ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚಾದ ಮಳೆ; ಕೆಆರ್ ಎಸ್ ಒಳಹರಿವು ಹೆಚ್ಚಳ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಜುಲೈ 20: ಕಾವೇರಿ ಜಲಾನಯನ ಪ್ರದೇಶದಲ್ಲಿ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಕೆಆರ್ ‌ಎಸ್ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ.

Recommended Video

7 Chinese Global Giants like Huawei, Alibaba to suffer in India | Oneindia Kannada

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ‌ಎಸ್ ಜಲಾಶಯದಲ್ಲಿ ಈಚೆಗೆ ಮಳೆಯಿಂದಾಗಿ ನೀರಿನ ಒಳ ಹರಿವು ಹೆಚ್ಚಾಗಿದ್ದು, ಜಲಾಶಯದ ನೀರಿನ ಮಟ್ಟ 107 ಅಡಿಗೆ ತಲುಪಿದೆ. ಜೊತೆಗೆ ಕೆಆರ್ ಎಸ್ ಡ್ಯಾಂಗೆ ಹೆಚ್ಚು ನೀರು ಹರಿದು ಬರುತ್ತಿರುವುದರಿಂದ ರೈತರಲ್ಲೂ ಸಂತಸ ಮನೆ ಮಾಡಿದೆ.

ಕೆಆರ್ ಎಸ್, ಕಬಿನಿಯಿಂದ ಜು.28ಕ್ಕೆ ನಾಲೆಗಳಿಗೆ ನೀರುಕೆಆರ್ ಎಸ್, ಕಬಿನಿಯಿಂದ ಜು.28ಕ್ಕೆ ನಾಲೆಗಳಿಗೆ ನೀರು

ಮೂರು ದಿನಗಳಿಂದಲೂ ಕೆಆರ್ ‌ಎಸ್ ಡ್ಯಾಂಗೆ ಒಳ ಹರಿವು ಹೆಚ್ಚಾಗಿದೆ. ಹೀಗಾಗಿ ಕೆಆರ್ ‌ಎಸ್ ಅಣೆಕಟ್ಟೆಯಲ್ಲಿ ಪ್ರಸ್ತುತ 107 ಅಡಿ ಸಂಗ್ರಹವಾಗಿದೆ. ಅಣೆಕಟ್ಟೆಯ ಗರಿಷ್ಠ ನೀರಿನ ಮಟ್ಟ 124.80 ಅಡಿ ಇದೆ. ಇಂದಿನ ಒಳ ಹರಿವು 14,620 ಕ್ಯೂಸೆಕ್ ಇದ್ದು, ಹೊರ ಹರಿವು 4,655 ಕ್ಯೂಸೆಕ್ ಇದೆ. ಜೊತೆಗೆ ನೀರಿನ ಸಂಗ್ರಹ 28.810 ಟಿಎಂಸಿ ಇದೆ.

KRS Reservoir Inflow Increased Due To Rain In Cauvery River Basin

ಸತತ ಮಳೆಯಿಂದ ತುಂಬಿ ತುಳುಕುವ ಅಣೆಕಟ್ಟಿನ ನೀರಿನ ಮಟ್ಟ!ಸತತ ಮಳೆಯಿಂದ ತುಂಬಿ ತುಳುಕುವ ಅಣೆಕಟ್ಟಿನ ನೀರಿನ ಮಟ್ಟ!

ಮೊನ್ನೆಯಷ್ಟೇ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಅವರು ಜುಲೈ 28ರಿಂದ ಕಬಿನಿ ಹಾಗೂ ಕೆಆರ್ ಎಸ್ ಜಲಾಶಯಗಳಿಂದ ನಾಲೆಗಳಿಗೆ ನೀರು ಹರಿಸಲು ಸೂಚಿಸಿದ್ದರು.

English summary
It is raining since few days in cauvery river basin. The inflow has increased to KRS reservoir
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X