ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಮಲತಾ ಜಾತಿ ಕೆದಕುವ ಶಿವರಾಮೇಗೌಡ್ರೇ, ಸೋನಿಯಾ ಬಳಿಯೂ ಇದನ್ನೇ ಕೇಳ್ತೀರಾ?

|
Google Oneindia Kannada News

Recommended Video

Lok Sabha Elections 2019 : ಸುಮಲತಾ ಜಾತಿ ಕೆದಕುವ ಇವರು ಸೋನಿಯಾ ಗಾಂಧಿಗೆ ಈ ಪ್ರಶ್ನೆ ಕೇಳ್ತಾರಾ?

ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬೇರೆ ಯಾರೂ ಕಣಕ್ಕಿಳಿಯಬಾರದೇ? ಎದುರಾಳಿಗಳ ವಿರುದ್ದ ಟೀಕೆಟಿಪ್ಪಣಿ ಸಹಜ, ಆದರೆ ಪಕ್ಷದ ಹೆಸರಿನ ಮುಂದೆ ಜಾತ್ಯಾತೀತ ಎಂದು ಇಟ್ಟುಕೊಂಡು, ಜೆಡಿಎಸ್ ಮಾಡುತ್ತಿರುವುದು ಇದೇನು ರಾಜಕೀಯ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ನಿಲ್ಲುವುದಕ್ಕೆ ಸ್ವತಂತ್ರರು ಎಂದು ಹೇಳುವ ಜೆಡಿಎಸ್ ಮುಖಂಡರು, ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಜಾತಿ ಕೆದಕುವ ಕೆಲಸವನ್ನು ಮಾಡುತ್ತಿರುವುದು ಖಂಡನಾರ್ಹ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸುಮಲತಾ ಒಬ್ಬರು ನಾಯ್ಡು, ಅವರು ಹೇಗೆ ಗೌಡ್ತಿ ಆಗಲು ಸಾಧ್ಯ ಎಂದು ಹೇಳಿರುವ ಮಂಡ್ಯದ ಹಾಲೀ ಸಂಸದ ಶಿವರಾಮೇಗೌಡರು, ಇದೇ ಪ್ರಶ್ನೆಯನ್ನು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನೂ ಕೇಳುತ್ತಾರಾ ಎಂದು ನೇರವಾಗಿ ಪ್ರಶ್ನಿಸಬೇಕಾಗಿದೆ.

ಮಂಡ್ಯವನ್ನು ನಾಯ್ಡುಮಯ ಮಾಡಲು ಹೊರಟಿದ್ದಾರೆ: ಶಿವರಾಮೇಗೌಡ ಮಂಡ್ಯವನ್ನು ನಾಯ್ಡುಮಯ ಮಾಡಲು ಹೊರಟಿದ್ದಾರೆ: ಶಿವರಾಮೇಗೌಡ

ಜಾತ್ಯಾತೀಯ ಜನತಾದಳ ಎಂದು ಹೆಸರಿಟ್ಟುಕೊಂಡು, ಜಾತಿಯ ಮೂಲವನ್ನು ಕೆದಕುತ್ತಿರುವ ತಮ್ಮದೇ ಪಕ್ಷದ ಮುಖಂಡರೊಬ್ಬರ ಹೇಳಿಕೆಯನ್ನು ದೇವೇಗೌಡರಾಗಲಿ, ಕುಮಾರಸ್ವಾಮಿಯವರಾಗಲಿ ಖಂಡಿಸುವ ಕೆಲಸವನ್ನು ಇದುವರೆಗೂ ಮಾಡಿಲ್ಲ.

ಗಂಡ ಸತ್ತು ಇನ್ನೂ ತಿಂಗಳಾಗಿಲ್ಲ, ಆಗಲೇ ರಾಜಕೀಯ ಬೇಕಿತ್ತಾ

ಗಂಡ ಸತ್ತು ಇನ್ನೂ ತಿಂಗಳಾಗಿಲ್ಲ, ಆಗಲೇ ರಾಜಕೀಯ ಬೇಕಿತ್ತಾ

ಸುಮಲತಾ ಕಣಕ್ಕಿಳಿಯುವುದು ಖಚಿತವಾಗುತ್ತಿದ್ದಂತೆಯೇ, ಗಂಡ ಸತ್ತು ಇನ್ನೂ ತಿಂಗಳಾಗಿಲ್ಲ, ಆಗಲೇ ರಾಜಕೀಯ ಬೇಕಿತ್ತಾ ಎಂದು ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಹೇಳುವ ಮೂಲಕ, ಸುಮಲತಾ ಅವರನ್ನು ಕೆಣಕುವ ಹೇಳಿಕೆಗೆ ನಾಂದಿ ಹಾಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ಸುಮಲತಾ ಅವರ ವಿರುದ್ದ ಮುಗಿಬೀಳುವ ಕೆಲಸವನ್ನು ಜೆಡಿಎಸ್ ಮುಖಂಡರು ಮಾಡುತ್ತಲೇ ಬರುತ್ತಿದ್ದಾರೆ. ಬರಬರುತ್ತಾ ಏಕವಚನ ಪ್ರಯೋಗವೇ ಹೆಚ್ಚಾಗುತ್ತಿದೆ.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ಸುಮಲತಾ ನಾಯ್ಡು ಕುಟುಂಬದವರು, ಅವರು ಹೇಗೆ ಗೌಡ್ತಿ ಆಗಲು ಸಾಧ್ಯ

ಸುಮಲತಾ ನಾಯ್ಡು ಕುಟುಂಬದವರು, ಅವರು ಹೇಗೆ ಗೌಡ್ತಿ ಆಗಲು ಸಾಧ್ಯ

ಸೋಮವಾರ (ಏ 1) ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದ ಜೆಡಿಎಸ್ ಸಂಸದ ಶಿವರಾಮೇಗೌಡ್ರು, ಅಂಬರೀಶ್ ಏನೋ ಗೌಡ, ಒಪ್ಪಿಕೊಳ್ಳೋಣ. ಆದರೆ, ಸುಮಲತಾ, ನಾಯ್ಡು ಕುಟುಂಬದವರು, ಅವರು ಹೇಗೆ ಗೌಡ್ತಿ ಆಗಲು ಸಾಧ್ಯ. ಇವರೆಲ್ಲಾ ನಾಯ್ಡುಗಳು ಬೆಂಗಳೂರು ಸುತ್ತಮುತ್ತ ಆವರಿಸಿದ್ದಾರೆ. ಮಂಡ್ಯವನ್ನೂ ನಾಯ್ಡುಮಯ ಮಾಡಲು ಹೊರಟಿದ್ದಾರೆಂದು ಶಿವರಾಮೇಗೌಡ್ರು, ವಿವಾದಕಾರಿ ಹೇಳಿಕೆಯನ್ನು ನೀಡಿದ್ದಾರೆ.

ನಿಖಿಲ್ ನಾಮಪತ್ರ ಸರಿಯಾಗಿದೆ: ಚುನಾವಣಾ ಆಯೋಗಕ್ಕೆ ವರದಿ ನಿಖಿಲ್ ನಾಮಪತ್ರ ಸರಿಯಾಗಿದೆ: ಚುನಾವಣಾ ಆಯೋಗಕ್ಕೆ ವರದಿ

ನಾಯ್ಡು ಜನಾಂಗದ ಹೆಣ್ಣು ಮದುವೆಯಾದ ಮಾತ್ರಕ್ಕೆ ಗೌಡ್ತಿ ಆಗಲು ಸಾಧ್ಯವೇ

ನಾಯ್ಡು ಜನಾಂಗದ ಹೆಣ್ಣು ಮದುವೆಯಾದ ಮಾತ್ರಕ್ಕೆ ಗೌಡ್ತಿ ಆಗಲು ಸಾಧ್ಯವೇ

ಗೌಡ್ರ ಕುಟುಂಬದ ಹುಡುಗ, ನಾಯ್ಡು ಜನಾಂಗದ ಹೆಣ್ಣನ್ನು ಮದುವೆಯಾದ ಮಾತ್ರಕ್ಕೆ ಆಕೆ ಗೌಡ್ತಿ ಆಗಲು ಸಾಧ್ಯವೇ ಎಂದು ಪ್ರಶ್ನಿಸಿರುವ ಶಿವರಾಮೇಗೌಡ್ರು, ಏನು ತಪ್ಪು ಮಾಡದಿದ್ದರೂ ನಮ್ಮ ಮುಖ್ಯಮಂತ್ರಿಗಳ ವಿರುದ್ದ ಆರೋಪ ಮಾಡಿದರೆ ಸುಮ್ಮನಿರಲು ಸಾಧ್ಯವೇ? ಗೌಡ್ತಿ ಗೌಡ್ತಿ.. ಎಂದು ಡಂಗುರ ಸಾರುತ್ತಾ ಹೋದರೆ, ಯಾವ ರೀತಿಯ ಗೌಡ್ತಿ ಎಂದು ಮೊದಲು ಉತ್ತರಿಸಲಿ ಎಂದು ಸುಮಲತಾ ಅವರ ಜಾತಿ ಕೆಣಕುವ ಕೆಲಸವನ್ನು ಶಿವರಾಮೇಗೌಡ್ರು ಮಾಡಿದ್ದಾರೆ.

ಸುಮಲತಾ ಅವರು ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ

ಸುಮಲತಾ ಅವರು ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ

ಸುಮಲತಾ ಅವರು ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ ಅವರು ನಾಯ್ಡು ಆಗಿದ್ದಾರೆಯೇ ಹೊರತು ಮಂಡ್ಯ ಗೌಡ್ತಿಯಲ್ಲ ಎಂದು ಕೆಲವು ದಿನಗಳ ಹಿಂದೆ ಹೇಳಿದ್ದ ಶಿವರಾಮೇಗೌಡ್ರು, ಹಿಂದೂ ಸಂಪ್ರದಾಯದ ಪ್ರಕಾರ, ಮದುವೆಯಾಗಿ ಗಂಡನ ಮನೆಗೆ ಬರುವ ಹೆಣ್ಣು, ಅದ್ಯಾವ ಜಾತಿಯವಳೇ ಆಗಿರಲಿ ಗಂಡನ ಉಪನಾಮವನ್ನೇ ಹೊಂದುವುದು ಸಂಪ್ರದಾಯ ಎನ್ನುವ ಕನಿಷ್ಠ ತಿಳುವಳಿಕೆ ಗೌಡ್ರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸುವಂತಾಗಿದೆ.

ಸೋನಿಯಾ ಗಾಂಧಿಯವರಲ್ಲೂ ಇದೇ ಪ್ರಶ್ನೆಯನ್ನು ಕೇಳುತ್ತಾರಾ

ಸೋನಿಯಾ ಗಾಂಧಿಯವರಲ್ಲೂ ಇದೇ ಪ್ರಶ್ನೆಯನ್ನು ಕೇಳುತ್ತಾರಾ

ಸುಮಲತಾ ಅವರು ನಾಯ್ಡು ಎಂದು ಹೇಳುವ ಶಿವರಾಮೇಗೌಡ್ರು, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರಲ್ಲೂ ಇದೇ ಪ್ರಶ್ನೆಯನ್ನು ಕೇಳುತ್ತಾರಾ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ವಿಷಯಾಧಾರಿತ ರಾಜಕಾರಣ ಮಾಡುವುದನ್ನು ಬಿಟ್ಟು, ಜಾತಿ ಕೆದಕುವ ಕೆಲಸವನ್ನು ಮಾಡಿರುವ ಶಿವರಾಮೇಗೌಡರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

English summary
Loksabha elections 2019: Mandya JDS sitting MP Shivarame Gowda pulled independent candidate Sumalatha caste. He said, though she is married Gowda, she is not Gowdthi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X