ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್‌ಡೌನ್‌ನಲ್ಲಿ ಬಡವರ ಸಂಕಷ್ಟಕ್ಕೆ ನೆರವಾದ ಮಂಡ್ಯ ಕುಟುಂಬ

|
Google Oneindia Kannada News

ಮಂಡ್ಯ, ಮೇ 9: ಲಾಕ್‌ಡೌನ್ ಸಮಯದಲ್ಲಿ ಮಂಡ್ಯದ ಕುಟುಂಬವೊಂದು ಬಡವರ ಸಂಕಷ್ಟಕ್ಕೆ ಮಿಡಿದಿದೆ. ತನ್ನೂರಿನ ಸುತ್ತಮುತ್ತಲ ಹಳ್ಳಿಯ ಬಡವರಿಗೆ ಕುಟುಂಬದಿಂದ ದಿನಸಿ ಕಿಟ್ ವಿತರಣೆ ಮಾಡಿದೆ.

ಕೆ.ಆರ್.ಪೇಟೆ ತಾಲೂಕಿನ ಆನಗೊಳ ಗ್ರಾಮದ ಎಂ ಬಿ ಕಿರಣ್ ಕುಮಾರ್ ಕುಟುಂಬದಿಂದ ಬಡವರಿಗೆ ನೆರವು ನೀಡಿದ್ದಾರೆ. ಕಿರಣ್ ತಮ್ಮ ಕುಟುಂಬದ ಸದಸ್ಯರೊಂದಿಗೆ ಸುತ್ತಮುತ್ತಲ ಹಳ್ಳಿ ಜನರಿಗೆ ಆಸರೆಯಾಗಿದ್ದಾರೆ. ತಮ್ಮ ಕುಟುಂಬದ ಸುಬ್ರಮಣ್ಯ ಸೇವಾ ಟ್ರಸ್ಟ್ ಅಡಿಯಲ್ಲಿ ಗ್ರಾಮದ ಬಡವರಿಗೆ ಸಹಾಯ ಮಾಡಿದ್ದಾರೆ.

ಮಹಿಳಾ ಪೊಲೀಸ್ ಅಧಿಕಾರಿಗೆ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ಬೆದರಿಕೆ ಮಹಿಳಾ ಪೊಲೀಸ್ ಅಧಿಕಾರಿಗೆ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ಬೆದರಿಕೆ

ಲಾಕ್‌ಡೌನ್ ಸಮಯದಲ್ಲಿ ರೈತರು ತಮ್ಮ ತರಕಾರಿ ಮಾರಾಟ ಮಾಡಲು ಕಷ್ಟಪಡುತ್ತಿದ್ದಾರೆ. ಹೀಗಾಗಿ, ತಾವೇ ರೈತರಿಂದ ತರಕಾರಿ ಖರೀದಿಸಿ ಅದನ್ನು ಬಡ ಜನರಿಗೆ ಉಚಿತವಾಗಿ ವಿತರಣೆ ಮಾಡಿದ್ದಾರೆ. ಬಡ ಕುಟುಂಬಗಳಿಗೆ ತಮ್ಮ ಟ್ರಸ್ಟ್ ವತಿಯಿಂದ ಫುಡ್ ಕಿಟ್ ನೀಡಿದ್ದಾರೆ.

Mandya Family Helped Poor People

ಮಾತ್ರವಲ್ಲದೆ, ವಯೋವೃದ್ದರಿಗೆ ಪ್ರತಿ ಗ್ರಾಮದಲ್ಲೂ ಉಚಿತವಾಗಿ ಔಷಧಿ, ಮಾತ್ರೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಸಂಕಷ್ಟದಲ್ಲಿ ಬಡವರ ನೆರವಿಗೆ ನಿಂತ ಕಿರಣ್ ಕುಟುಂಬದ ಸೇವೆಗೆ ಗ್ರಾಮಸ್ಥರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಿರಣ್ ಫ್ಯಾಮಿಲಿ ಸಹಾಯಕ್ಕೆ ಧನ್ಯವಾದ ತಿಳಿಸಿದ್ದಾರೆ.

English summary
Mandya family helped poor people in lockdown period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X