ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ: ಬಹಿರಂಗ ಚರ್ಚೆಯಲ್ಲಿ ಜಂಗಿ ಕುಸ್ತಿ ಮಾಡ್ತಾರಾ ಪುಟ್ಟರಾಜು-ಚಲುವರಾಯಸ್ವಾಮಿ?

|
Google Oneindia Kannada News

ಮಂಡ್ಯ, ಅಕ್ಟೋಬರ್ 11: ಮಂಡ್ಯ ಕ್ಷೇತ್ರದ ಇಬ್ಬರು ಪ್ರಮುಖ ನಾಯಕರ ರಾಜಕೀಯ ಸಂಘರ್ಷ ಸದ್ಯಕ್ಕೆ ಬಗೆಹರಿಸುವ ಲಕ್ಷಣಗಳು ಕಾಣಿಸುತ್ತಿಲ್ಲ.

ತಮ್ಮಿಂದಾಗಿ ಚಲುವರಾಯಸ್ವಾಮಿ ರಾಜಕೀಯದಲ್ಲಿ ಮುಂದೆಬರಲು ಸಾಧ್ಯವಾಯಿತು ಎಂದಿರುವ ಪುಟ್ಟರಾಜು, ಈ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ.

ಇಬ್ಬರ ಮಧ್ಯೆ ಒಂದು ವಾರದಿಂದ ಸತತವಾಗಿ ವಾಗ್ದಾಳಿಗಳು ನಡೆಯುತ್ತಿವೆ. ಉಪಚುನಾವಣೆ ಮತ್ತು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದು ಬೇಡ ಎಂದು ಕಾಂಗ್ರೆಸ್‌ ಮುಖಂಡ ಎನ್. ಚಲುವರಾಯಸ್ವಾಮಿ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ.

'ಸೋಲಿಸಿದ್ದೇ ಬಾಯಿ ಮುಚ್ಚಿಕೊಂಡಿರಲಿ ಎಂದು, ಆದರೂ ಸತ್ತ ಕುದುರೆಗಳು ಮಾತನಾಡುತ್ತಿವೆ' 'ಸೋಲಿಸಿದ್ದೇ ಬಾಯಿ ಮುಚ್ಚಿಕೊಂಡಿರಲಿ ಎಂದು, ಆದರೂ ಸತ್ತ ಕುದುರೆಗಳು ಮಾತನಾಡುತ್ತಿವೆ'

ಸಚಿವ ಸಿ.ಎಸ್. ಪುಟ್ಟರಾಜು ಮತ್ತು ಚಲುವರಾಯಸ್ವಾಮಿ ಅವರ ನಡುವಣ ರಾಜಕೀಯ ವೈಷಮ್ಯ ಪರಸ್ಪರ ಕೆಂಡಕಾರುವಂತಹ ಹೇಳಿಕೆಗಳ ಮೂಲಕ ವ್ಯಕ್ತವಾಗುತ್ತಿದೆ.

ಕಾಲು ಹಿಡಿದು ಅಧಿಕಾರ ಕೊಡಿಸಿದ್ದೆ

ಕಾಲು ಹಿಡಿದು ಅಧಿಕಾರ ಕೊಡಿಸಿದ್ದೆ

ಚಲುವರಾಯಸ್ವಾಮಿ ಮತ್ತು ನಾನು ಸ್ನೇಹಿತರು. ಆದರೆ, ರಾಜಕೀಯದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಅವರ ರಾಜಕೀಯದ ಬದುಕಿನಲ್ಲಿ ಮುಂದೆ ಬರಲು ನನ್ನ ಪಾತ್ರವನ್ನು ಅವರು ಮರೆಯುವಂತಿಲ್ಲ. ಅವರಿಗೆ ರಾಜಕೀಯದ ಶಕ್ತಿ ತುಂಬಿದವರಾರು ಎಂದು ಹೇಳಲಿ. ಜನಪ್ರತಿನಿಧಿಗಳ ಕಾಲು ಹಿಡಿದು ಅವರನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರನ್ನಾಗಿ ಮಾಡಿದ್ದೆ. ಇದಕ್ಕೆ ಮಾಜಿ ಶಾಸಕ ಎಚ್‌.ಬಿ. ರಾಮು ಅವರೇ ಸಾಕ್ಷಿ. ಬೇಕಿದ್ದರೆ ಅವರ ನೇತೃತ್ವದಲ್ಲಿಯೇ ಚರ್ಚೆ ನಡೆಯಲಿ ಎಂದು ಪುಟ್ಟರಾಜು ಹೇಳಿದ್ದಾರೆ.

ಸತ್ತ ಕುದುರೆಯ ಮಾತುಗಳೂ, ಜೆಡಿಎಸ್ ಕಾಂಗ್ರೆಸ್ ಮೈತ್ರಿಯೂ! ಸತ್ತ ಕುದುರೆಯ ಮಾತುಗಳೂ, ಜೆಡಿಎಸ್ ಕಾಂಗ್ರೆಸ್ ಮೈತ್ರಿಯೂ!

ಬಹಿರಂಗ ಚರ್ಚೆಗೆ ಸಿದ್ಧ

ಬಹಿರಂಗ ಚರ್ಚೆಗೆ ಸಿದ್ಧ

ರಾಜಕೀಯದಲ್ಲಿ ಚಲುವರಾಯಸ್ವಾಮಿ ನನಗೆ ಏನೇನು ತೊಂದರೆ ಕೊಟ್ಟರು, ಅವರ ಬಗ್ಗೆ ನಾನು ಏನೇನು ಮಾತನಾಡಿದ್ದೇನೆ ಎಂಬುದರ ಬಗ್ಗೆ ಚರ್ಚೆಗೆ ಸಿದ್ಧನಿದ್ದೇನೆ. ಅಲ್ಲಿಯೇ ಅವರ ಹೇಳಿಕೆಗಳಿಗೆ ಉತ್ತರ ನೀಡುತ್ತೇನೆ. ಯಾರೋ ಇನ್ನೊಬ್ಬರ ಮೂಲಕ ಅವರಿಗೆ ಉತ್ತರ ಕೊಡುವ ಅಗತ್ಯವಿದೆ ಎಂದು ಪುಟ್ಟರಾಜು ಹೇಳಿದರು.

ಮಂಡ್ಯ ಲೋಕಸಭೆ ಉಪ ಚುನಾವಣೆ : ಜೆಡಿಎಸ್‌ ಜೊತೆ ಮೈತ್ರಿಗೆ ವಿರೋಧ? ಮಂಡ್ಯ ಲೋಕಸಭೆ ಉಪ ಚುನಾವಣೆ : ಜೆಡಿಎಸ್‌ ಜೊತೆ ಮೈತ್ರಿಗೆ ವಿರೋಧ?

ತಲೆ ಸರಿಯಾಗಿದ್ದರಿಂದಲೇ ಗೆಲ್ಲಿಸಿದರು

ತಲೆ ಸರಿಯಾಗಿದ್ದರಿಂದಲೇ ಗೆಲ್ಲಿಸಿದರು

ನನ್ನ ತಲೆ ಚೆನ್ನಾಗಿದೆ. ನನ್ನ ತಲೆಯಲ್ಲಿ ಮೆದುಳು ಇರೋದಕ್ಕೇ ಜನರು ನನ್ನನ್ನು ಗೆಲ್ಲಿಸಿದರು. ಚಲುವರಾಯಸ್ವಾಮಿ ತಮ್ಮ ತಲೆಯನ್ನು ಸರಿಮಾಡಿಸಿಕೊಳ್ಳಬೇಕಿದೆ. ಇಲ್ಲವೇ ನಾವೇ ಸರಿಮಾಡುತ್ತೇವೆ ಎಂದು ಪುಟ್ಟರಾಜು ಟಾಂಗ್ ನೀಡಿದರು.

ಪುಟ್ಟರಾಜು ಅವರು ತಲೆಯಲ್ಲಿ ಮೆದುಳು ಇಟ್ಟುಕೊಂಡು ಮಾತಾಡಲಿ ಎಂದು ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದರು.

ಲೋಕಸಭೆ ಚುನಾವಣೆಗೆ ಸ್ಪರ್ಧೆ, ಚಲುವರಾಯಸ್ವಾಮಿ ಹೇಳಿದ್ದೇನು? ಲೋಕಸಭೆ ಚುನಾವಣೆಗೆ ಸ್ಪರ್ಧೆ, ಚಲುವರಾಯಸ್ವಾಮಿ ಹೇಳಿದ್ದೇನು?

ಸೋಲಿಸಿ ಸುಮ್ಮನಿರಪ್ಪ ಎಂದಿದ್ದಾರೆ

ಸೋಲಿಸಿ ಸುಮ್ಮನಿರಪ್ಪ ಎಂದಿದ್ದಾರೆ

ಸತ್ತ ಕುದುರೆ ಮಾತನಾಡುತ್ತಿವೆ ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿದ ಪುಟ್ಟರಾಜು, ಸೋತವರು ಸತ್ತ ರೀತಿಯಲ್ಲಿ ರಾಜಕಾರಣ ಮಾಡಬೇಕಿದೆ ಎಂದರು.

ನಾಗಮಂಗಲ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ 52 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಜನರು ಚಲುವರಾಯಸ್ವಾಮಿ ಅವರನ್ನು ಸೋಲಿಸಿ ಸುಮ್ಮನಿರಪ್ಪ ಎಂದಿದ್ದರು. ಅವರಿಗೆ ಅಗೌರವ ತೋರಿಸುವ ಸಲುವಾಗಿ ನಾನು ಅವರನ್ನು ಟೀಕಿಸಿಲ್ಲ ಎಂದು ಸ್ಪಷ್ಟಡಿಸಿದರು.

English summary
Minister CS Puttaraju challenged Congress leader N Chaluvarayaswamy for open debate on his political journey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X