ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆರೆ ಕಾಮೇಗೌಡರಿಗೆ ಕೊರೊನಾವೈರಸ್ ಸೋಂಕು ಪಾಸಿಟಿವ್!

|
Google Oneindia Kannada News

ಮಂಡ್ಯ, ಜುಲೈ.22: ಪ್ರಕೃತಿ ಮತ್ತು ಪ್ರಾಣಿಗಳ ಪಾಲಿಗೆ ಆಧುನಿಕ ಭಗೀರಥ ಎನಿಸಿದ್ದ ಮಂಡ್ಯದ ರೈತ ಕಾಮೇಗೌಡರಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ.

Recommended Video

ಟ್ಯಾಂಕರ್ ನಲ್ಲಿ ಇದ್ದ ಹಾಲನ್ನು ರಸ್ತೆಗೆ ಚೆಲ್ಲಿದ ಪ್ರತಿಭಟನಾಕಾರರು | Oneindia Kannada

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡರು ಇತ್ತೀಚಿನ ದಿನಗಳಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ವೇಳೆ ಆಸ್ಪತ್ರೆಗಳಿಗೆ ಅಲೆದಾಡಿದ ಸಂದರ್ಭದಲ್ಲಿ ಕೊವಿಡ್-19 ಸೋಂಕು ಅಂಟಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು.

ಕೆರೆ ಕಾಮೇಗೌಡರಿಗೆ ಅನಾರೋಗ್ಯ: ಸರ್ಕಾರಿ ಆಸ್ಪತ್ರೆಗೆ ದಾಖಲುಕೆರೆ ಕಾಮೇಗೌಡರಿಗೆ ಅನಾರೋಗ್ಯ: ಸರ್ಕಾರಿ ಆಸ್ಪತ್ರೆಗೆ ದಾಖಲು

ರೈತ ಕಾಮೇಗೌಡರನ್ನು ಕೊರೊನಾವೈರಸ್ ಸೋಂಕು ತಪಾಸಣೆಗೆ ಒಳಪಡಿಸುವುದಕ್ಕಾಗಿ ರಕ್ತ ಮತ್ತು ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿತ್ತು. ವೈದ್ಯಕೀಯ ತಪಾಸಣೆ ವರದಿ ಇದೀಗ ಹೊರ ಬಂದಿದ್ದು, ಕಾಮೇಗೌಡರಿಗೆ ಕೊವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದೆ. ಇದೀಗ ಸೋಂಕಿತ ಕಾಮೇಗೌಡರನ್ನು ಮಂಡ್ಯದ ಕೊವಿಡ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Lake man Kame gowda Tested Covid-19 Positive

ಕಾಮೇಗೌಡರ ಕೆರೆ ಹುಡುಕಲು 'ಸತ್ಯ ಶೋಧನಾ ಸಮಿತಿ'! ಕಾಮೇಗೌಡರ ಕೆರೆ ಹುಡುಕಲು 'ಸತ್ಯ ಶೋಧನಾ ಸಮಿತಿ'!

ಪ್ರಧಾನಿ ಮೆಚ್ಚುಗೆಗೆ ಪಾತ್ರರಾಗಿದ್ದ ಕಾಮೇಗೌಡರು:

ಇತ್ತೀಚಿಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಂಸೆಗೆ ಒಳಗಾಗಿದ್ದರು. 82 ವರ್ಷದ ಕಾಮೇಗೌಡರು ಸುಮಾರು 15 ಕೆರೆಗಳನ್ನು ನಿರ್ಮಿಸಿ, ಬೇಸಿಗೆಯಲ್ಲೂ ಅದರಲ್ಲಿ ನೀರು ಉಳಿಯುವ ಹಾಗೇ ನೋಡಿಕೊಳ್ಳುತ್ತಿದ್ದಾರೆ. ಸುಮಾರು 15 ಲಕ್ಷ ರೂ. ಖರ್ಚು ಮಾಡಿ ಕೆರೆಗಳ ನಿರ್ವಹಣೆ ಮಾಡುತ್ತಿದ್ದರು. ಮಂಡ್ಯದ ಭಗೀರಥ, ಕೆರೆ ಕಾಮೇಗೌಡರಿಗೆ ಬಲಗಾಲಿನ ನರ ಸಂಬಂಧಿ ಕಾಯಿಲೆಯ ಗಾಯ ಉಲ್ಬಣಗೊಂಡಿರುವ ಹಿನ್ನೆಲೆ ಮಳವಳ್ಳಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು.

English summary
Lake man Kamegowda Tested Covid-19 Positive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X