ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ಕುಡುಕರಿಂದ ದಾಖಲೆ, ಈ ಬಾರಿ ಅತಿ ಹೆಚ್ಚು ಮದ್ಯ ಮಾರಾಟ

|
Google Oneindia Kannada News

ಮಂಡ್ಯ, ಮೇ 18: ಮಂಡ್ಯ ಕೇವಲ ಲೋಕಸಭಾ ಚುನಾವಣೆ ಮಾತ್ರವಲ್ಲ ಮದ್ಯ ಮಾರಾಟದಲ್ಲೂ ದಾಖಲೆ ನಿರ್ಮಿಸಿ ಮತ್ತೊಮ್ಮೆ ಸುದ್ದಿಯಲ್ಲಿದೆ.

ಒಂದೆಡೆ ಬರಗಾಲ, ನೀರಿಲ್ಲದೆ ಪರದಾಟ, ಚುನಾವಣೆ ಕಾವು ಇದೆಲ್ಲದರ ಮಧ್ಯೆ ಮದ್ಯ ಮಾರಾಟಕ್ಕೆ ಮಾತ್ರ ಯಾವುದೇ ತೊಂದರೆಯಾಗಿಲ್ಲ ನೋಡಿ.

ಮಹಿಳೆಗೆ ಸಂಕಷ್ಟ ತಂದಿಟ್ಟ 'ಫೈರ್ ಶಾಟ್': ಬಾಯಿಯೇ ಸೀಳಿ ಹೋಯ್ತು ಮಹಿಳೆಗೆ ಸಂಕಷ್ಟ ತಂದಿಟ್ಟ 'ಫೈರ್ ಶಾಟ್': ಬಾಯಿಯೇ ಸೀಳಿ ಹೋಯ್ತು

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಗೆಲ್ಲುತ್ತಾರೋ ಅಥವಾ ಸುಮಲತಾ ಗೆಲ್ಲುತ್ತಾರೋ ಎನ್ನುವ ಚರ್ಚೆ ಹೆಚ್ಚಾಗಿದೆ. ಆ ತಲೆಬಿಸಿಯಲ್ಲಿಯೇ ಮಂಡ್ಯ ಜನರು ಮದ್ಯಪಾನ ಮಾಡುತ್ತಿದ್ದರೇನೋ ಅನ್ನಿಸುತ್ತಿದೆ.

Mandya district tops in alcohol consumption

ಅದರ ಜೊತೆಗೆ ಮಂಡ್ಯದಲ್ಲಿ ಇಷ್ಟು ವರ್ಷದಲ್ಲೇ ಅಧಿಕ ಮದ್ಯ ಮಾರಾಟವೂ ಈ ಬಾರಿಯೇ ಆಗಿದೆ. ಕೆಲವು ಪ್ರತಿನಿಧಿಗಳು ಯುವಕರಿಗೆ ಮದ್ಯದ ಆಮಿಷವೊಡ್ಡಿ ತಮಗಾಗದವರ ಮೇಲೆ ಹಲ್ಲೆ ಮಾಡಿಸುವುದು, ಇನ್ನಿತರೆ ಚುನಾವಣಾ ಸಂಬಂಧ ಕೆಲಸಗಳನ್ನೂ ಕೂಡ ಮಾಡಿಸಿಕೊಂಡಿದ್ದಾರೆ.

ಕೆಲವರು ನೀರು ಕುಡಿದಂತೆ ದಿನವಿಡೀ ಮದ್ಯವನ್ನು ಕುಡಿಯುತ್ತಲೇ ಇರುತ್ತಾರೆ. ಇಲ್ಲಿ ಬೆಳಗ್ಗೆ ಎದ್ದಾಗಿಂದಲೇ ಕುಡಿಯುವುದು ಆರಂಭವಾಗುತ್ತದೆ. ಆದರೆ ಈ ಬಾರಿ ಚುನಾವಣೆ ಸಂದರ್ಭದಲ್ಲಂತೂ ಮದ್ಯ ಮಾರಾಟ ವಿಪರೀತವಾಗಿತ್ತು.

ಅಬಕಾರಿ ಇಲಾಖೆ ಕೊಟ್ಟಿರುವ ಈ ಲೆಕ್ಕಾಚಾರದ ಪ್ರಕಾರ 2005 ರಿಂದ ಇಲ್ಲಿಯವರೆಗೆ ಏಪ್ರಿಲ್ ತಿಂಗಳಲ್ಲಿ ಈ ಬಾರಿಯೇ ಅತಿ ಹೆಚ್ಚು ಮದ್ಯ ಮಾರಾಟವಾಗಿದೆ. ಎಪ್ರಿಲ್‌ನಲ್ಲಿ 46.35 ಲಕ್ಷ ಬಾಕ್ಸ್, 4 ಕೋಟಿ ಲೀಟರ್ ಮದ್ಯ ಮಾರಾಟವಾಗಿದೆ. 2018ರಲ್ಲಿ 5 ಕೋಟಿ 69 ಲಕ್ಷ ಬಾಕ್ಸ್ ಗಳು ಮಾರಾಟವಾಗಿತ್ತು. ಫೆಬ್ರವರಿಯಲ್ಲಿ 47.61 ಲಕ್ಷ ಬಾಕ್ಸ್, 4.11 ಕೋಟಿ ಲೀಟರ್‌ಗಳಷ್ಟು ಮದ್ಯ ಮಾರಾಟವಾಗಿತ್ತು.

English summary
Despite a number of anti-alcohol campaigns, Mandya district tops others in alcohol consumption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X