ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಹುಲ್ ಗಾಂಧಿ ನನಗೆ ಲೆಕ್ಕಕ್ಕೇ ಇಲ್ಲ: ಕುಮಾರಸ್ವಾಮಿ

By Manjunatha
|
Google Oneindia Kannada News

ಮಂಡ್ಯ, ಮಾರ್ಚ್ 26: ಜೆಡಿಎಸ್ ಸಿದ್ದಾಂತದ ಬಗ್ಗೆ ಪ್ರಶ್ನೆ ಮಾಡಿರುವ ರಾಷ್ಟ್ರೀಯ ಕಾಂಗ್ರೆಸ್ ರಾಹುಲ್ ಗಾಂಧಿ ಅವರ ಮೇಲೆ ಕುಮಾರಸ್ವಾಮಿ ಗರಂ ಆಗಿದ್ದಾರೆ. 'ರಾಹುಲ್ ಗಾಂಧಿ ನನಗೆ ಲೆಕ್ಕಕ್ಕೇ ಇಲ್ಲ' ಎಂದಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಮಂಡ್ಯ ಜಿಲ್ಲೆಯ ಹೆಬ್ಬಕವಾಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೆಡಿಎಸ್ ಸಿದ್ದಾಂತದ ಬಗ್ಗೆ ಪ್ರಶ್ನೆ ಮಾಡಲು ರಾಹುಲ್ ಗಾಂಧಿ ಯಾರು? ಎಂದು ಅಬ್ಬರಿಸಿದ ಅವರು ರಾಹುಲ್‌ಗೆ ಕರ್ನಾಟಕದ ಚಿತ್ರಣದ ಅರಿವೇ ಇಲ್ಲ ಎಂದಿದ್ದಾರೆ.

 ರಾಹುಲ್ ಗಾಂಧಿಗೆ ರಾಜಕೀಯ ಅನುಭವವಿಲ್ಲ: ದೇವೇಗೌಡ ರಾಹುಲ್ ಗಾಂಧಿಗೆ ರಾಜಕೀಯ ಅನುಭವವಿಲ್ಲ: ದೇವೇಗೌಡ

'ನಾನೇಕೆ ರಾಹುಲ್ ಅವರ ಪ್ರಶ್ನೆಗೆ ಉತ್ತರಿಸಲಿ, ಕಾಂಗ್ರೆಸ್ ಪಕ್ಷಕ್ಕಾಗಲಿ, ರಾಹುಲ್ ಗಾಂಧಿಗಾಗಲಿ ನಾನು ಗುಲಾಮ ಅಲ್ಲ ನನ್ನ ನಿಲುವಿನ ಬಗ್ಗೆ ಪ್ರಶ್ನೆ ಮಾಡಲು ಅಧಿಕಾರ ಇರುವುದು ಆರುವರೆ ಕೋಟಿ ಕನ್ನಡಿಗರಿಗೆ ಮಾತ್ರ ಎಂದಿದ್ದಾರೆ.

ಬಿಜೆಪಿಗೆ ಬೆಂಬಲಿಸಿದ್ದ ಕಾಂಗ್ರೆಸ್

ಬಿಜೆಪಿಗೆ ಬೆಂಬಲಿಸಿದ್ದ ಕಾಂಗ್ರೆಸ್

'2010ರಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಸರ್ಕಾರವನ್ನು ವಜಾಗೊಳಿಸಲು ರಾಜ್ಯಪಾಲರು ಶಿಫಾರಸ್ಸು ಮಾಡಿದರು ಆಗ ಬಹುಮತ ಸಾಬೀತಿಗೆ ಅವಕಾಶ ನೀಡುವ ಮೂಲಕ ರಾಜ್ಯದಲ್ಲಿ ಎರಡನೇ ಬಾರಿಗೆ ಬಿಜೆಪಿ ಉಳಿಸಿದ್ದು ಕಾಂಗ್ರೆಸ್ ಪಕ್ಷ ಈಗ ಜೆಡಿಎಸ್ ಅನ್ನು ಬಿಜೆಪಿ ಬಿ ಟೀಂ ಅನ್ನುತ್ತಾರೆ ಎಂದು ಕುಮಾರಸ್ವಾಮಿ ಹರಿಹಾಯ್ದರು.

 ಜೆಡಿಎಸ್‌ ಪಕ್ಷವು ಬಿಜೆಪಿಗೆ ಬೆಂಬಲ ನೀಡುತ್ತಿದೆ: ರಾಹುಲ್ ಗಾಂಧಿ ಜೆಡಿಎಸ್‌ ಪಕ್ಷವು ಬಿಜೆಪಿಗೆ ಬೆಂಬಲ ನೀಡುತ್ತಿದೆ: ರಾಹುಲ್ ಗಾಂಧಿ

ಕಾಂಗ್ರೆಸ್‌ನವರು ಜೆಡಿಎಸ್‌ ಕಾಲು ಹಿಡಿದಿದ್ದರು

ಕಾಂಗ್ರೆಸ್‌ನವರು ಜೆಡಿಎಸ್‌ ಕಾಲು ಹಿಡಿದಿದ್ದರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಜೆಡಿಎಸ್ ಅವಕಾಶವಾದಿ ಪಕ್ಷ' ಎಂದ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, 'ಅವಕಾಶವಾದ ರಾಜಕಾರಣ ಮಾಡುವುದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ, ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆಯಲ್ಲಿ ಜೆಡಿಎಸ್ ಕಾಲು ಹಿಡಿದಕೊಂಡವರು ಯಾರು..? ಬಿಬಿಎಂಪಿ ಅಧಿಕಾರಾಕ್ಕಾಗಿ ಯಾರು ಯಾರ ಮನೆಗೆ ಬಂದಿದ್ದರು..? ಎಂದು ಪ್ರಶ್ನೆ ಮಾಡಿದರು.

ಸಿದ್ದರಾಮಯ್ಯಗೆ ನೈತಿಕತೆ ಇಲ್ಲ

ಸಿದ್ದರಾಮಯ್ಯಗೆ ನೈತಿಕತೆ ಇಲ್ಲ

ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಬಗ್ಗೆ ಮಾತನಾಡಲು ಸಿದ್ದರಾಮಯ್ಯಗೆ ನೈತಿಕತೆ ಇಲ್ಲ ಎಂದ ಅವರು ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಮಂಡ್ಯ ಜಿಲ್ಲೆ ಜನರನ್ನು ಹುರುಳಿ ಬೆಳೆಯುವಂತೆ ಮಾಡಿದ್ದು ಅವರ ಸಾಧನೆ ಎಂದರು.

ಚೆಲುವರಾಯಸ್ವಾಮಿ ನನಗೆ ಸಮವಲ್ಲ

ಚೆಲುವರಾಯಸ್ವಾಮಿ ನನಗೆ ಸಮವಲ್ಲ

ಜೆಡಿಎಸ್ ಹುಳುಕುಗಳನ್ನು ಬಯಲು ಮಾಡುತ್ತೇನೆ ಎಂದಿರುವ ಜೆಡಿಎಸ್ ಬಂಡಾಯ ಶಾಸಕ ಚೆಲುವರಾಯ ಸ್ವಾಮಿ ಹೇಳಿಕೆ ಪ್ರತಿಕ್ರಿಯಿಸಿರುವ ಅವರು ಚೆಲುವರಾಯಸ್ವಾಮಿ ನನಗೆ ಸರಿಸಮವಲ್ಲ ಆತನ ಬಗ್ಗೆ ನಾನು ಮಾತನಾಡುವುದಿಲ್ಲ, ಅದು ಏನು ಬಹಿರಂಗ ಪಡಿಸುತ್ತಾರೊ ಬಹಿರಂಗ ಪಡಿಸಲಿ ಎಂದು ಸವಾಲ್ ಹಾಕಿದರು.

ರಾಹುಲ್‌ ಭೇಟಿ ನಿರುಪಯುಕ್ತ

ರಾಹುಲ್‌ ಭೇಟಿ ನಿರುಪಯುಕ್ತ

ರಾಜ್ಯದಲ್ಲಿ ರಾಹುಲ್ ಗಾಂಧಿ ಯಾತ್ರೆ ಬಗ್ಗೆ ಮಾತನಾಡಿದ ಅವರು 'ರಾಹುಲ್ ಗಾಂಧಿ ಪ್ರವಾಸದಿಂದ ಕಾಂಗ್ರೆಸ್ ಲಾಭವಿಲ್ಲ, ನಮಗೂ ಏನು ನಷ್ಟವಿಲ್ಲ, ಆದರೆ ಅವರು ಕರ್ನಾಟಕದ ಇತಿಹಾಸವನ್ನು ತಿಳಿದು ಮಾತನಾಡಬೇಕು' ಎಂದು ಹೇಳಿದರು.

English summary
JDS state leader Kumaraswamy said 'from Rahul Gandhi visit there is no use for congress or no loss for JDS'. He also said Rahul should speak responsibly he doesn't know the history of Karnataka and here politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X