ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದಲ್ಲಿ ಶುರುವಾಯ್ತು ನವರಂಗಿ ಆಟ: ವೋಟಿಗೆ ಹೊಡೀ 1 ಸಾವಿರ!

|
Google Oneindia Kannada News

ಮಂಡ್ಯ, ಏ 17: ಇಡೀ ದೇಶದ ಗಮನವನ್ನು ತನ್ನತ್ತ ಸೆಳೆದಿರುವ, ಹೈವೋಲ್ಟೇಜ್ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ರಾಜ್ಯದ ಮೊದಲ ಹಂತದಲ್ಲಿ, ಗುರುವಾರ (ಏ 18) ದಂದು ನಡೆಯಲಿದೆ. ಜಿದ್ದಾಜಿದ್ದಿನ ಕಣವಾಗಿ ಏರ್ಪಟ್ಟಿರುವುದರಿಂದ, ಹಲವು ಮತಗಟ್ಟೆಗಳನ್ನು 'ಸೂಕ್ಷ್ಮ' ಎಂದು ಗುರುತಿಸಲಾಗಿದೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ? ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಈ ಬಾರಿಯ ಮಂಡ್ಯ ಚುನಾವಣೆಯಲ್ಲಿ ಹಣಹೆಂಡದ ಹೊಳೆಯೇ ಹರಿಯಲಿದೆ ಎನ್ನುವ ಸುದ್ದಿಯ ನಡುವೆ, ಚುನಾವಣೆಗೆ ಮುನ್ನಾ ದಿನ ಮತದಾರರನ್ನು ಓಲೈಸುವ ಕೆಲಸವೂ ಜೋರಾಗಿ ನಡೆಯುತ್ತಿದೆ ಎನ್ನುವ ಮಾಹಿತಿಯಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಒಂದೊಂದು ಗ್ರಾಮಕ್ಕೆ ಮನೆಯಲ್ಲಿ ಇರುವ ಸದಸ್ಯರ ಸಂಖ್ಯೆಯನ್ನು ಆಧರಿಸಿ ಇಷ್ಟೂಂತಾ ದುಡ್ಡು ಹಂಚಲಾಗುತ್ತಿದೆ. ಪ್ರಮುಖವಾಗಿ, ನಾಡಿನ ಧರ್ಮದೇಗುಲ ಧರ್ಮಸ್ಥಳ ಮಂಜುನಾಥಸ್ವಾಮಿಯ ಫೋಟೋ ಮೇಲೆ ಪ್ರಮಾಣ ಮಾಡಿಸಿಕೊಂಡು ಒಂದು ಸಾವಿರ ರೂಪಾಯಿ ಹಂಚಲಾಗುತ್ತಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.

Loksabha elections 2019: Is political party offering one thousand rupees per vote in Mandya

ಧರ್ಮಸ್ಥಳ, ತಿರುಪತಿ, ಮದ್ದೂರಮ್ಮ, ಕಬ್ಬಾಳಮ್ಮ ಮುಂತಾದ ದೇವರ ಮೇಲೆಯೂ, ಇಂತವರಿಗೇ ವೋಟ್ ಹಾಕ್ತೀವಿ ಎಂದು ಪ್ರಮಾಣ ಮಾಡಿಸಿ ಪ್ರತೀ ಮತದಾರರಿಗೆ ತಲಾ ಒಂದು ಸಾವಿರ ರೂಪಾಯಿ ದುಡ್ಡು ಹಂಚಲಾಗುತ್ತಿದೆ.

ನಾಳೆ ರಾಜ್ಯದ ಮೊದಲ ಹಂತದ ಚುನಾವಣೆ: ಇಂದು 'ಕತ್ತಲೆ ರಾತ್ರಿ' ನಾಳೆ ರಾಜ್ಯದ ಮೊದಲ ಹಂತದ ಚುನಾವಣೆ: ಇಂದು 'ಕತ್ತಲೆ ರಾತ್ರಿ'

ಮತದಾನದ ಹಿಂದಿನ ದಿನ/ರಾತ್ರಿ ನಡೆಯುವ 'ಹಂಚುವಿಕೆ' ಕ್ಷೇತ್ರದ ಸಮೀಕರಣವನ್ನೇ ಬದಲಾಯಿಸುವಷ್ಟರ ಮಟ್ಟಿಗೆ ಪ್ರಭಾವವನ್ನು ಬೀರುವುದು ದೇಶದ ಚುನಾವಣಾ ಇತಿಹಾಸದಲ್ಲಿ ಹೊಸದೇನಲ್ಲ. ರಾಜಕೀಯ ಪಕ್ಷಗಳು ಪೈಪೋಟಿಗೆ ಬಿದ್ದಂತೆ ಹಣಹೆಂಡ ಹಂಚುವ ಬಹಳಷ್ಟು ಉದಾಹರಣೆಗಳಿವೆ, ಅದರಲ್ಲಿ ಮಂಡ್ಯ ಕೂಡಾ ಒಂದು.

ನೀ ಚಾಪೆ ಕೆಳಗೆ ನುಗ್ಗಿದರೆ, ನಾ ರಂಗೋಲಿ ಕೆಳಗೆ ನುಗ್ಗುತ್ತೇನೆ ಎನ್ನುವಂತೆ, ಚುನಾವಣಾ ಆಯೋಗ ಎಷ್ಟೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೂ, ಹಣಹೆಂಡ ಹಂಚಲು ರಾಜಕೀಯ ಪಕ್ಷಗಳು ಇನ್ನೊಂದು ದಾರಿಯನ್ನು ಹುಡುಕಿರುತ್ತವೆ.

English summary
Loksabha elections 2019: Is political party offering one thousand rupees per vote in Mandya? Election for this high voltage seat is on April 18th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X