ ಬಂದ ಫಲಿತಾಂಶ

ಮೇಲುಕೋಟೆಯಲ್ಲಿ ನಿಖಿಲ್ ಪರ ಬಂದ ಫಲಿತಾಂಶ

ಸಮಯ 10.05: ನಿಖಿಲ್ ಗೆ 36,477 ಮತಗಳು ಹಾಗೂ ಸುಮಲತಾಗೆ 34,575 ಮತಗಳು, ನಿಖಿಲ್ ಗೆ 1902 ಮತಗಳ ಅಂತರದ ಮುನ್ನಡೆ

ಸಮಯ 9.45: ನಿಖಿಲ್​ ಕುಮಾರಸ್ವಾಮಿಗೆ 32,183 ಮತ, ಸುಮಲತಾ ಅಂಬರೀಷ್​ಗೆ 30.311 ಮತ, ನಿಖಿಲ್​ಗೆ 1872 ಮತಗಳ ಮುನ್ನಡೆ.

ಸುಮಲತಾಗಳ ಮತ ಗಳಿಕೆ: ಕ್ರಮ ಸಂಖ್ಯೆ: 19- ಸುಮಲತಾ 549, ಕ್ರ.ಸಂ. 21- ಎಂ.ಸುಮಲತಾ 478, ಕ್ರ.ಸಂ. 22 - ಸುಮಲತಾ 182 ಮತ. ಒಟ್ಟು ಈ ಮೂವರು ಪಡೆದಿರುವ ಮತಗಳು 1210.

* ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಪೂರ್ಣ. ನಿಖಿಲ್​ ಕುಮಾರಸ್ವಾಮಿಗೆ 1051 ಮತಗಳ ಮುನ್ನಡೆ.

ಆರಂಭಿಕ ಮುನ್ನಡೆ ಕಾಯ್ದುಕೊಂಡ ಸುಮಲತಾ

ಆರಂಭಿಕ ಮುನ್ನಡೆ ಕಾಯ್ದುಕೊಂಡ ಸುಮಲತಾ

* ಮೊದಲ ಸುತ್ತಿನ ನಂತರ: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ 907 ಮತಗಳ ಅಂತರದ ಮುನ್ನಡೆ.

* ಸಮಯ 9.37: 2082 ಮತಗಳ ಅಂತರ ಮುನ್ನಡೆ ಪಡೆದ ನಿಖಿಲ್ ಕುಮಾರಸ್ವಾಮಿ

8.45: 1050 ಮತಗಳ ಅಂತರವನ್ನು ಕಾಯ್ದುಕೊಂಡ ನಿಖಿಲ್

8.42: 50 ಮತಗಳ ಅಂತರದಲ್ಲಿ ಮುನ್ನಡೆ ಪಡೆದ ನಿಖಿಲ್

8.36: 12 ಮತಗಳ ಅಂತರದಲ್ಲಿ ಮುನ್ನಡೆ ಪಡೆದ ನಿಖಿಲ್ ಕುಮಾರ್

8.26: 50 ಮತಗಳ ಆರಂಭಿಕ ಮುನ್ನಡೆ ಪಡೆದ ಸುಮಲತಾ

ಆರಂಭಿಕ ಮುನ್ನಡೆ : 8ಗಂಟೆಗೆ ಅಂಚೆ ಮತ ಎಣಿಕೆ ಆರಂಭವಾಗಿದ್ದು, ಮೊದಲಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರಿಗೆ ಮುನ್ನಡೆ ಸಿಕ್ಕಿದೆ.

English summary
Mandya Lok Sabha (MP) Election Result 2019: Sumalatha Ambarish vs Nikhil Kumarasway fight decided today. Sumalatha secures victory over Nikhil with 90, 000 votes margin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more