ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಷತ್‌ ಚುನಾವಣೆಯಲ್ಲಿ ಮಧು ಗೆಲುವು: ಹಬ್ಬದಂತೆ ಆಚರಿಸಿದ ಕಾಂಗ್ರೆಸ್‌ ಕಾರ್ಯಕರ್ತರು

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮದ್ದೂರು, ಜೂನ್ 17: ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡರನ್ನು ಭಾರತೀನಗರದಲ್ಲಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿ ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿ ಬರಮಾಡಿಕೊಂಡರು.

ಭಾರತೀನಗರದ ಕಬ್ಬಾಳಮ್ಮ ದೇವಸ್ಥಾನದಲ್ಲಿ ಪೂಜೆಸಲ್ಲಿಸಿ ನಂತರ ತೆರದ ವಾಹನದಲ್ಲಿ ಜಿ.ಮಾದೇಗೌಡರ ಭಾವಚಿತ್ರವನ್ನಿಟ್ಟು ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ತಮಟೆ ನಗಾರಿಗಳೊಂದಿಗೆ ಮೆರವಣಿಗೆ ನಡೆಸಿ ಜೈಕಾರ ಹಾಕಿ ಸಂಭ್ರಮಿಸಿದರು. ರಸ್ತೆಯುದ್ದಕ್ಕೂ ಅಭಿಮಾನಿಗಳು, ಕಾರ್ಯಕರ್ತರು ಜಮಾಯಿಸಿ ಹಾರ-ತುರಾಯಿಗಳನ್ನು ಹಿಡಿದು ಅಭಿನಂದಿಸಿದರೆ ಮಹಿಳೆಯರು ಬೆಲ್ಲದ ಆರತಿ ಎತ್ತಿ ಪಟಾಕಿ ಸಿಡಿಸಿ ಸ್ವಾಗತಿಸಿದರು.

 ಪದವೀಧರ ಚುನಾವಣೆಯಲ್ಲಿ ಗೆಲುವಿನ ಕಾರಣ ಬಿಚ್ಚಿಟ್ಟ ಚಲುವರಾಯಸ್ವಾಮಿ ಪದವೀಧರ ಚುನಾವಣೆಯಲ್ಲಿ ಗೆಲುವಿನ ಕಾರಣ ಬಿಚ್ಚಿಟ್ಟ ಚಲುವರಾಯಸ್ವಾಮಿ

ಭಾರತೀನಗರದ ಹಲಗೂರು ವೃತ್ತದ ಬಳಿ ಕ್ರೇನ್ ಮೂಲಕ ಭಾರಿ ಗಾತ್ರದ ಕೇಸರಿ, ಬಿಳಿ, ಹಸಿರು ಬಣ್ಣದ ಹೂವಿನ ಹಾರವನ್ನು ಹಾಕಿ ಮಧು ಜಿ. ಮಾದೇಗೌಡರಿಗೆ ಜೈಕಾರ ಹಾಕಿದರು. ಇನ್ನು ಕೆಲವು ಕಾರ್ಯಕರ್ತರು ಮಧು ಜಿ. ಮಾದೇಗೌಡರ ಗೆಲುವನ್ನು ತಮ್ಮ ಗೆಲುವೆಂದು ಕುಣಿದು ಕುಪ್ಪಳಿಸಿದರು.

Madhu G madegowda win in MLC election: Congress Activists celebrates like a festival in KM Doddi

ನಂತರ ಮೆಳ್ಳಹಳ್ಳಿ ಶನೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಭಾರತಿ ಕಾಲೇಜಿನ ಮುಖ್ಯದ್ವಾರಕ್ಕೆ ಆಗಮಿಸುತ್ತಿದ್ದಂತೆಯೇ ಕಾಲೇಜಿನ ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು ಚಪ್ಪಾಳೆ ಹೊಡೆಯುವ ಮೂಲಕ ಬರಮಾಡಿಕೊಂಡರೆ ಉಪನ್ಯಾಸಕಿಯರು ಯಾರ ದೃಷ್ಠಿಯು ಬೀಳದಿರಲಿ ಎಂದು ಬೆಲ್ಲದ ಆರತಿಯನ್ನು ಎತ್ತಿ ಸಿಹಿ ತಿನಿಸುವ ಮೂಲಕ ಶುಭಹಾರೈಸಿದರು.

ದಕ್ಷಿಣ ಪದವೀಧರರ ಕ್ಷೇತ್ರ: ಕಾಂಗ್ರೆಸ್‌ನ ಮಧು ಮಾದೇಗೌಡಗೆ 12,205 ಮತಗಳ ಭಾರಿ ಜಯದಕ್ಷಿಣ ಪದವೀಧರರ ಕ್ಷೇತ್ರ: ಕಾಂಗ್ರೆಸ್‌ನ ಮಧು ಮಾದೇಗೌಡಗೆ 12,205 ಮತಗಳ ಭಾರಿ ಜಯ

ಪ್ರಾಮಾಣೀಕವಾಗಿ ಸೇವೆ ಸಲ್ಲಿಸಿ ಋಣ ತೀರಿಸುತ್ತೇನೆ
ಇದೇ ವೇಳೆ ಮಧು ಜಿ ಮಾದೇಗೌಡ ಅವರು ಮಾತನಾಡಿ, ''ಈ ಭಾಗದ ಕರ್ಯಕರ್ತರು, ಅಭಿಮಾನಿಗಳು ಅದ್ದೂರಿಯಾಗಿ ಮೆರವಣಿಗೆ ನಡೆಸಿ ಬರಮಾಡಿಕೊಂಡಿರುವುದು ನನಗೆ ಸಂತಸ ತಂದಿದೆ. ಈ ಒಂದು ಚುನಾವಣೆಯಲ್ಲಿ ಈ ಭಾಗದ ಎಲ್ಲಾ ಸಮಸ್ತ ಬಂಧುಗಳು ಪಕ್ಷಾತೀತವಾಗಿ ಸಹಾಯ ಮಾಡಿದ್ದಾರೆ. ಎಲ್ಲರಿಗೂ ಸಹ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಸದಾ ಹೀಗೆ ಮುಂದುವರೆಯಲಿ. ನಿಮ್ಮ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿರುವುದು ಸೌಭಾಗ್ಯ. ನಾನು ಪ್ರಾಮಾಣೀಕವಾಗಿ ಸೇವೆ ಸಲ್ಲಿಸುವ ಮೂಲಕ ನಿಮ್ಮ ಋಣವನ್ನು ತೀರಿಸುತ್ತೇನೆ'' ಎಂದರು.

Madhu G madegowda win in MLC election: Congress Activists celebrates like a festival in KM Doddi

ಪುತ್ರನ ಗೆಲುವಿಗೆ ಶ್ರಮಿಸಲು ನಾಗಮಣಿ ಮನವಿ
ವಿಧಾನ ಪರಿಷತ್‌ ಚುನಾವಣೆಯಲ್ಲಿ ನೀವು ಗೆದ್ದಂತೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ನನ್ನ ಪುತ್ರ ಎಸ್. ಗುರುಚರಣ್ ಗೆಲುವಿಗೆ ಶ್ರಮಿಸುವಂತೆ ವಿಧಾನ ಪರಿಷತ್ ಮಾಜಿ ಸದಸ್ಯ ದಿ. ಎಸ್.ಎಂ. ಶಂಕರ್ ಪತ್ನಿ ನಾಗವೇಣಿ ಶಂಕರ್ ಮನವಿ ಮಾಡಿದರು. ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಧು ಜಿ. ಮಾದೇಗೌಡ ತಾಲೂಕಿನ ಸೋಮನಹಳ್ಳಿಯ ದಿ. ಎಸ್.ಎಂ. ಶಂಕರ್ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ ಆಶೀರ್ವಾದ ಬೇಡಿದ ಸಂದರ್ಭದಲ್ಲಿ ಪುತ್ರ ಗುರುಚರಣ್ ಗೆಲುವಿಗೆ ಶ್ರಮಿಸುವಂತೆ ಕೇಳಿಕೊಂಡರು

Madhu G madegowda win in MLC election: Congress Activists celebrates like a festival in KM Doddi

ಪದವೀಧರ ಚುನಾವಣೆಯಲ್ಲಿ ನೀವು ಮತ್ತು ಗುರುಚರಣ್ ಹಾಗೂ ಆತನ ಬೆಂಬಲಿಗರು ಪ್ರತಿಷ್ಠೆಯಾಗಿ ತೆಗೆದುಕೊಂಡು ಹೋರಾಟ ಮಾಡಿದ್ದೀರಿ. ಇದರ ಫಲವಾಗಿ ನಿಮಗೆ ಗೆಲುವು ಸಾಧ್ಯವಾಗಿದೆ. ಇದೇ ಹೋರಾಟ ಮತ್ತು ಛಲ ವಿಧಾನ ಸಭಾ ಚುನಾವಣೆಯಲ್ಲೂ ಇರಬೇಕು. ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್. ಗುರುಚರಣ್ ಗೆಲುವಿಗೆ ಎಲ್ಲರೂ ಶಕ್ತಿ ಮೀರಿ ದುಡಿಯಬೇಕು ಎಂದು ನಾಗವೇಣಿ ಶಂಕರ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಧು ಜಿ. ಮಾದೇಗೌಡ, ವಿಧಾನ ಸಭಾ ಚುನಾವಣೆಯಲ್ಲಿ ನಿಮ್ಮ ಪುತ್ರ ಗುರುಚರಣ್ ಗೆಲ್ಲಿಸುವುದು ನನ್ನ ಜವಾಬ್ದಾರಿಯಾಗಿದೆ. ಈ ವಿಚಾರದಲ್ಲಿ ನೀವು ನನ್ನ ಮೇಲೆ ನಂಬಿಕೆ ಇಡಿ ಎಂದು ಭರವಸೆ ನೀಡಿದರು

English summary
Congress activists grand welcome to Congress candidate Madhu G Madegowda, who win Legislative Council from South Graduates constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X