• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಪಚುನಾವಣೆಯಲ್ಲಿ ಜನಪ್ರತಿನಿಧಿಗಳಿಗೆ ಪಾಠ ಕಲಿಸಲು ಮತದಾರರು ಎಸೆದ ದಾಳವೇನು?

|
   Mandya Lok Sabha By-elections 2018 : ಜನಪ್ರತಿನಿಧಿಗಳಿಗೆ ಬುದ್ದಿ ಕಲಿಸಲು ಮತದಾರರು ಎಸೆದ ದಾಳ ಇದು

   ಮಂಡ್ಯ, ನವೆಂಬರ್.02:ಮಂಡ್ಯ ಲೋಕಸಭಾ ಉಪಚುನಾವಣೆಯನ್ನು ರಾಜಕೀಯ ಪಕ್ಷಗಳು ಪ್ರತಿಷ್ಠೆಯಾಗಿ ಪರಿಗಣಿಸಿ ಗೆಲುವಿಗಾಗಿ ಕಸರತ್ತು ನಡೆಸುತ್ತಿದ್ದರೆ ಮತದಾರ ಮಾತ್ರ ಇನ್ನೂ ಕೂಡ ಗುಟ್ಟು ಬಿಟ್ಟುಕೊಡದೆ ತೆಪ್ಪಗಿದ್ದಾನೆ. ರಾಜಕಾರಣಿಗಳು ಏನೇ ಮಾಡಿದರೂ ಅಂತಿಮ ತೀರ್ಮಾನ ಮಾಡುವವನು ಮತದಾರ ಎಂಬುದಂತು ಸತ್ಯ. ಇದೀಗ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ.

   ದೀಪಾವಳಿ ವಿಶೇಷ ಪುರವಣಿ

   ಇದೀಗ ಮನೆ,ಮನೆ ಪ್ರಚಾರ ಅಲ್ಲಲ್ಲಿ ನಡೆಯುತ್ತಿದ್ದರೆ, ಕೊನೆಗಳಿಗೆಯಲ್ಲಿ ಮತದಾರರನ್ನು ಹೇಗೆ ಸೆಳೆಯಬಹುದು ಎಂಬುದರ ಲೆಕ್ಕಾಚಾರವನ್ನು ರಾಜಕೀಯ ಪಕ್ಷಗಳ ಮುಖಂಡರು ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಇದೇ ತಕ್ಕ ಸಮಯ ಜನಪ್ರತಿನಿಧಿಗಳಿಗೆ ಪಾಠ ಕಲಿಸಲು ಎಂದರಿತ ಮತದಾರರು ತಮ್ಮ ದಾಳವನ್ನು ಎಸೆಯುತ್ತಿದ್ದಾರೆ. ಇದುವರೆಗೆ ತಮ್ಮ ಊರುಗಳತ್ತ ಬಾರದ ರಾಜಕಾರಣಿಗಳು ಇದೀಗ ಭರವಸೆಯ ಗಂಟು ಹಿಡಿದುಕೊಂಡು ಮನೆಬಾಗಿಲು ತಟ್ಟುತ್ತಿದ್ದಾರೆ.

   ಮಂಡ್ಯ ಚುನಾವಣೆ : ಕಣದಿಂದ ಹಿಂದೆ ಸರಿಯಲಿದ್ದಾರಾ ಡಾ.ಸಿದ್ದರಾಮಯ್ಯ?

   ಜತೆಗೆ ಒಂದಿಷ್ಟು ಅಮಿಷವೊಡ್ಡಿ ಮತ ಸೆಳೆಯುವ ಯತ್ನವನ್ನು ತೆರೆಮರೆಯಲ್ಲಿ ಮಾಡುತ್ತಿದ್ದಾರೆ. ಮತದಾರರಿಂದ ಮತವನ್ನು ಯಾವ ಮಾರ್ಗದಲ್ಲಿ ಸೆಳೆಯಬಹುದು? ತಾವು ಯಾವ ತಂತ್ರ ಬಳಸಿದರೆ ಮತ ಪಡೆಯಬಹದು? ಹೀಗೆ ಹತ್ತಾರು ಲೆಕ್ಕಾಚಾರಗಳನ್ನು ಹಾಕುತ್ತಿರುವ ಕೆಲವು ನಾಯಕರು ಮತದಾರರನ್ನು ಮರಳು ಮಾಡಿ ತಮ್ಮತ್ತ ಮತ ಹಾಕಿಸಿಕೊಳ್ಳಲು ಏನೆಲ್ಲ ಮಾಡಬಹುದು ಅದೆಲ್ಲವನ್ನು ಮಾಡುತ್ತಿದ್ದಾರೆ.

   ಅಭ್ಯರ್ಥಿಗಳಿಗೆ ನುಂಗಲಾರದ ತುತ್ತು

   ಅಭ್ಯರ್ಥಿಗಳಿಗೆ ನುಂಗಲಾರದ ತುತ್ತು

   ಕೆಲವು ಮತದಾರರು ಮನೆ ಬಾಗಿಲಿಗೆ ಬಂದ ಅಭ್ಯರ್ಥಿಗಳನ್ನು, ಅವರ ಬೆಂಬಲಿಗರಿಗೆ ಏನೂ ಮಾತನಾಡದೆ ಮತ ನೀಡುತ್ತೇವೆ ಎಂದು ಒಪ್ಪಿಕೊಂಡರೆ ಇನ್ನು ಕೆಲವರು ತಮ್ಮ ಸಮಸ್ಯೆಗಳನ್ನು ಅವರ ಮುಂದೆ ಬಿಚ್ಚಿಡುತ್ತಾ ಬರೀ ಚುನಾವಣೆ ಬಂದಾಗ ಮಾತ್ರ ನಮ್ಮ ನೆನಪಾಗುತ್ತೆ ಮತ್ತೆ ಇತ್ತ ಮುಖ ಹಾಕುವುದಿಲ್ಲ ಎಂಬ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗ ಚುನಾವಣೆಯ ಸಮಯ ಆದುದರಿಂದ ಮತದಾರರು ಏನೇ ಆಕ್ರೋಶದ ಮಾತುಗಳನ್ನಾಡಿದರೂ ಎಲ್ಲವನ್ನೂ ನಗುನಗುತ್ತಲೇ ಆಯಿತು ಮಾಡೋಣ ಎನ್ನುತ್ತಾ ಜಾಗ ಖಾಲಿ ಮಾಡುತ್ತಿದ್ದಾರೆ.

   ಇದೆಲ್ಲದರ ನಡುವೆ ಕೆಲವು ಗ್ರಾಮಗಳ ಮತದಾರರು ತಮ್ಮ ಗ್ರಾಮಕ್ಕೆ ಯಾವುದೇ ಸೌಲಭ್ಯವಾಗಿಲ್ಲ ಎನ್ನುತ್ತಾ ಚುನಾವಣೆಯನ್ನು ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿರುವುದು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

   ಅಪ್ಪ-ಅಮ್ಮ ನನಗೆ ಗೌಡ ಎಂದು ಹೆಸರಿಟ್ಟಿದ್ದೇ ತಪ್ಪಾಗಿದೆ: ದೇವೇಗೌಡ

   ನೀರಿನಂತೆ ಖರ್ಚಾಗುತ್ತಿದೆ

   ನೀರಿನಂತೆ ಖರ್ಚಾಗುತ್ತಿದೆ

   ಹಾಗೆ ನೋಡಿದರೆ ಮಂಡ್ಯದಲ್ಲಿ ಹೆಚ್ಚಿನವರು ರೈತರಾಗಿದ್ದು, ಈ ರೈತರು ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವುದು, ಮಾಡಿಕೊಳ್ಳುತ್ತಿರುವುದು ಇತ್ತೀಚೆಗೆ ಕಂಡು ಬರುತ್ತಿರುವ ವಿದ್ಯಮಾನ. ಇದುವರೆಗೆ ಎಲ್ಲ ರಾಜಕೀಯ ಪಕ್ಷಗಳು ರೈತರ ಉದ್ದಾರದ ಬಗ್ಗೆ ಮಾತನಾಡುತ್ತಲೇ ಗೆದ್ದಿದ್ದು, ಗೆದ್ದ ಬಳಿಕ ಮರೆತಿರುವುದು ಗೊತ್ತಿರುವ ವಿಚಾರವೇ.

   ಇನ್ನು ಕೆಲವೇ ತಿಂಗಳ ಅವಧಿಗಾಗಿ ಲೋಕಸಭೆಯ ಉಪಚುನಾವಣೆ ನಡೆಯುತ್ತಿದ್ದು, ಇದು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟ ಕಾರಣದಿಂದಾಗಿ ಕೋಟ್ಯಂತರ ಹಣ ನೀರಿನಂತೆ ಖರ್ಚಾಗುತ್ತಿದೆ.

   ಮಂಡ್ಯದಲ್ಲಿ ಕೈ-ತೆನೆಗೆ ಹಿನ್ನಡೆ, ಚುನಾವಣೆ ಬಹಿಷ್ಕಾರ ಹಾಕಿದ ಕುರುಬರು

   ಸಂಕಷ್ಟಗಳನ್ನು ಹೇಳಿಕೊಂಡ ಜನತೆ

   ಸಂಕಷ್ಟಗಳನ್ನು ಹೇಳಿಕೊಂಡ ಜನತೆ

   ದೇಶ, ಜಿಲ್ಲೆಗಳ ಬಗ್ಗೆ ಅಭಿಮಾನವಿದ್ದಿದ್ದರೆ ಇಷ್ಟೊಂದು ಹಣ ಖರ್ಚು ಮಾಡುವ ಪ್ರಮೇಯವೇ ಬರುತ್ತಿರಲಿಲ್ಲ. ಆ ಹಣದಲ್ಲಿ ಕ್ಷೇತ್ರದ ಹಲವು ಕುಗ್ರಾಮಗಳಾಗಿ ಉಳಿದು ಹೋದ ಗ್ರಾಮಗಳನ್ನು ಅಭಿವೃದ್ಧಿಗೊಳಿಸಬಹುದಿತ್ತೇನೋ? ಆದರೆ ಅದೆಲ್ಲವೂ ಕನಸಿನ ಮಾತಷ್ಟೆ. ಕ್ಷೇತ್ರದಲ್ಲಿ ಹಲವು ಮತದಾರರು ಮತ ಕೇಳಲು ಬಂದ ಅಭ್ಯರ್ಥಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ತಾವು ಸೌಲಭ್ಯವಿಲ್ಲದೆ ಅನುಭವಿಸುತ್ತಿರುವ ಸಂಕಷ್ಟಗಳನ್ನು ಹೇಳಿಕೊಂಡಿದ್ದಾರೆ.

   ಚುನಾವಣೆ ಬಹಿಷ್ಕಾರದ ಎಚ್ಚರಿಕೆ

   ಚುನಾವಣೆ ಬಹಿಷ್ಕಾರದ ಎಚ್ಚರಿಕೆ

   ಇನ್ನು ಕೆಲವರು ಅಭಿವೃದ್ಧಿಗಾಗಿ ಚುನಾವಣೆಯ ಬಹಿಷ್ಕಾರದ ಮಾತನಾಡಿದರೆ, ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬಳ್ಳೇಕೆರೆ ಗ್ರಾಮದ ಗ್ರಾಮಸ್ಥರು ಸುಮಾರು 7ಕಿ.ಮೀ. ದೂರದಲ್ಲಿರುವ ಶ್ಯಾರಹಳ್ಳಿ ಗ್ರಾಮದ ಮತಗಟ್ಟೆಗೆ ಹೋಗಿ ಮತಚಲಾಯಿಸಬೇಕಾಗಿದ್ದು, ಅಷ್ಟು ದೂರ ಹೋಗಿ ಮತ ಚಲಾಯಿಸಲು ಸಾಧ್ಯವಿಲ್ಲ. ತಮ್ಮ ಊರಿನಲ್ಲಿ ಮತಗಟ್ಟೆ ಸ್ಥಾಪಿಸಿ ಇಲ್ಲದಿದ್ದರೆ ಚುನಾವಣೆ ಬಹಿಷ್ಕರಿಸುತ್ತೇವೆ ಎಂಬ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಬಳ್ಳೇಕೆರೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಧರಣಿ ನಡೆಸಿದ ಗ್ರಾಮಸ್ಥರು ನಮ್ಮ ಗ್ರಾಮದಲ್ಲಿ ಸುಮಾರು 380 ಮತದಾರರಿದ್ದು, ಗ್ರಾಮದಿಂದ ಸುಮಾರು 7 ಕಿ.ಮೀ. ದೂರದಲ್ಲಿರುವ ಶ್ಯಾರಹಳ್ಳಿ ಗ್ರಾಮಕ್ಕೆ ಹೋಗಿ ಮತದಾನ ಮಾಡಲು ವಯೋವೃದ್ದರು ಹಾಗೂ ಅಂಗವಿಕಲರಿಗೆ ಸಾಧ್ಯವಿಲ್ಲ. ಆದ್ದರಿಂದ ಚುನಾವಣಾಧಿಕಾರಿಗಳು ನಮ್ಮ ಗ್ರಾಮದಲ್ಲಿ ಮತಗಟ್ಟೆ ಸ್ಥಾಪನೆ ಮಾಡಿದರೆ ಮಾತ್ರ ಲೋಕಸಭಾ ಉಪಚುನಾವಣೆಯಲ್ಲಿ ಮತ ಚಲಾವಣೆ ಮಾಡುತ್ತೇವೆ ಇಲ್ಲದಿದ್ದರೆ ಮತದಾನ ಬಹಿಷ್ಕಾರ ಮಾಡುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ನ.3 ಮತದಾನದ ದಿನವಾಗಿದ್ದು ಮತದಾರರು ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Mandya Lok Sabha by-election is a prestige of political parties. What is the opinion of the voters? Here's a detailed article

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more