ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ಭೀಕರ ದುರಂತ: ದುರಂತದಲ್ಲಿ ಮೃತಪಟ್ಟ 25 ಜನರ ಹೆಸರುಗಳು

|
Google Oneindia Kannada News

Recommended Video

      Mandya Bus Incident:ಮಂಡ್ಯದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ | Oneindia Kannada

      ಮಂಡ್ಯ, ನವೆಂಬರ್ 24: ಮಂಡ್ಯದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತರಾದವರ ಸಂಖ್ಯೆ ಮತ್ತಷ್ಟು ಹೆಚ್ಚುತ್ತಲೇ ಇದೆ.

      ಈಗಾಗಲೇ ಸುಮಾರು 22 ಮೃತದೇಹಗಳನ್ನು ಬಸ್ಸಿನಿಂದ ಹೊರತೆಗೆಯಲಾಗಿದೆ. ಬಸ್ಸಿನಲ್ಲಿ ಸುಮಾರು 30 ಕ್ಕೂ ಹೆಚ್ಚು ಜನರಿದ್ದರು ಎನ್ನಲಾಗಿದೆ.

      Big Breaking:ಮಂಡ್ಯದಲ್ಲಿ ಭೀಕರ ಬಸ್ ಅಪಘಾತ:20ಕ್ಕೂ ಹೆಚ್ಚು ಜನ ಸಾವುBig Breaking:ಮಂಡ್ಯದಲ್ಲಿ ಭೀಕರ ಬಸ್ ಅಪಘಾತ:20ಕ್ಕೂ ಹೆಚ್ಚು ಜನ ಸಾವು

      ಇಂದು ಮಧ್ಯಾಹ್ನ ಸುಮಾರು 12 ಗಂಟೆಯ ಸುಮಾರಿಗೆ ಪಾಂಡವಪುರದಿಂದ ಮಂಡ್ಯಕ್ಕೆ ತೆರಳುತ್ತಿದ್ದ ರಾಜಕುಮಾರ್ ಎಂಬ ಖಾಸಗಿ ಬಸ್ಸೊಂದು ನಾಲೆಗೆ ಉರುಳಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

      Madhya bus accident: Live updates

      ಈ ಘಟನೆಗೆ ಸಂಬಂಧಿಸಿದ ಕ್ಷಣ ಕ್ಷಣದ ಅಪ್ಡೇಟ್ಸ್ ಅನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.

      Newest FirstOldest First
      6:35 PM, 24 Nov

      ದುರಸ್ತಿ ಆಗಿದ್ದ ಬಸ್‌ ಅನ್ನು ರಸ್ತೆಯಲ್ಲಿ ಓಡಾಡಲು ಅವಕಾಶ ಕೊಟ್ಟ ತಾಲ್ಲೂಕಿನ ಆರ್‌ಟಿಓ ಅಧಿಕಾರಿಯನ್ನು ಅಮಾನತು ಗೊಳಿಸಿ ಸಂಚಾರಿ ಇಲಾಖೆ ಆದೇಶ ಹೊರಡಿಸಿದೆ.
      6:02 PM, 24 Nov

      30 ವೈದ್ಯರಿಂದ ಶವಗಳ ಮರಣೋತ್ತರ ಪರೀಕ್ಷೆ. ಪರೀಕ್ಷೆ ಬಳಿಕ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರ.
      5:36 PM, 24 Nov

      ಮೃತಪಟ್ಟವರ ಹೆಸರುಗಳು ಇಂತಿವೆ: ಪವಿತ್ರ, ಈರಯ್ಯ, ಕಲ್ಪನ, ಚಂದ್ರು, ದೇವರಾಜ್, ಸಿದ್ದಯ್ಯ, ಚಿಕ್ಕಯ್ಯ, ಪ್ರೀತಿ, ಜಯಲಕ್ಷೀ, ಶಶಿಕಲಾ, ಪಾಪಯ್ಯ, ಸಾವಿತ್ರಮ್ಮ, ಮಂಜುಳಾ, ಅನುಷಾ, ಕಮಲಮ್ಮ, ಸುಮಾ, ಯಶೋಧ, ರತ್ನಮ್ಮ, ಸೌಮ್ಯ, ಪ್ರಶಾಂತ್, ಕೆಂಪಯ್ಯ, ನಿಂಗಮ್ಮ, ರಾಧಾ, ಪ್ರೇಕ್ಷಾ ಹಾಗೂ ಲಿಖಿತ್
      5:29 PM, 24 Nov

      ಘಟನೆ ನಡೆದ ಸ್ಥಳದಲ್ಲಿಯೇ ಶವಗಳ ಮರಣೋತ್ತರ ಪರೀಕ್ಷೆಗೆ ನಿರ್ಧಾರ. ಆಸ್ಪತ್ರೆಗೆ ಕೊಂಡೊಯ್ದರೆ ಸ್ಥಳದ ಅಭಾವ ಮತ್ತು ಜನರ ಸೇರುವಿಕೆ ಹೆಚ್ಚಾಗುವ ಆತಂಕ.
      4:23 PM, 24 Nov

      ಸುಮಾರು 12 ಅಡಿ ಆಳದ ಕಾಲುವೆಗೆ ಉರುಳಿದ್ದ ಬಸ್
      4:18 PM, 24 Nov

      ಡ್ರೈವರ್ ಮತ್ತು ಕಂಡಕ್ಟರ್ ಇಬ್ಬರೂ ಅಪಘಾತವಾಗುತ್ತಿದ್ದಂತೆಯೇ ಬಸ್ಸಿನಿಂದ ಹಾರಿ ಪರಾರಿಯಾಗಿದ್ದಾರೆ ಎಂದು ಬದುಕುಳಿದ ಬಾಲಕ ಲೋಹಿತ್ ಹೇಳಿದ್ದಾನೆ.
      4:16 PM, 24 Nov

      KA: 19, A: 5676 ನಂಬರಿನ ಖಾಸಗೀ ಬಸ್
      Advertisement
      3:51 PM, 24 Nov

      ವದೇಸಮುದ್ರದ ಒಂದೇ ಕುಟುಂಬದ ನಾಲ್ವರು ಸಾವು
      3:37 PM, 24 Nov

      ಸ್ಟೀರಿಂಗ್ ಲಾಕ್ ಆಗಿ, ಚಾಲಕನ ನಿಯಂತ್ರಣ ತಪ್ಪಿ ಈ ದುರಂತ ಸಭವಿಸಿದೆ ಎನ್ನಲಾಗುತ್ತಿದೆ.
      3:34 PM, 24 Nov

      ಮೃತರ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ಘೋಷಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ
      3:33 PM, 24 Nov

      ಘಟನೆ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ
      2:47 PM, 24 Nov

      50 ಕಿಮೀ ವೇಗದಲ್ಲಿದ್ದ ಬಸ್
      Advertisement
      2:46 PM, 24 Nov

      ತಿರುವಿನಲ್ಲಿ ಬಸ್ಸನ್ನು ಎಡಕ್ಕೆ ತಿರುಗಿಸುವಾಗ ಈ ಘಟನೆ
      2:42 PM, 24 Nov

      ಘಟನೆಯಲ್ಲಿ ಗಿರೀಶ್ ಎಂಬ ಇನ್ನೊಬ್ಬರೂ ಬದುಕಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದೆ.
      2:36 PM, 24 Nov

      ಈ ದುರ್ಘಟನೆಯಲ್ಲಿ ಓರ್ವ ಚಿಕ್ಕ ಬಾಲಕನೂ ಬದುಕಿದ್ದಾನೆ ಎನ್ನಲಾಗಿದೆ.
      2:34 PM, 24 Nov

      5 ಮಕ್ಕಳು ಸೇರಿದಂತೆ 25 ಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
      2:32 PM, 24 Nov

      ಮಂಡ್ಯ, ಮೈಸೂರಿನಿಂದ ಆರು ಅಗ್ನಿಶಾಮಕ‌ ಸಿಬ್ಬಂದಿ ಕಾರ್ಯಾಚರಣೆ
      2:31 PM, 24 Nov

      ಸುತ್ತ ಮುತ್ತಲ ಗ್ರಾಮಸ್ಥರಿಂದ ಕಾರ್ಯಾಚರಣೆ
      2:20 PM, 24 Nov

      ಇಂದು ನಡೆಯಬೇಕಿದ್ದ ಚಲನಚಿತ್ರ ಪ್ರಶಸ್ತಿ ಸಮಾರಂಭ ಸೇರಿದಂತೆ ಮುಖ್ಯಮಂತ್ರಿಯವರು ಭಾಗವಹಿಸಲಿದ್ದ ಎಲ್ಲಾ ಕಾರ್ಯಕ್ರಮಗಳನ್ನೂ ರದ್ದುಗೊಳಿಸಲಾಗಿದೆ.
      2:11 PM, 24 Nov

      ಈಗಾಗಲೇ ನಾಲೆಯಿಂದ 22 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
      2:10 PM, 24 Nov

      ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತೆರಳಲಿದ್ದು, ಈಗಾಗಲೇ ಅವರು ಮಂಡ್ಯದತ್ತ ಪ್ರಯಾಣ ಬೆಳೆಸಿದ್ದಾರೆ.
      2:10 PM, 24 Nov

      ಚಾಲಕನ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಚಾಲಕನ ಕುರಿತು ಯಾವುದೇ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ.

      English summary
      Madhya bus accident: Live updates in Kannada: More than 18 people died after a private bus fell into a channel near Pandavapura in Mandya district, Karnataka. More details awaited.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X