• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಮೀಕ್ಷೆಗಳ ಸಮೀಕ್ಷೆಯಲ್ಲಿ ಸೋತರೂ, ಸುಮಲತಾಗೆ ಸಿಕ್ಕಿದೆ ಗೆಲುವಿನ ಸುಳಿವು

By ಮಲೆನಾಡಿಗ
|

ಚುನಾವಣಾಪೂರ್ವ ಸಮೀಕ್ಷೆ, ಎಕ್ಸಿಟ್ ಪೋಲ್ ಗಳು ಜನರ ನಾಡಿಮಿಡಿತವನ್ನು ಆಧಾರಿಸಿ ಫಲಿತಾಂಶದ ಮುನ್ಸೂಚನೆ ನೀಡಬಹುದು ಅಷ್ಟೇ ಆದರೆ, ಅಂತಿಮ ಫಲಿತಾಂಶ ಬದಲಾಗಲಿದೆ ಎಂದು ಮಂಡ್ಯದ ಜನರ ಅಭಿಪ್ರಾಯ ಬಂದಿದೆ. ರೈತಾಪಿ ವರ್ಗವನ್ನು ಹೊಂದಿರುವ ಒಕ್ಕಲಿಗ ಮತದಾರರೇ ಅಧಿಕವಾಗಿರುವ ಈ ಕ್ಷೇತ್ರದ ಫಲಿತಾಂಶವನ್ನು ನಿಖರವಾಗಿ ಊಹಿಸುವುದು ಕಷ್ಟಸಾಧ್ಯ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಅಸ್ತಿತ್ವದ ಕಳಕೊಂಡ ಹಿಂದಿನ ಕನಕಪುರ ಕ್ಷೇತ್ರದಲ್ಲಿದ್ದ ಮಳವಳ್ಳಿ ಈಗ ಮಂಡ್ಯ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಒಕ್ಕಲಿಗರನ್ನು ಹೊಂದಿರುವ ಮಂಡ್ಯ ಕ್ಷೇತ್ರ ಸದ್ಯ ಜೆಡಿಎಸ್ ಪಕ್ಷದ ಭದ್ರಕೋಟೆ. ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ, ಕೃಷ್ಣರಾಜಸಾಗರ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

ಚಿಂತಾಮಣಿ ಸಮೀಕ್ಷೆ : ಸುಮಲತಾಗೆ ಸೋಲು, ಬಿಜೆಪಿಗೆ 22 ಸ್ಥಾನ

'ಗಂಡ ಸತ್ತು ಒಂದೆರಡು ತಿಂಗಳಾಗಿಲ್ಲ, ಅಷ್ಟರಲ್ಲೇ ರಾಜಕೀಯಕ್ಕೆ ಬಂದಿದ್ದಾರೆ, ಇದೆಲ್ಲ ಬೇಕಿತ್ತಾ' ಎಂಬ ಹೇಳಿಕೆಯನ್ನು ಸಚಿವ ಎಚ್ ಡಿ ರೇವಣ್ಣ ನೀಡಿದ್ದು, ಲೋಕಸಭೆ ಚುನಾವಣೆ ಅಖಾಡದಲ್ಲಿ ಭಾರಿ ಪರಿಣಾಮ ಬೀರುವ ಸಾಧ್ಯತೆಯಿದೆ. 8.3 ಲಕ್ಷಕ್ಕೂ ಅಧಿಕ ಮಹಿಳಾ ಮತದಾರರ ಪೈಕಿ ಅನೇಕ ಮಂದಿ ಸುಮಲತಾ ಪರ ನಿಲ್ಲಲು ಇಂಥ ಹೇಳಿಕೆಗಳೆ ಸಾಕಾಯಿತು.

ಸಮೀಕ್ಷೆಗಳ ಸಮೀಕ್ಷೆಯಲ್ಲಿ ಸೋತರೂ

ಸಮೀಕ್ಷೆಗಳ ಸಮೀಕ್ಷೆಯಲ್ಲಿ ಸೋತರೂ

ಹೀಗಾಗಿ, ನಿಖಿಲ್ ಕುಮಾರಸ್ವಾಮಿ ಅವರಿಗೆ ಎಕ್ಸಿಟ್ ಪೋಲ್ ನಿಂದ ಬಲ ಬಂದಿದ್ದರೂ ಮಹಿಳಾ ಮತದಾರರು, ಅಂಬರೀಷ್ ಮೇಲಿನ ಜನರ ಪ್ರೀತಿಯ ಶೀರಕ್ಷೆ ಸುಮಲತಾ ಅವರನ್ನು ಗೆಲ್ಲಿಸಿ ದೆಹಲಿ ತನಕ ಕರೆದೊಯ್ಯಲಿದೆ ಎಂಬ ಗ್ರೌಂಡ್ ರಿಪೋರ್ಟ್ ಸಿಕ್ಕಿದೆ.

ಮಂಡ್ಯದಲ್ಲಿ ನಿಖಿಲ್, ಸುಮಲತಾ ಗೆಲುವಿಗೆ ಪೂಜೆ, ಜೋರಾದ ಬೆಟ್ಟಿಂಗ್ ದಂಧೆ

ಸುಮಲತಾ ಗೆಲುವು ಕಷ್ಟ

ಸುಮಲತಾ ಗೆಲುವು ಕಷ್ಟ

ಕರ್ನಾಟಕದ 28 ಕ್ಷೇತ್ರಗಳ ಪೈಕಿ ಬಿಜೆಪಿ 19 ಸ್ಥಾನ ಗಳಿಸಲಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾಗೆ ಗೆಲುವು ಸಿಗಲಿದೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ 9 ಸ್ಥಾನ ಸಿಗಲಿದೆ ಎಂದು ಸಮೀಕ್ಷೆ ಹೇಳಿತ್ತು. ಆದರೆ, ಈಗ ಬಿಜೆಪಿ 22 ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ 6 ಸ್ಥಾನ ಗಳಿಸಲಿದೆ ಎಂದು ಮೇ 19ರಂದು ಎಕ್ಸಿಟ್ ಪೋಲ್ ವರದಿಯಲ್ಲಿ ಬಂದಿದೆ. ಬಿಜೆಪಿಗೆ 21 ಹಾಗೂ ಮಿತ್ರಪಕ್ಷಕ್ಕೆ 1 ಎಂದು ವರದಿ ನೀಡಿದೆ. ಪಕ್ಷೇತರ. ಇತರೆ 0 ಎಂದು ಹೇಳಿರುವುದರಿಂದ ಸುಮಲತಾ ಗೆಲುವು ಕಷ್ಟ ಎಂದು ಅಭಿಪ್ರಾಯಬಂದಿದೆ. ಆದರೆ, ಕೊನೆ ಕ್ಷಣದಲ್ಲಿ ಈ ವರದಿ ಪೂರ್ತಿ ಬದಲಾಗಬಹುದು ಎಂಬ ಸುದ್ದಿ ಬಂದಿದೆ.

ಮಂಡ್ಯ: ಬೆಟ್ಟಿಂಗ್ ಕಟ್ಟುವವರೂ ಹೆಚ್ಚಾದ್ರು, ಆಯ್ಕೆಯೂ ಬೇರೆಯಾಯ್ತು

ರಿಪಬ್ಲಿಕ್ ಟಿವಿ ಸಿ ವೋಟರ್

ರಿಪಬ್ಲಿಕ್ ಟಿವಿ ಸಿ ವೋಟರ್

ರಿಪಬ್ಲಿಕ್ ಟಿವಿ ಸಿ ವೋಟರ್, ಜನ್ ಕಿ ಬಾತ್, ಎಬಿಪಿ ನ್ಯೂಸ್ ನೀಲ್ಸನ್, ಇಂಡಿಯಾ ಟುಡೇ ಅಕ್ಸಿಸ್ ಹಾಗೂ ಆಜ್ ತಕ್ ಆಕ್ಸಿಸ್ ಮೈ ಇಂಡಿಯಾದಲ್ಲಿ ಸುಮಲತಾಗೆ ಗೆಲುವು ಎಂದು ಹೇಳಲಾಗಿತ್ತು. ಚಾಣಕ್ಯ, ಟೈಮ್ಸ್ ನೌ, ನ್ಯೂಸ್ 18 ಐಪಿಎಸ್ಒಎಸ್ ಹಾಗೂ ಸಿಎನ್ ಎಕ್ಸ್ ವರದಿಯಲ್ಲಿ ನಿಖಿಲ್ ಗೆ ಗೆಲುವು ಎನ್ನಲಾಗಿತ್ತು.

ಫಲಿತಾಂಶ ನನ್ನ ಪರವಾಗಿರಲಿದೆ; ನಿಖಿಲ್ ಕುಮಾರಸ್ವಾಮಿ

ಮಂಡ್ಯದಲ್ಲಿ ಯಾವ ಅಂಶ ಪ್ರಮುಖವಾಯಿತು

ಮಂಡ್ಯದಲ್ಲಿ ಯಾವ ಅಂಶ ಪ್ರಮುಖವಾಯಿತು

ಮಂಡ್ಯದಲ್ಲಿ ಆಡಳಿತರೂಢ ಪಕ್ಷದ ಒಮ್ಮತದ ಅಭ್ಯರ್ಥಿ, ಮುಖ್ಯಮಂತ್ರಿಗಳ ಪುತ್ರನಿಗೆ ಸೋಲುಂಟಾಗಲು ಮೈತ್ರಿ ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಮುಖ್ಯ ಕಾರಣವಾಗಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇದೆಲ್ಲವೂ ಕೊನೆ ಕ್ಷಣದಲ್ಲಿ ಬದಲಾವಣೆ ಕಂಡಿದ್ದು, ಅತ್ಯಂತ ಕಡಿಮೆ ಅಂತರದಿಂದ ನಿಖಿಲ್ ಪರವಾಗಿ ಫಲಿತಾಂಶ ತಿರುಗಲಿದೆ ಎಂದು ಸಮೀಕ್ಷೆಗಳ ಸಮೀಕ್ಷೆ ಹೇಳಿದೆ. ಪುಟ್ಟರಾಜು ಪ್ರತಿನಿಧಿಸಿರುವ ಮೇಲುಕೋಟೆ ಕ್ಷೇತ್ರವು ನಿರ್ಣಾಯಕವಾಗಲಿದೆ. ಸೆಂಟಿಮೆಂಟ್ ಗೆ ಮತ ಬೀಳುವುದಿದ್ದರೆ ಇಷ್ಟು ಹೊತ್ತಿಗೆ ದರ್ಶನ್ ಪುಟ್ಟಣ್ಣಯ್ಯ ಅವರು ಶಾಸಕರಾಗಿರುತ್ತಿದ್ದರು ಜೆಡಿಎಸ್ ಬೆಂಬಲಿತರು ವಾದ ಮಂಡಿಸಿದ್ದಾರೆ.

ಲೋಕಸಭೆ ಚುನಾವಣೆ 2019: ಸಕ್ಕರೆ ನಾಡು ಮಂಡ್ಯ ಕ್ಷೇತ್ರದ ಪರಿಚಯ

ಪ್ರಚಾರದ ವೈಖರಿ, ಭಿನ್ನಮತದ ಲಾಭ

ಪ್ರಚಾರದ ವೈಖರಿ, ಭಿನ್ನಮತದ ಲಾಭ

ಸ್ಟಾರ್ ನಟರಾದ ದರ್ಶನ್ ತೂಗುದೀಪ ಹಾಗೂ ಯಶ್ ಅವರು ಸುಮಲತಾ ಪರ ಪ್ರಚಾರ ಕೈಗೊಂಡಿದ್ದು, ಬಿಜೆಪಿ ನಾಯಕರ ಬೆಂಬಲ ಒಂದು ಹಂತಕ್ಕೆ ಸುಮಲತಾ ಅವರಿಗೆ ಗೆಲುವಿನ ಸನಿಹಕ್ಕೆ ತಂದಿದೆ. ಆದರೆ, ಎದುರಾಳಿ ನಿಖಿಲ್ ಅವರ ಪರ ಸ್ಥಳೀಯ ಕಾಂಗ್ರೆಸ್ಸಿಗರು ಪ್ರಚಾರಕ್ಕೆ ಬಾರದೆ ಕೈ ಕೊಟ್ಟಿದ್ದು, ಮಹತ್ವ ಪಡೆದಿದೆ. ಸ್ಥಳೀಯ ನಾಯಕರ ಅಣತಿಯಂತೆ ಕಾರ್ಯಕರ್ತರು, ಕಾರ್ಯಕರ್ತರ ನಂಬಿ ಮತದಾರರು ತಮ್ಮ ಹಕ್ಕು ಚಲಾಯಿಸುವುದು ಈ ಹಿಂದಿನಿಂದ ನಡೆದು ಬಂದಿದೆ. ಮಂಡ್ಯ ಮತದಾರರು ಈ ಬಾರಿ ಸುಮಲತಾರನ್ನು ಗೆಲ್ಲಿಸುವುದಕ್ಕಿಂತ ಸ್ಥಳೀಯವಾಗಿ ರಾಜಕೀಯ ಅಸ್ತಿತ್ವ ಕಂಡುಕೊಳ್ಳುವುದು ಮುಖ್ಯವಾಗಿತ್ತು. ಈ ನಿಟ್ಟಿನಲ್ಲಿ ನಿಖಿಲ್ ಅವರಿಗೆ ಸೋಲುಂಟಾಗುವ ಲಕ್ಷಣಗಳಿವೆ.

English summary
Mandya results 2019: Political analyzers hint at the BJP supported candidate A Sumalatha has edge over Nikhil and defeated him in narrow margin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more