ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ಬಸ್ ದುರಂತ: ಸಂತ್ರಸ್ತರ ಕುಟುಂಬಕ್ಕೆ 1.5 ಕೋಟಿ ಬಿಡುಗಡೆಗೆ ಸಿದ್ಧತೆ

|
Google Oneindia Kannada News

ಮಂಡ್ಯ, ನವೆಂಬರ್ 26: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿಕ ಕನಗನಮರಡಿಯಲ್ಲಿ ಶನಿವಾರ ಭೀಕರ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಲು ಒಟ್ಟು 1.5 ಕೋಟಿ ರೂ. ಬಿಡುಗಡೆಗೆ ಸಿದ್ಧತೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಬಸ್ ದುರಂತದಲ್ಲಿ ಮಕ್ಕಳು ಸೇರಿದಂತೆ ಒಟ್ಟು 30 ಮಂದಿ ಸಾವಿಗೀಡಾಗಿದ್ದರು. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿತ್ತು.

ಕನಗನಮರಡಿ ಬಸ್ ದುರಂತ: ಚಾಲಕನ ವಿರುದ್ಧ ಎಫ್‌ಐಆರ್‌ ದಾಖಲುಕನಗನಮರಡಿ ಬಸ್ ದುರಂತ: ಚಾಲಕನ ವಿರುದ್ಧ ಎಫ್‌ಐಆರ್‌ ದಾಖಲು

ಮೃತರ ಕುಟುಂಬಗಳಿಗೆ ಶೀಘ್ರವೇ ಪರಿಹಾರ ಬಿಡುಗಡೆ ಮಾಡಲು ಸಿದ್ಧತೆ ಕೈಗೊಳ್ಳಲಾಗಿದೆ. ಇದಕ್ಕಾಗಿ ಸರ್ಕಾರ 1.50 ಕೋಟಿ ಬಿಡುಗಡೆ ಮಾಡುತ್ತಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

mandya kanaganamaradi bus accident hd kumaraswamy 1.50 crores compensation

ಖಾಸಗಿ ಬಸ್ ಮಾತ್ರ ಓಡಾಡುತ್ತಿದ್ದ ಈ ಮಾರ್ಗದಲ್ಲಿ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಲು ಸರ್ಕಾರ ವ್ಯವಸ್ಥೆ ಮಾಡಿದೆ.

ಅಪಘಾತ ಸಂಭವಿಸಿದ ಮಾರ್ಗದಲ್ಲಿ ಜನರ ಓಡಾಟಕ್ಕಾಗಿ ಎರಡು ಕೆಎಸ್ ಆರ್ ಟಿಸಿ ಬಸ್‌ಗಳ ಸಂಚಾರ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಮಂಡ್ಯ ಅಪಘಾತ ನೋಡಿ ನೊಂದು ಜೀವ ಬಿಟ್ಟರಾ ಅಂಬರೀಶಣ್ಣಾ?ಮಂಡ್ಯ ಅಪಘಾತ ನೋಡಿ ನೊಂದು ಜೀವ ಬಿಟ್ಟರಾ ಅಂಬರೀಶಣ್ಣಾ?

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸೂಚನೆಯಂತೆ ಸಾರಿಗೆ ಇಲಾಖೆ ಎರಡು ಬಸ್‌ಗಳ ಸೌಕರ್ಯವನ್ನು ಒದಗಿಸಲಿದೆ.

ಮಂಡ್ಯ ಬಸ್ ಅಪಘಾತ: ದುರಂತದಲ್ಲಿ ಮೃತಪಟ್ಟವರ ಹೆಸರುಗಳುಮಂಡ್ಯ ಬಸ್ ಅಪಘಾತ: ದುರಂತದಲ್ಲಿ ಮೃತಪಟ್ಟವರ ಹೆಸರುಗಳು

ಬಸ್ ದುರಂತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದ್ದು, ಬಸ್ ಚಾಲಕ ಶಿವಣ್ಣ ವಿರುದ್ಧ ಪೊಲೀಸರು ಐಪಿಸಿ 279, 337, 304(ಎ) ಸೆಕ್ಷನ್‍ಗಳಡಿ ಹಾಗೂ ಭಾರತೀಯ ವಾಹನ ಕಾಯ್ದೆ 187ಕಲಂಗಳಡಿ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

English summary
Chief Minister HD Kumaraswamy announced that the government is preparing to release 1.50 crore Rs. as compensation for the victims of Mandya's Kanaganamaradi bus accident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X