• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಳೆದುಹೋಗಿದ್ದಾರೆ ಮಂಡ್ಯ ಶಾಸಕರು, ಹುಡುಕಿಕೊಟ್ಟವರಿಗೆ ಬಹುಮಾನ

|
   ಮಂಡ್ಯದಲ್ಲಿ ಶಾಸಕರಾರೂ ಕಾಣುತ್ತಿಲ್ಲ

   ಮಂಡ್ಯ, ಜೂನ್ 26: ಮಂಡ್ಯ ಜಿಲ್ಲೆಯ ಏಳು ಜನ ಶಾಸಕರು ಕಾಣೆ ಆಗಿದ್ದಾರೆ, ಅವರನ್ನು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂಬ ಫ್ಲೆಕ್ಸ್‌ಗಳು ಜಿಲ್ಲೆಯಲ್ಲಿ ಅಲ್ಲಲ್ಲಿ ಕಾಣುತ್ತಿವೆ.

   ಮಂಡ್ಯದಲ್ಲಿ ಕೆಲವು ದಿನಗಳಿಂದಲೂ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ ರೈತರು ಆಹೋರಾತ್ರಿ ಧರಣಿ ಮಾಡುತ್ತಿದ್ದಾರೆ, ಆದರೆ ಜಿಲ್ಲೆಯ ಯಾವೊಬ್ಬ ಶಾಸಕ ಅಥವಾ ಸಚಿವರೂ ಬಂದು ರೈತರ ಕಷ್ಟ ಕೇಳಿಲ್ಲ.

   ತಮಿಳುನಾಡಿಗೆ ಕರ್ನಾಟಕದಿಂದ ಹರಿಸಬೇಕಾದ ನೀರಿನ ಪ್ರಮಾಣವೆಷ್ಟು?

   ಹಾಗಾಗಿ ಆಕ್ರೋಶಗೊಂಡಿರುವ ಪ್ರತಿಭಟನಾಕಾರರು, ಜಿಲ್ಲೆಯ ಎಲ್ಲ ಏಳು ಶಾಸಕರ ಚಿತ್ರವನ್ನು ಫ್ಲೆಕ್ಸ್‌ನಲ್ಲಿ ಮುದ್ರಿಸಿ, ಶಾಸಕರು ಕಳೆದು ಹೋಗಿದ್ದಾರೆ, ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಫ್ಲೆಕ್ಸ್‌ ಹಾಕಿದ್ದಾರೆ.

   ಕಾವೇರಿ ನೀರು: ಸುಮಲತಾ ಮೇಲೆ ನಿಖಿಲ್ ಕುಮಾರಸ್ವಾಮಿ ವ್ಯಂಗ್ಯದ ಬಾಣ

   ಜಿಲ್ಲೆಯಲ್ಲಿ 60 ಲಕ್ಷ ಟನ್ ಕಬ್ಬು ಒಣಗುತ್ತಿದ್ದು, ಈ ಕೂಡಲೇ ಕೆ.ಆರ್‌.ಎಸ್‌ನಿಂದ ನಾಲೆಗಳಿಗೆ ನೀರು ಹರಿಸಬೇಕು ಎಂದು ರೈತರು ಕಳೆದ ಆರು ದಿನಗಳಿಂದಲೂ ಅಹೋರಾತ್ರಿ ಪ್ರತಿಭಟನೆ ಮಾಡುತ್ತಲೇ ಇದ್ದಾರೆ.

   ಇನ್ನೂ ಮಳೆಯಾಗಿಲ್ಲ, ಇಲ್ಲಿನ ಜಲಾಶಯಗಳ ಈಗಿನ ಸ್ಥಿತಿಯೇನು?

   ರೈತರು ಹಾಕಿರುವ ಫ್ಲೆಕ್ಸ್‌ನಲ್ಲಿ ಮಂಡ್ಯ ಜಿಲ್ಲೆಯ ಶಾಸಕರುಗಳಾದ ಎಂ.ಶ್ರೀನಿವಾಸ್, ತಮ್ಮಣ್ಣ, ಕೆ.ಅನ್ನದಾನಿ, ರವೀಂದ್ರ ಶ್ರೀಕಂಠ, ಸುರೇಶ್ ಗೌಡ, ನಾರಾಯಣಗೌಡ, ಸಿಎಸ್ ಪುಟ್ಟರಾಜು ಅವರುಗಳ ಚಿತ್ರವಿದೆ.

   English summary
   Mandya farmers protesting demanding leave water to channels. They showing banners that, Mandya district MLAs were missing please some one find them.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X