ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದ ಜನರನ್ನು ಮೂರ್ಖರು ಅಂದುಕೊಂಡಿರಾ? ಎಚ್‌ಡಿಕೆಗೆ ಕೈ ಮುಖಂಡನ ಪ್ರಶ್ನೆ

|
Google Oneindia Kannada News

Recommended Video

ಮೂರಿ ಕಾಸಿನ ಪ್ರಯೋಜನವಿಲ್ಲದ ಗ್ರಾಮವಾಸ್ತವ್ಯ ಎಂದ ಕೈ ನಾಯಕ | Oneindia Kannada

ಮಂಡ್ಯ, ಜೂನ್ 11: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಮಂಡ್ಯದ ಕಾಂಗ್ರೆಸ್ ನಾಯಕ ಕೆ.ಬಿ. ಚಂದ್ರಶೇಖರ್ ಟೀಕಿಸಿದ್ದಾರೆ.

ಮಂಡ್ಯದ ಕೆಆರ್ ಪೇಟೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶೋಕಿಗಾಗಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಚೆಲುವರಾಯಸ್ವಾಮಿ ಬಿಜೆಪಿ ಸೇರೋದು ಪಕ್ಕಾ: ಸುರೇಶ್ ಗೌಡ ಹೇಳಿಕೆ ಚೆಲುವರಾಯಸ್ವಾಮಿ ಬಿಜೆಪಿ ಸೇರೋದು ಪಕ್ಕಾ: ಸುರೇಶ್ ಗೌಡ ಹೇಳಿಕೆ

ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದಿಂದ ಯಾವುದೇ ಪ್ರಯೋಜನವಿಲ್ಲ. ಈ ಹಿಂದೆ ನಮ್ಮ ತಾಲ್ಲೂಕಿನಲ್ಲಿಯೂ ಅವರು ಗ್ರಾಮ ವಾಸ್ತವ್ಯ ಮಾಡಿದ್ದರು. ಅವರು ಗ್ರಾಮ ವಾಸ್ತವ್ಯ ಮಾಡಿದ ಹಳ್ಳಿಗಳ ಸ್ಥಿತಿ ಏನಾಗಿದೆ? ಅವರು ಪ್ರಯೋಜನಕ್ಕೆ ಬಾರದ ಗ್ರಾಮ ವಾಸ್ತವ್ಯವನ್ನು ಬಿಟ್ಟು ಕೆಲಸದತ್ತ ಗಮನಕೊಡಲಿ.

mandya kb chandrashekhar criticise HD Kumaraswamy grama vastavya

ಗ್ರಾಮ ವಾಸ್ತವ್ಯ ಮಾಡಿದಾಗ ಅದರಲ್ಲಿ ಆ ಭಾಗದ ಜೆಡಿಎಸ್ ಪಕ್ಷದ ಮುಖಂಡರೇ ತುಂಬಿಕೊಳ್ಳುತ್ತಾರೆ. ಈ ಕಾರ್ಯಕ್ರಮದಿಂದ ಮೂರು ಕಾಸಿನ ಪ್ರಯೋಜನವಾಗುವಿಲ್ಲ ಎಂದು ಕಿಡಿಕಾರಿದರು.

ಮಂಡ್ಯ ಜಿಲ್ಲೆಗೆ 5 ಸಾವಿರ ಕೋಟಿ ರೂಪಾಯಿ ಕೊಟ್ಟಿದ್ದೇವೆ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಅದನ್ನು ಯಾವ ಬಜೆಟ್‌ನಲ್ಲಿ ತೋರಿಸಿದ್ದೀರಿ ಹೇಳಿ ಎಂದು ಪ್ರಶ್ನಿಸಿದರು.

ಓಟು ಅವರಿಗೆ, ಕೆಲಸ ನಮ್ಮಿಂದಲಾ?; ಜನರ ಮೇಲೆ ಹರಿಹಾಯ್ದ ಸಚಿವ ತಮ್ಮಣ್ಣ ಓಟು ಅವರಿಗೆ, ಕೆಲಸ ನಮ್ಮಿಂದಲಾ?; ಜನರ ಮೇಲೆ ಹರಿಹಾಯ್ದ ಸಚಿವ ತಮ್ಮಣ್ಣ

ಮಂಡ್ಯ ಜಿಲ್ಲೆಯ ಜನರನ್ನು ಮೂರ್ಖರು ಅಂದುಕೊಂಡಿದ್ದೀರಾ? ಸುಮ್ಮನೆ ನಮ್ಮ ಬಳಿ ಬಂದು ಹಣ ಕೊಟ್ಟಿದ್ದೇವೆಂದು ನಾಟಕ ಮಾಡುವುದು ಸಾಕು ಎಂದು ಹೇಳಿದರು.

ನಿಮಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಶೀರ್ವಾದ ಮಾಡಿದ್ದಾರೆ. ಇಂಥದ್ದನ್ನು ಬಿಟ್ಟು ಒಳ್ಳೆಯ ಮಾರ್ಗದಲ್ಲಿ ಜನರ ಸೇವೆ ಮಾಡಲಿ.

English summary
Mandya Congress leader KB Chandrashekhar criticises Chief Minister HD Kumaraswamy Grama Vastavya program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X