ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫಲಿತಾಂಶಕ್ಕೆ ದಿನಗಣನೆ: ಮಂಡ್ಯದಲ್ಲಿ ಭದ್ರತೆಯೇ ದೊಡ್ಡ ತಲೆನೋವು

|
Google Oneindia Kannada News

Recommended Video

Mandya: ಮಂಡ್ಯದಲ್ಲಿ ಬಾರಿ ಕುತೂಹಲ ಕೆರಳಿಸಿದ ಫಲಿತಾಂಶ | ಮೇ 23ರಂದು ಮಂಡ್ಯ ನಿಶ್ಯಬ್ಧ

ಮಂಡ್ಯ, ಮೇ 17: ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳಲು ಇನ್ನು ಐದು ದಿನಗಳು ಮಾತ್ರ ಬಾಕಿ ಇದೆ. ಮಂಡ್ಯದಲ್ಲಿ ಭದ್ರತೆ ಒದಗಿಸುವುದೇ ಚುನಾವಣಾ ಆಯೋಗಕ್ಕೆ ದೊಡ್ಡ ತಲೆನೋವಾಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಈಗಾಗಲೇ ಒಂದಷ್ಟು ಮಂದಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಪರವಾಗಿದ್ದರೆ ಇನ್ನೊಂದಷ್ಟು ಜನ ಸ್ವತಂತ್ರ ಅಭ್ಯರ್ಥಿ ಸುಮಲತಾ ಪರವಾಗಿದ್ದಾರೆ. ವಾದ ವಿವಾದ ಜಗಳ ನಿತ್ಯವೂ ನಡೆಯುತ್ತಿದೆ. ಇನ್ನೋದೆಡೆ ಗೌಪ್ಯವಾಗಿ ಬೆಟ್ಟಿಂಗ್ ಕಟ್ಟಿದವರೂ ಇದ್ದಾರೆ.

ಮಂಡ್ಯದಲ್ಲಿ ನಿಖಿಲ್ ವಿರುದ್ದ ರೇವಣ್ಣ 'ನಿಂಬೆಹಣ್ಣು' ಪ್ರಯೋಗ? ಸಿ ಟಿ ರವಿಮಂಡ್ಯದಲ್ಲಿ ನಿಖಿಲ್ ವಿರುದ್ದ ರೇವಣ್ಣ 'ನಿಂಬೆಹಣ್ಣು' ಪ್ರಯೋಗ? ಸಿ ಟಿ ರವಿ

ಹೀಗಿರುವಾಗ ಫಲಿತಾಂಶ ಹೊರಬಂದ ಬಳಿಕ ಮಂಡ್ಯದ ಸ್ಥಿತಿ ಏನಾಗಬಹುದು ಎನ್ನುವುದೇ ಆತಂಕಕ್ಕೆ ಕಾರಣವಾಗಿದೆ.

ಮಂಡ್ಯ ಭದ್ರತೆ ಕುರಿತು ಮಾಹಿತಿ ಕೇಳಿದ ಆಯೋಗ

ಮಂಡ್ಯ ಭದ್ರತೆ ಕುರಿತು ಮಾಹಿತಿ ಕೇಳಿದ ಆಯೋಗ

ಮೇ 23 ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಮಂಡ್ಯ ಭದ್ರತೆ ಕುರಿತು ಪೊಲೀಸ್ ಮಹಾನಿರ್ದೇಶಕರಿಂದ ಚುನಾವಣಾ ಆಯೋಗ ಮಾಹಿತಿ ಕೇಳಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಮತ್ತು ಎಸ್‍ಪಿ ಜೊತೆಗೆ ಪೊಲೀಸ್ ಮಹಾನಿರ್ದೇಶಕರು ಸಭೆ ನಡೆಸಿದ್ದಾರೆ ಎನ್ನಲಾಗಿದೆ.

ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಲು ಕ್ರಮ

ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಲು ಕ್ರಮ

ಮೇ 22 ರಿಂದಲೇ ಮಂಡ್ಯ ಜಿಲ್ಲೆಯಾದ್ಯಂತ ಕರ್ನಾಟಕ ಪೊಲೀಸ್ ಜೊತೆಗೆ ಸಿಆರ್‌ಪಿಎಫ್ ಅವರು ಗಸ್ತು ತಿರುಗಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಅಹಿತಕರ ಘಟನೆ ನಡೆಯದಂತೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಅನ್ನೋದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಜೊತೆಗೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಮಂಡ್ಯಕ್ಕೆ ಹೆಚ್ಚಿನ ಭದ್ರತೆಗಾಗಿ ಪೊಲೀಸರ ನಿಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮೆರವಣಿಗೆ, ಪಟಾಕಿ ಹೊಡೆದು ಸಂಭ್ರಮ ಇಲ್ಲ

ಮೆರವಣಿಗೆ, ಪಟಾಕಿ ಹೊಡೆದು ಸಂಭ್ರಮ ಇಲ್ಲ

ಮೇ 23ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ಸೆಕ್ಷನ್ 144 ಕಫ್ರ್ಯೂ ಹೇರಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಂಡ್ಯದಲ್ಲಿ 22 ರಿಂದಲೇ ಮದ್ಯದಂಗಡಿ ಕೂಡ ಬಂದ್ ಆಗಲಿದ್ದು, ಎರಡು ದಿನಗಳ ಕಾಲ ಮದ್ಯದಂಗಡಿ ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ. 23 ಮತ್ತು 24ರಂದು ಯಾವುದೇ ಮೆರವಣಿಗೆ ಮಾಡಬಾರದು ಮತ್ತು ಪಟಾಕಿ ಹೊಡೆಯಬಾರದು ಎಂದು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.

ಎರಡು ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ?

ಎರಡು ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ?

ಕೆಎಸ್‌ಆರ್‌ಟಿಸಿ ಮತ್ತು ರೈಲ್ವೇ ನಿಲ್ದಾಣಗಳಿಗೆ ಹೆಚ್ಚಿನ ಭದ್ರತೆ ನೀಡಲಾಗುತ್ತದೆ. ಒಟ್ಟಿನಲ್ಲಿ ಮಂಡ್ಯದಲ್ಲಿ ಮೇ 23ಕ್ಕೆ ಬಂದ್ ವಾತಾವರಣ ಇರಲಿದೆ ಎಂದು ಹೇಳಲಾಗುತ್ತಿದೆ.

ಮಕ್ಕಳಿಗೆ ತೊಂದರೆಯಾಗಬಾರದೆಂದು ಎರಡು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ಇದೆ. ಸಿನಿಮಾ ಥಿಯೇಟರ್, ಮಾಲ್‍ಗಳು ಬಂದ್ ಆಗಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
Lok sabha elections 2019: Lok sabha elections result will be declare on May 23. Mandya security is headache for the Election commission as well as police department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X