ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿವಾಹಿತ ಮಹಿಳೆಯ ಪ್ರೇಮದಲ್ಲಿ ಬಿದ್ದು ಆತ ಮಾಡಿದ್ದೇನು?

|
Google Oneindia Kannada News

ಬೆಂಗಳೂರು, ಅ. 16: ಮಂಡ್ಯದಲ್ಲಿ ನಡೆದಿರುವ ಬೃಹತ್ ಗೋಲ್ಡ್ ದೋಖಾ ಪ್ರಕರಣಕ್ಕೆ ತಿರುವು ಸಿಕ್ಕಿದೆ. ತನ್ನ ಪ್ರೇಯಸಿಗಾಗಿ ಸೋಮಶೇಖರ್ ಕೋಟಿ ಕೋಟಿ ರೂಪಾಯಿಗಳ ವಂಚನೆ ಮಾಡಿದ್ದಾನೆಂದು ತಿಳಿದು ಬಂದಿದೆ. ಮಂಡ್ಯದ ಪ್ರತಿಷ್ಠಿತ ಕುಟುಂಬದ ವಿವಾಹಿತ ಮಹಿಳೆಯೊಬ್ಬರೊಂದಿಗೆ ಸೋಮಶೇಖರ್‌ಗೆ ಅಫೇರ್ ಇತ್ತು. ಅದಕ್ಕಾಗಿಯೇ ಅವನು ವಂಚನೆ ಮಾಡಿದ್ದ ಎಂಬುದು ತನಿಖೆಯ ವೇಳೆ ಬಹಿರಂಗವಾಗಿದೆ.

ವಂಚನೆಯ ಹಣದಲ್ಲಿಯೇ ಆ ವಿವಾಹಿತ ಮಹಿಳೆಯೊಂದಿಗೆ ಸೋಮಶೇಖರ್, ವೀಕೆಂಡ್ ಪಾರ್ಟಿ, ಐಶಾರಾಮಿ ಜೀವನ ಮಾಡುತ್ತಿದ್ದ. ಅವರಿಬ್ಬರೂ ತಂಗುತ್ತಿದ್ದ ಹೋಟೆಲ್‌ಗಳು, ಐಷಾರಾಮಿ ರೇಸಾರ್ಟ್‌ಗಳ ಪಟ್ಟಿ ತನಿಖೆ ಮಾಡುತ್ತಿದ್ದವರನ್ನೇ ದಂಗು ಬಡಿಸಿದೆ.

ಇದೀಗ ಪೊಲೀಸರು ದಾಖಲಿಸಿರುವ ವಂಚನೆ ಪ್ರಕರಣದಲ್ಲಿ ಆ ಮಹಿಳೆಯನ್ನೂ ಸೇರಿಸಲಾಗಿದ್ದು, ಎರಡನೇ ಆರೋಪಿ ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ದಾಖಲಿಸಿದ್ದಾರೆ. ಯಾರು ಆ ಮಹಿಳೆ? ಮುಂದೆ ಓದಿ.

ಪ್ರೇಯಸಿಗಾಗಿ ಮಹಾ ವಂಚನೆ!

ಪ್ರೇಯಸಿಗಾಗಿ ಮಹಾ ವಂಚನೆ!

ಪ್ರೇಯಸಿಗಾಗಿಯೇ ಆರೋಪಿ ಸೋಮಶೇಖರ್ ಅಲಿಯಾಸ್ ಸೋಮು ವಂಚನೆ ಮಾಡಿದ್ದಾನಾ? ಎಂಬ ಚರ್ಚೆ ಈಗ ನಡೆದಿದೆ. ಸೋಮು ಹಾಗೂ ಆತನ ಪ್ರೇಯಸಿ ಹೈಪೈ ಜೀವನ ಶೈಲಿಗೆ ಮಾರು ಹೋಗಿದ್ದರು. ಹೀಗಾಗಿ ವಂಚನೆ ಹಣದಲ್ಲಿಯೇ ಸೋಮು ಹಾಗೂ ಆತನ ಪ್ರೇಯಸಿ ಪೂಜಾ ಐಷಾರಾಮಿ ಜೀವನ ನಡೆಸುತ್ತಿದ್ದರು.

ವೀಕೆಂಡ್ ಪಾರ್ಟಿ, ಡೇಟಿಂಗ್‌ಗಾಗಿ ಲಕ್ಷ ಲಕ್ಷ ರೂಪಾಯಿಗಳನ್ನು ಸೋಮು ಪೂಜಾಳಿಗಾಗಿ ಖರ್ಚು ಮಾಡಿದ್ದ. ಶನಿವಾರ, ಭಾನುವಾರದಂದು ಹೈ ಫೈ ಪಾರ್ಟಿಯಲ್ಲಿ ಇಬ್ಬರೂ ಭಾಗಿಯಾಗುತ್ತಿದ್ದರು. ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಪ್ರತಿಷ್ಠಿತ ನಗರಗಳು, ಹೊರ ರಾಜ್ಯಗಳಲ್ಲಿ ಇಬ್ಬರೂ ಪಾರ್ಟಿಗಳಿಗೆ ಹೋಗುತ್ತಿದ್ದರು.

ಪ್ರತಿಷ್ಠಿತ ಹೋಟೆಲ್‌, ರೆಸಾರ್ಟ್‌ಗಳು

ಪ್ರತಿಷ್ಠಿತ ಹೋಟೆಲ್‌, ರೆಸಾರ್ಟ್‌ಗಳು

ರಾಜ್ಯ ಹಾಗೂ ಹೊರ ರಾಜ್ಯಗಳ ಪ್ರತಿಷ್ಠಿತ ಹೊಟೇಲ್‌ಗಳೇ ಇಬ್ಬರ ನೆಚ್ಚಿನ ತಾಣಗಳಾಗಿದ್ದವು. ಬೆಂಗಳೂರಿನ ಶಾಂಗ್ರೀಲಾ, ಹೋಟೆಲ್ ಅಶೋಕ್‌ನಂತಹ ಸ್ಟಾರ್ ಹೋಟೆಲ್‌ಗಳು, ಐಷಾರಾಮಿ ರೆಸಾರ್ಟ್‌ಗಳು ಅವರಿಬ್ಬರ ಫೇವರಿಟ್ ಹಾಟ್‌ಸ್ಪಾಟ್‌ಗಳೆಂದು ತನಿಖೆಯಲ್ಲಿ ಬಹಿರಂಗವಾಗಿದೆ. ಶನಿವಾರ ಮಂಡ್ಯದಿಂದ ತೆರಳುತ್ತಿದ್ದ ಈ ಜೋಡಿ ಪಾರ್ಟಿ ಮುಗಿಸಿ, ಸೋಮವಾರ ವಾಪಸ್ ಆಗುತ್ತಿತ್ತು.

ಮಂಡ್ಯದ ಪ್ರತಿಷ್ಠಿತ ಉದ್ಯಮಿ ಸೊಸೆ

ಮಂಡ್ಯದ ಪ್ರತಿಷ್ಠಿತ ಉದ್ಯಮಿ ಸೊಸೆ

ಸೋಮಶೇಖರ್ ಪ್ರೇಯಸಿ ಪೂಜಾ ನಿಖಿಲ್, ಮಂಡ್ಯ ನಗರದ ಪ್ರತಿಷ್ಠಿತ ಉದ್ಯಮಿ ಸೊಸೆ ಎಂದು ತಿಳಿದು ಬಂದಿದೆ. ಈ ಮೊದಲೇ ನಿಖಿಲ್ ಎಂಬುವರ ಜೊತೆ ವಿವಾಹ ಆಗಿದ್ದರೂ ಸೋಮಶೇಖರ್ ಜೊತೆಗೆ ಪೂಜಾ ಸಂಬಂಧ ಹೊಂದಿದ್ದರು. ಸೋಮಶೇಖರ್ ಜೊತೆಗೆ ಪೂಜಾ ನಿಖಿಲ್ 2ನೇ ಮದುವೆ ಆಗಿದ್ದಾರೆ ಎಂಬ ಮಾಹಿತಿಯೂ ಇದೆ.

ಸೋಮಶೇಖರ್ A1, ಪೂಜಾ A2

ಸೋಮಶೇಖರ್ A1, ಪೂಜಾ A2

ಮಂಡ್ಯದಲ್ಲಿ ನಡೆದಿರುವ ಬೃಹತ್ ಗೋಲ್ಡ್‌ ದೋಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಪೂರ್ವ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಐಪಿಸಿ ಸೆಕ್ಷನ್ 406, 420ಅಡಿ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ.


ಆರೋಪಿ ಸೋಮಶೇಖರ್ ಆರೋಪಿ ನಂಬರ್ ಒಂದು (ಎ1) ಹಾಗೂ ಪ್ರೇಯಸಿ ಪೂಜಾ ನಿಖಿಲ್ ಎರಡನೇ ಅರೋಪಿ (ಎ2) ಯಾಗಿದ್ದಾರೆ. ಚಿನ್ನ ವಂಚನೆ ಪ್ರಕರಣ ಸಂಬಂಧ ಮಂಗಳಮುಖಿ ವಿ. ಸೋನಿಯಾ ನೀಡಿರುವ ದೂರು ಆಧರಿಸಿ ಎಫ್‌ಐಆರ್ ಹಾಕಲಾಗಿದೆ.

Recommended Video

ಮತ್ತೊಂದು ಬ್ರಹ್ಮಾಸ್ತ್ರ ರೆಡಿ ಮಾಡ್ತಿದೆ India..! | India Hypersonic Cruise Missile | Oneindia Kannada
ಮಂಡ್ಯದಲ್ಲಿ ಮಹಾ ಧೋಕಾ ಪತ್ತೆ

ಮಂಡ್ಯದಲ್ಲಿ ಮಹಾ ಧೋಕಾ ಪತ್ತೆ

ಬ್ಯಾಂಕ್‌ನಲ್ಲಿ ಚಿನ್ನ ಇಟ್ಟರೆ ಹೆಚ್ಚಿನ‌ ಬಡ್ಡಿ ಕೊಡಿಸುವುದಾಗಿ ನಂಬಿಸಿ ಸುಮಾರು 20 ಕೋಟಿ ರೂಪಾಯಿಗಳಷ್ಟು ಬೆಲೆ ಬಾಳುವ ಚಿನ್ನವನ್ನು ಸೋಮಶೇಖರ್ ವಂಚಿಸಿದ್ದ. ಮಂಡ್ಯದ ಫೆಡ್ ಬ್ಯಾಂಕ್‌ನ ಎಕ್ಸಿಕ್ಯುಟಿವ್‌ನಿಂದ ಭಾರೀ ವಂಚನೆ ಆಗಿರುವ ಕುರಿತು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಮ್ಮ ಬ್ಯಾಂಕ್‌ನಲ್ಲಿ ಚಿನ್ನ ಇಟ್ಟರೆ ವಾರಕ್ಕೆ ಶೇಕಡಾ 20ರಷ್ಟು ಹಾಗೂ ತಿಂಗಳಿಗೆ ಶೇಕಡಾ 40 ರಷ್ಟು ಬಡ್ಡಿ ಕೊಡುತ್ತೇವೆ ಎಂದು ಆಮಿಷವೊಡ್ಡಿ, ನಂಬಿಸಿ ಸೋಮಶೇಖರ್ ಮಹಿಳೆಯರಿಂದ ಚಿನ್ನ ಸಂಗ್ರಹಿಸಿ ವಂಚನೆ ಮಾಡಿದ್ದ. ಸುಮಾರು ನಾಲ್ಕೂವರೇ ಕೆಜಿಯಷ್ಟು ಚಿನ್ನವನ್ನು ಲಪಟಾಯಿಸಿರುವುದು ಪ್ರಾಥಮಿಕ ಹಂತದ ತನಿಖೆಯಲ್ಲಿ ಗೊತ್ತಾಗಿತ್ತು.

English summary
Mandya Gold Dhokha: Accused Somashekar did cheating because of his love affair with married woman. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X