ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ಬಸ್‌ ಅಪಘಾತ: ಬದುಕಿ ಬಂದವರು ಘಟನೆ ಬಗ್ಗೆ ಹೇಳಿದ್ದು ಹೀಗೆ

|
Google Oneindia Kannada News

Recommended Video

Mandya Bus incident : ಮಂಡ್ಯ ದುರಂತದಲ್ಲಿ ಬದುಕುಳಿದ ಯುವಕ ಹೇಳಿದ್ದು ಹೀಗೆ | Oneindia Kannada

ಮಂಡ್ಯ, ನವೆಂಬರ್ 24: ಖಾಸಗಿ ಬಸ್ ನಾಲೆಗೆ ಬಿದ್ದು 25 ಕ್ಕೂ ಹೆಚ್ಚು ಜನರನ್ನು ಯಮಲೋಕಕ್ಕೆ ಅಟ್ಟಿದ ಭೀಕರ ಘಟನೆಯಲ್ಲಿ ಸಾವಿನ ದವಡೆಯಿಂದ ಪಾರಾದ ರೋಹಿತ್‌ ಆ ಭೀಕರ ಘಟನೆ ನಡೆದ ಬಗೆಯನ್ನು ಹೆದರುತ್ತಲೇ ನೆನಪು ಮಾಡಿಕೊಂಡಿದ್ದಾರೆ.

ಕನಗನಮರಡಿಯಲ್ಲಿ ಶಾಲೆ ಮುಗಿಸಿ ಅದೇ ಖಾಸಗಿ ಬಸ್‌ನಲ್ಲಿ ಸಹಪಾಠಿಗಳ ಜೊತೆ ರೋಹಿತ್ ವಾಪಸ್ ಬರುತ್ತಿದ್ದ, ಇನ್ನೇನು ತನ್ನ ಊರು ವದೇಸಮುದ್ರ ಕೆಲವೇ ನಿಮಿಷಗಳಲ್ಲಿ ಮುಟ್ಟುತ್ತದೆ ಎನ್ನುವಷ್ಟರಲ್ಲಿ ಬಸ್ಸು ನಾಲೆಯೊಳಕ್ಕೆ ಬಿದ್ದು ಬಿಟ್ಟಿದೆ.

ಮಂಡ್ಯ ಭೀಕರ ದುರಂತ LIVE:ಕಣ್ಣೀರು ಸುರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯ ಭೀಕರ ದುರಂತ LIVE:ಕಣ್ಣೀರು ಸುರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ

14 ವರ್ಷದ ರೋಹಿತ್ ತಕ್ಷಣವೇ ಬಸ್ಸಿನ ಕಿಟಕಿ ಗಾಜು ಒಡೆದುಕೊಂಡು ಬಸ್ಸಿನ ಮೇಲ್ಭಾಗಕ್ಕೆ ಬಂದಿದ್ದಾನೆ. ಅದೇ ಬಸ್ಸಿನಲ್ಲಿದ್ದು ಬಸ್ಸು ಬಾಲೆಗೆ ಬಿದ್ದಾಗ ಬಚಾವಾಗಿ ಹೊರ ಬಂದ ಗಿರೀಶ್‌ ಎಂಬಾತನ ಸಹಾಯದಿಂದ ರೋಹಿತ್ ನಾಲೆಯ ದಡ ತಲುಪಿಕೊಂಡಿದ್ದಾನೆ.

'ಕಂಡಕ್ಟರ್‌ ಮತ್ತು ಡ್ರೈವರ್‌ ಹಾರಿಬಿಟ್ಟರು'

'ಕಂಡಕ್ಟರ್‌ ಮತ್ತು ಡ್ರೈವರ್‌ ಹಾರಿಬಿಟ್ಟರು'

ಬಸ್ಸು ನಾಲೆಗೆ ಬೀಳುವ ಮುನ್ನಾ ಕಂಡಕ್ಟರ್‌ ಮತ್ತು ಡ್ರೈವರ್‌ಗಳು ಬಸ್ಸು ಬಿಟ್ಟು ಹಾರಿದ್ದನ್ನು ನಾನು ನೋಡಿದೆ ಎಂದು ರೋಹಿತ್ ನೆನಪು ಮಾಡಿಕೊಂಡಿದ್ದಾನೆ. ತನ್ನ ಜೊತೆಗೆ ಬಸ್ಸಿನಲ್ಲಿದ್ದ ತನ್ನದೇ ಸಹಪಾಠಿಗಳಾದ ರವಿಕುಮಾರ್, ಪ್ರಶಾಂತ್, ಪ್ರೀತಿ ಇನ್ನೂ ಹಲವು ಜನ ನೀರಿನಲ್ಲಿ ಮುಳುಗಿದ್ದನ್ನು ಏಳನೇ ತರಗತಿ ಹುಡುಗ ರೋಹಿತ್ ಕಣ್ಣಾರೆ ನೋಡಿದ್ದಾನೆ.

ತಂದೆಯ ಕಾರ್ಯ ಮುಗಿಸಿ ಬರುವಾಗ ಎದುರಾದ ಯಮರಾಯ! ತಂದೆಯ ಕಾರ್ಯ ಮುಗಿಸಿ ಬರುವಾಗ ಎದುರಾದ ಯಮರಾಯ!

ವದೇಸಮುದ್ರದ ನಿವಾಸಿಗಳೇ ಹೆಚ್ಚು

ವದೇಸಮುದ್ರದ ನಿವಾಸಿಗಳೇ ಹೆಚ್ಚು

ತನ್ನ ಊರು ವದೇಸಮುದ್ರದ ನಿವಾಸಿಗಳೇ ಬಸ್ಸಿನಲ್ಲಿ ಹೆಚ್ಚಿಗಿದ್ದರು, ಬಸ್ಸು ನೀರಿಗೆ ಬಿದ್ದಾಗ ಎಲ್ಲರೂ ಕೂಗಿಕೊಳ್ಳುತ್ತಿದ್ದರು, ಆದರೆ ಎಲ್ಲರೂ ಸತ್ತು ಹೋದರು ಎಂದು ಆ ಘಟನೆಯ ಭೀಕರೆತೆಯನ್ನು ನಡುಗುವ ವಿವರಿಸಿದ್ದಾನೆ ರೋಹಿತ್. ಬಸ್ಸಿನಲ್ಲಿ ಸುಮಾರು 35 ಜನರಿದ್ದರು ಎಂದು ರೋಹಿತ್ ಹೇಳಿದ್ದಾನೆ.

ಮಂಡ್ಯ ಬಸ್ ದುರಂತ: ದುಃಖ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಮಂಡ್ಯ ಬಸ್ ದುರಂತ: ದುಃಖ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ರಾಹುಲ್ ಗಾಂಧಿ

'ಕಂಡಕ್ಟರ್‌ ಕೂಗಿಕೊಂಡರು'

'ಕಂಡಕ್ಟರ್‌ ಕೂಗಿಕೊಂಡರು'

ಬಸ್ಸು ನಾಲೆಗೆ ಬೀಳುವ ಮೊದಲು ಕಂಡಕ್ಟರ್‌ ಜೋರಾಗಿ ಕೂಗಿದ್ದು ರೋಹಿತ್‌ಗೆ ನೆನಪಿದೆ. ಗಟ್ಟಿಯಾಗಿ ಹಿಡಿದುಕೊಳ್ಳಿ ಡ್ರೈವರ್ ಬ್ರೇಕ್‌ ಹೊಡೆಯತ್ತಾರೆ ಎಂದು ಕಂಡಕ್ಟರ್‌ ಹೇಳಿದರಂತೆ, ಎಲ್ಲರೂ ಆತನ ಸೂಚನೆ ಪಾಲಿಸುವಷ್ಟರಲ್ಲಿ ಅವರೇ ಬಸ್ಸಿನಿಂದ ಕೆಳಕ್ಕೆ ಹಾರಿಬಿಟ್ಟರು ಎಂಬುದು ರೋಹಿತ್ ಹೇಳಿಕೆ.

ಘಟನೆ ನಡೆದಿದ್ದು ಹೇಗೆ?

ಘಟನೆ ನಡೆದಿದ್ದು ಹೇಗೆ?

ಗಿರೀಶ್ ಪ್ರಕಾರ ಬಸ್ಸು ನಿಧಾಣವಾಗಿಯೇ ಹೋಗುತ್ತಿತ್ತು. ಎದುರಿಗಿನಿಂದ ವಾಹನವೊಂದು ಬಂತು ಹಾಗಾಗಿ ಬಸ್ಸು ಸ್ವಲ್ಪ ಪಕ್ಕಕ್ಕೆ ತಿರುಗಿಸಿದರು ಆದರೆ ಅದು ವಾಪಸ್ ರಸ್ತೆಯ ಕಡೆ ಬರದೇ ನೇರವಾಗಿ ನಾಲೆ ಒಳಗೆ ಹೋಗಿಬಿಟ್ಟಿತು. ಬಸ್ಸಿನ ಒಳಕ್ಕೆ ನೀರು ತುಂಬಿಕೊಳ್ಳುತ್ತಿದ್ದಂತೆ ಗಿರೀಶ್‌ ಕಿಟಕಿ ಗಾಜು ಒಡೆದು ಮೇಲೆ ಬಂದಿದ್ದಾರೆ.

English summary
Rohit and Girish the survivors of Mandya bus accident. They are still in deep shock. They talked to media and talked about incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X