ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ಎಕ್ಸಿಟ್ ಪೋಲ್ ನಲ್ಲಿ ಸುಮಲತಾಗೆ ಜಯದ ಸಾಧ್ಯತೆ 50-50

|
Google Oneindia Kannada News

Recommended Video

Exit Poll 2019: ಮಂಡ್ಯ ಎಕ್ಸಿಟ್ ಪೋಲ್ ಪ್ರಕಾರ ಸುಮಲತಾ ಗೆಲುವು 50-50 | Oneindia Kannada

ಲೋಕಸಭೆ ಚುನಾವಣೆ 2019ರಲ್ಲಿ ಇಡೀ ಭಾರತದ ಗಮನ ಸೆಳೆದಿದ್ದ ಕರ್ನಾಟಕದ ಮಂಡ್ಯ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅವರಿಗೆ ಗೆಲುವು ಸಾಧ್ಯವೇ? ಎಂಬ ಪ್ರಶ್ನೆಗೆ ತಕ್ಕಮಟ್ಟಿನ ಉತ್ತರ ಸಿಕ್ಕಿದೆ. ಸದ್ಯ ಈ ಸಮಯಕ್ಕೆ ಲಭ್ಯವಿರುವ ಮಾಹಿತಿಯಂತೆ ಮಂಡ್ಯದಲ್ಲಿ ಸುಮಲತಾ ಅವರ ಗೆಲುವಿನ ಸಾಧ್ಯತೆ 50-50 ಎನ್ನಬಹುದು. ಎಕ್ಸಿಟ್ ಪೋಲ್ ಗಳ ಸರಾಸರಿ ಫಲಿತಾಂಶ ತೆಗೆದುಕೊಂಡರೆ ಸುಮಲತಾ ಅವರು ಗೆಲುವಿಗೆ ಹತ್ತಿರವಾಗಿದ್ದಾರೆ ಎನಿಸಿದರೂ ಅಂತಿಮ ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ.

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 18 ಮತ್ತು 23ರಂದು ಎರಡು ಹಂತದಲ್ಲಿ ಚುನಾವಣೆ ನಡೆದಿತ್ತು. ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿದೆ.

2019 ಎಕ್ಸಿಟ್ ಪೋಲ್ ಸರಾಸರಿ: 'ಚೌಕಿದಾರ್' ಮೋದಿ ಮತ್ತೊಮ್ಮೆ 2019 ಎಕ್ಸಿಟ್ ಪೋಲ್ ಸರಾಸರಿ: 'ಚೌಕಿದಾರ್' ಮೋದಿ ಮತ್ತೊಮ್ಮೆ

ರಾಜ್ಯದ 28 ಕ್ಷೇತ್ರಗಳ ಪೈಕಿ ಬಿಜೆಪಿ ಮಂಡ್ಯ ಹೊರತುಪಡಿಸಿ 27 ಕ್ಷೇತ್ರಗಳಲ್ಲಿ ಕಣಕ್ಕಿಳಿದಿತ್ತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದವು. ಕಾಂಗ್ರೆಸ್ 22, ಜೆಡಿಎಸ್‌ 6 ಸ್ಥಾನಗಳಲ್ಲಿ ಕಣಕ್ಕಿಳಿದಿತ್ತು. ಮಂಡ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಕೂಟದ ಒಮ್ಮತದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಸುಮಲತಾ ಅವರು ಭಾರಿ ಪೈಪೋಟಿ ನೀಡಿರುವುದು ಕಂಡು ಬಂದಿದೆ.

ok Sabha Elections 2019: Mandya Exit poll results aggregate Sumalatha victory 50-50 chance

ನ್ಯೂಸ್ 18-ಐಪಿಎಸ್ಒಎಸ್, ಇಂಡಿಯಾ ಟುಡೇ-ಆಕ್ಸಿಸ್, ಟೈಮ್ಸ್ ನೌ- ವಿಎಂಆರ್, ನ್ಯೂಸ್ ಎಕ್ಸ್ -ನೇತಾ, ರಿಪಬ್ಲಿಟ್ ಭಾರತ್- ಜನ್ ಕಿ ಬಾತ್, ರಿಪಬ್ಲಿಕ್ ಟಿವಿ-ಸಿ ವೋಟರ್, ಎಬಿಪಿ-ಸಿಎಸ್ ಡಿಎಸ್, ಟುಡೇಸ್ ಚಾಣಕ್ಯ, ಇಂಡಿಯಾ ಟಿವಿ-ಸಿಎನ್ ಎಕ್ಸ್, ಎಬಿಪಿ ನ್ಯೂಸ್- ನೆಲ್ಸನ್ ಮುಂತಾದ ಸಂಸ್ಥೆಗಳು ಮತದಾನೋತ್ತರ ಸಮೀಕ್ಷೆ ವರದಿ ನೀಡಿವೆ.

ಸಮೀಕ್ಷೆಗಳ ಸಮೀಕ್ಷೆ : ಕರ್ನಾಟಕದಲ್ಲಿ ಯಾರಿಗೆ ಎಷ್ಟು, ಸ್ಥಾನ?ಸಮೀಕ್ಷೆಗಳ ಸಮೀಕ್ಷೆ : ಕರ್ನಾಟಕದಲ್ಲಿ ಯಾರಿಗೆ ಎಷ್ಟು, ಸ್ಥಾನ?

ಕರ್ನಾಟಕದ 28 ಕ್ಷೇತ್ರಗಳ ಎಕ್ಸಿಟ್ ಪೋಲ್ ಫಲಿತಾಂಶ ಹೀಗಿದೆ: ಒಟ್ಟು ಲಭ್ಯವಿರುವ 8 ರಿಸಲ್ಟ್ ನಲ್ಲಿ ನಾಲ್ಕರಲ್ಲಿ ಸುಮಲತಾ ಗೆಲ್ಲುವ ಸಾಧ್ಯತೆ ಸಿಕ್ಕಿದೆ. ಮಿಕ್ಕಂತೆ ಪ್ರಮುಖ ಮಾಧ್ಯಮ ಸಂಸ್ಥೆಗಳ ವರದಿಯಲ್ಲಿ ಸುಮಲತಾಗೆ ಗೆಲುವಿನ ಮುನ್ಸೂಚನೆ ಸಿಕ್ಕಿಲ್ಲ.

ಟೈಮ್ಸ್ ನೌ ವಿಎಂಆರ್ : ಕರ್ನಾಟಕದಿ ಅರಳಿದ ಬಿಜೆಪಿ, ಮುದುಡಿದ ಕೈ -ತೆನೆ ಟೈಮ್ಸ್ ನೌ ವಿಎಂಆರ್ : ಕರ್ನಾಟಕದಿ ಅರಳಿದ ಬಿಜೆಪಿ, ಮುದುಡಿದ ಕೈ -ತೆನೆ

ನ್ಯೂಸ್ 18 -ಐಪಿಎಸ್ಒಎಸ್: ಎನ್ಡಿಎ 21-23, ಯುಪಿಎ 5-7
ರಿಪಬ್ಲಿಕ್ ಟಿವಿ ಸಿ ವೋಟರ್ : ಬಿಜೆಪಿ : 18, ಕಾಂಗ್ರೆಸ್-ಜೆಡಿಎಸ್ :9, ಇತರೆ 01(ಸುಮಲತಾ)
ಜನ್ ಕೀ ಬಾತ್ : ಬಿಜೆಪಿ 18-20, ಕಾಂಗ್ರೆಸ್-ಜೆಡಿಎಸ್ : 7-10, ಇತರೆ 0-01 (ಸುಮಲತಾ)

ಇಂಡಿಯಾ ಟಿವಿ ಸಮೀಕ್ಷೆ * ಬಿಜೆಪಿ 17 * ಕಾಂಗ್ರೆಸ್ 8 * ಜೆಡಿಎಸ್ 03 * ಇತರೆ 00

ಟೈಮ್ಸ್ ನೌ ವಿಎಂಆರ್ ಸಮೀಕ್ಷೆ * ಎನ್‌ಡಿಎ 21 * ಯುಪಿಎ 7 * ಇತರರು 0

ಮೈ ಆಕ್ಸಿಸ್ * ಎನ್‌ಡಿಎ 23 * ಯುಪಿಎ 4 * ಇತರರು 1 (ಸುಮಲತಾ)

ನ್ಯೂಸ್ ನೇಷನ್ * ಎನ್‌ಡಿಎ 18 * ಯುಪಿಎ 10 * ಇತರರು 0

ಇಂಡಿಯಾ ಟುಡೆ-ಆಕ್ಸಿಸ್ * ಬಿಜೆಪಿ 21-25 * ಕಾಂಗ್ರೆಸ್ - ಜೆಡಿಎಸ್ 03-06 * ಇತರರು 01 (ಸುಮಲತಾ)

ಚಾಣಾಕ್ಯ ಸಮೀಕ್ಷೆ ಪ್ರಕಾರ ಬಿಜೆಪಿ 23 ಮೈತ್ರಿಕೂಟ 5 ಇತರರು 00

English summary
Lok Sabha Elections 2019: Mandya Exit poll results aggregate predicts BJP backed independent candidate Sumalatha's victory 50-50 chance
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X