ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಮಂಡ್ಯ: ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 29 ಶಾಲಾ ಮಕ್ಕಳು ಅಸ್ವಸ್ಥ

|
Google Oneindia Kannada News

ಮಂಡ್ಯ, ಸೆಪ್ಟೆಂಬರ್ 16: ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟವನ್ನು ಸರ್ಕಾರಿ ಶಾಲೆಗಳಲ್ಲಿ ನೀಡಲಾಗುತ್ತದೆ. ಮುಂಜಾನೆ ಪಾಠವನ್ನು ಕೇಳಿದ್ದ ಮಕ್ಕಳು ಮಧ್ಯಾಹ್ನ ಹಸಿವಿನಿಂದ ಊಟವನ್ನು ಸೇವಿಸಿ ಅಸ್ವಸ್ಥರಾಗಿದ್ದಾರೆ. ಮಂಡ್ಯ ಜಿಲ್ಲೆಯ ಅಂಬರಹಳ್ಳಿ ಶಾಲೆಯ ಮಕ್ಕಳು ಹಲ್ಲಿ ಬಿದ್ದಿದ್ದ ಊಟವನ್ನು ಸೇವಿಸಿ ಅಸ್ವಸ್ಥರಾಗಿದ್ದಾರೆ.

ಮಂಡ್ಯ ಜಿಲ್ಲೆ, ಮದ್ದೂರು ತಾಲೂಕಿನ ಅಂಬರಹಳ್ಳಿಯಲ್ಲಿನ ಸರ್ಕಾರಿ ಶಾಲೆ 29 ವಿದ್ಯಾರ್ಥಿಗಳು ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ ಮಕ್ಕಳ ಅಸ್ವಸ್ಥರಾಗಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನ ನೀಡಿದ್ದ ಬಿಸಿಯೂಟ ಸೇವನೆಯಿಂದ ಈ ಅವಘಡ ಸಂಭವಿಸಿದೆ. ಊಟವನ್ನು ಸೇವಿಸಿದ್ದವರ ಪೈಕಿ 19 ಹೆಣ್ಣು ಮಕ್ಕಳು, 10 ಗಂಡು ಮಕ್ಕಳು ಅಸ್ವಸ್ಥರಾಗಿದ್ದಾರೆ.

Mandya:29 school children are sick after eating food that has fallen from a lizard

ಕೆಎಂ ದೊಡ್ಡಿ ಪೊಲೀಸರಿಂದ ಸ್ಥಳಕ್ಕೆ ಭೇಟಿ ಪರಿಶೀಲನೆ
ಬಿಸಿಯೂಟವನ್ನು ಸೇವಿಸಿದ ಬಳಿಕ ಮಕ್ಕಳಿಗೆ ತೀವ್ರ ವಾಂತಿಯಿಂದ ಅಸ್ವಸ್ಥರಾಗಿದ್ದರು. ಅಸ್ವಸ್ಥಗೊಂಡಿದ್ದ 19 ಹೆಣ್ಣು ಮಕ್ಕಳು, 10 ಗಂಡು ಮಕ್ಕಳು ಮಂಡ್ಯ ಜಿಲ್ಲೆಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಕೆಎಂ ದೊಡ್ಡಿ ಪೊಲೀಸರು ಸಹ ಸ್ಥಳಕ್ಕೆ ಭೇಟಿಯನ್ನು ನೀಡಿ ಮಕ್ಕಳು ಅಸ್ವಸ್ಥರಾಗಲು ಕಾರಣವೇನು ಎಂಬುದನ್ನು ಪರಿಶೀಲನೆಯನ್ನು ನಡೆಸಿದ್ದಾರೆ. ಇನ್ನು ಶಾಲೆಯಲ್ಲಿ ಬಿಸಿಯೂಟವನ್ನು ತಯಾರು ಮಾಡುವವರು ಮತ್ತು ಕೆಲವು ಅಸ್ವಸ್ಥ ಮಕ್ಕಳ ಹೇಳಿಕೆಯನ್ನು ಸಹ ಕೆಎಂ ದೊಡ್ಡಿ ಪೊಲೀಸರು ಪಡೆದುಕೊಂಡಿದ್ದಾರೆ.

Mandya:29 school children are sick after eating food that has fallen from a lizard

ಮಕ್ಕಳು ಆರೋಗ್ಯ ಸ್ಥಿರ
ಮಕ್ಕಳು ಬಿಸಿಯೂಟವನ್ನು ತಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ಕರೆತರಲಾಗಿತ್ತು. 29 ಮಕ್ಕಳಿಗೂ ಚಿಕಿತ್ಸೆಯನ್ನು ನೀಡಲಾಗಿದೆ. ಹಲ್ಲಿ ಬಿದ್ದಿತ್ತು ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಆದರೆ ಮೊದಲು ಮಕ್ಕಳಿಗೆ ಚಿಕಿತ್ಸೆಯನ್ನು ಕೊಡುವ ಕೆಲಸವನ್ನು ನಾವು ಮಾಡಿದ್ದೇವೆ. ಮಕ್ಕಳ ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಮಿಮ್ಸ್ ಆಸ್ಪತ್ರೆಯ ಮೂಲಗಳು ಸ್ಪಷ್ಟಪಡಿಸಿವೆ.

English summary
Mid-day meals are provided to children in government schools. The children who had taken lessons in the morning are sick after eating their lunch due to hunger in the afternoon. Children of Ambarahalli school in Mandya district fell ill after eating food that had a lizard on it, Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X