ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆ ಅಬ್ಬರ; 119 ಅಡಿ ತಲುಪಿದ ಕೆಆರ್‌ಎಸ್ ನೀರಿನ ಮಟ್ಟ

|
Google Oneindia Kannada News

ಮಂಡ್ಯ, ಅಕ್ಟೋಬರ್ 20; ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಡ್ಯಾಂ ಇನ್ನೂ ಭರ್ತಿಯಾಗಿಲ್ಲ, ನೀರಿನ ಮಟ್ಟ 119.78 ಅಡಿಗೆ ಏರಿಕೆಯಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್ ಜಲಾಶಯ ಇನ್ನೂ ಭರ್ತಿಯಾಗಿಲ್ಲ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ನದಿಪಾತ್ರದಲ್ಲಿ ಹೆಚ್ಚು ಮಳೆಯಾದರೂ ಡ್ಯಾಂ ಭರ್ತಿಯಾಗಿಲ್ಲ. ಇದು ರೈತರಲ್ಲಿ ಆತಂಕ ಮೂಡಿಸಿತ್ತು.

ಮಂಡ್ಯ ವಿಶೇಷ; ಈ ಬಾರಿ ಭರ್ತಿಯಾಗುತ್ತಾ ಕೆಆರ್‌ಎಸ್‍ ಜಲಾಶಯ? ಮಂಡ್ಯ ವಿಶೇಷ; ಈ ಬಾರಿ ಭರ್ತಿಯಾಗುತ್ತಾ ಕೆಆರ್‌ಎಸ್‍ ಜಲಾಶಯ?

ಮುಂಗಾರು ಹಂಗಾಮಿನಲ್ಲಿ ಈ ಬಾರಿ ಕೊಡಗು ಸೇರಿದಂತೆ ಕಾವೇರಿ ಕಣಿವೆಯಲ್ಲಿ ಪ್ರವಾಹ ಸೃಷ್ಟಿಸುವ ಮಳೆ ಸುರಿಯಲಿಲ್ಲ. ಹೀಗಾಗಿ ಕೆಆರ್‌ಎಸ್ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದು ಬರಲೇ ಇಲ್ಲ.

116 ಅಡಿ ತಲುಪಿದ ಕೆಆರ್‌ಎಸ್; ವಿವಿಧ ಜಲಾಶಯಗಳ ನೀರಿನ ಮಟ್ಟ116 ಅಡಿ ತಲುಪಿದ ಕೆಆರ್‌ಎಸ್; ವಿವಿಧ ಜಲಾಶಯಗಳ ನೀರಿನ ಮಟ್ಟ

ಸೆಪ್ಟೆಂಬರ್ ಅಂತ್ಯ, ಅಕ್ಟೋಬರ್ ತಿಂಗಳಿನಲ್ಲಿ ವಾಯುಭಾರ ಕುಸಿತದಿಂದ ಸುರಿಯುತ್ತಿರುವ ಮಳೆಯಿಂದಾಗಿ ಒಳ ಹರಿವು ಏರಿಕೆಯಾಗಿದೆ. ಕಳೆದ 10 ದಿನಗಳಲ್ಲಿ ನದಿ ಪಾತ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ.

ಧಾರಕಾರ ಮಳೆ; 100 ಅಡಿ ಸನಿಹಕ್ಕೆ ಕೆಆರ್‌ಎಸ್ ನೀರಿನ ಮಟ್ಟ ಧಾರಕಾರ ಮಳೆ; 100 ಅಡಿ ಸನಿಹಕ್ಕೆ ಕೆಆರ್‌ಎಸ್ ನೀರಿನ ಮಟ್ಟ

ಈ ಬಾರಿಯೂ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ಕಾವೇರಿ ನದಿಯಲ್ಲಿ ಹರಿಯುವ ನೀರಿನ ಪ್ರಮಾಣವೂ ಉತ್ತಮವಾಗಿದೆ. ಹೀಗಾಗಿ ಅಕ್ಟೋಬರ್‌ನಲ್ಲಿ ಕೆಆರ್‌ಎಸ್ ಡ್ಯಾಂ ಭರ್ತಿಯಾಗುವ ನಿರೀಕ್ಷೆಯನ್ನು ಮಾಡಬಹುದಾಗಿದೆ. ಈ ಹಿಂದೆಯೂ ಅಕ್ಟೋಬರ್ ವೇಳೆಗೆ ಭರ್ತಿಯಾದ ನಿದರ್ಶಗಳಿವೆ. ಆದ್ದರಿಂದ ರೈತರು ಸಹ ಅದೇ ನಂಬಿಕೆಯಲ್ಲಿ ಇದ್ದಾರೆ.

ಸದ್ಯ ಎಷ್ಟು ನೀರಿನ ಸಂಗ್ರಹವಿದೆ?

ಸದ್ಯ ಎಷ್ಟು ನೀರಿನ ಸಂಗ್ರಹವಿದೆ?

124 ಅಡಿ ಸಾಮರ್ಥ್ಯದ ಕೆಆರ್‌ಎಸ್ ಜಲಾಶಯದಲ್ಲಿ ಸದ್ಯ 119.78 ಅಡಿಯಷ್ಟು ನೀರಿದೆ. ಜಲಾಶಯಕ್ಕೆ 19,785 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೊರ ಹರಿವು 5167 ಕ್ಯುಸೆಕ್ ಆಗಿದೆ. ಗರಿಷ್ಠ ಸಂಗ್ರಹ 49.401 ಟಿಎಂಸಿ ಅಡಿ ಆಗಿದೆ. ಸದ್ಯ ಜಲಾಶಯದಲ್ಲಿ 42.767 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ.

ಕೆಆರ್‌ಎಸ್ ಭರ್ತಿಯಾದರೆ ಮಂಡ್ಯ, ಮೈಸೂರು, ಬೆಂಗಳೂರ ನಗರದ ಜನ ನೆಮ್ಮದಿಯುಸಿರು ಬಿಡಬಹುದಾಗಿದೆ. ಹಿಂದೆ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕಡಿಮೆಯಾಗಿ ಜನರು ಸಂಕಷ್ಟ ಅನುಭವಿಸಿದ್ದರು. ಅವತ್ತಿನ ಪರಿಸ್ಥಿತಿ ಯಾವತ್ತೂ ಬರಬಾರದು ಎಂಬುದು ಜನರ ಆಶಯ. 2013ರಲ್ಲಿ ಜಲಾಶಯದ ನೀರಿನ ಮಟ್ಟ 65 ಅಡಿ ತಲುಪಿತ್ತು. ಆಗ ಕುಡಿಯುವುದಕ್ಕೂ ನೀರಿಲ್ಲದೆ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಮುಖ್ಯಮಂತ್ರಿಗಳಿಂದ ವಿಶೇಷ ಪೂಜೆ

ಮುಖ್ಯಮಂತ್ರಿಗಳಿಂದ ವಿಶೇಷ ಪೂಜೆ

ಕೆಆರ್‌ಎಸ್ ಜಲಾಶಯ ಬೇಗ ಭರ್ತಿಯಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶೇಷ ಪೂಜೆಯನ್ನು ದಸರಾದ ಮೊದಲ ದಿನ ಮಾಡಿದ್ದರು. ಖ್ಯಾತಿ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಪರ್ಜನ್ಯ ಜಪ ಮಾಡಲಾಗಿತ್ತು. ಈ ಪೂಜೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡು ಕಾವೇರಿ ಮಾತೆಗೆ ಪ್ರಾರ್ಥನೆ ಸಲ್ಲಿಸಿದ್ದರು.

ಸೆಪ್ಟೆಂಬರ್ ಕೊನೆ ಮತ್ತು ಅಕ್ಟೋಬರ್ ಮೊದಲ ವಾರದಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಕಾವೇರಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದಾಗಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗಿದ್ದು, ಡ್ಯಾಂ ಭರ್ತಿಯಾಗುವ ಸೂಚನೆ ಸಿಕ್ಕಿದೆ.

ತಮಿಳುನಾಡಿಗೆ ನೀರು ಹರಿಸಲಾಗಿತ್ತು

ತಮಿಳುನಾಡಿಗೆ ನೀರು ಹರಿಸಲಾಗಿತ್ತು

ಕೆಆರ್‌ಎಸ್ ಜಲಾಶಯ ಭರ್ತಿಯಾಗದಿದ್ದರೂ ಕಾವೇರಿ ನದಿ ನೀರು ನ್ಯಾಯಾಧೀಕರಣದ ತೀರ್ಪಿನ ಅನ್ವಯ ಕರ್ನಾಟಕ ತಮಿಳುನಾಡಿಗೆ ಜೂನ್‌ನಿಂದ ಆಗಸ್ಟ್ ತನಕದ ನೀರು ಹರಿಸಿತ್ತು. ಇದರಿಂದಾಗಿ ಡ್ಯಾಂ ನೀರಿನ ಮಟ್ಟದಲ್ಲಿ ಏರಿಕೆ ಕಂಡಿರಲಿಲ್ಲ. ಅಕ್ಟೋಬರ್ 1ರಂದು ಡ್ಯಾಂನಲ್ಲಿ 112 ಅಡಿ ನೀರಿನ ಸಂಗ್ರಹವಿತ್ತು. ಈಗ 119 ಅಡಿಗೆ ತಲುಪಿದೆ.

ಒಂದು ವೇಳೆ ಜಲಾಶಯ ಭರ್ತಿಯಾಗದಿದ್ದರೆ ಬೇಸಿಗೆಯಲ್ಲಿ ಮಂಡ್ಯದಲ್ಲಿ ಕೃಷಿ, ಮೈಸೂರು ಮತ್ತು ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದರೆ ಡ್ಯಾಂ ಒಳಹರಿವು ಹೆಚ್ಚಾಗಿ ಬೇಗ ಭರ್ತಿಯಾಗಲಿದೆ.

ಜಲಾಶಯ ಭರ್ತಿಗಾಗಿ ಜನರ ಪ್ರಾರ್ಥನೆ

ಜಲಾಶಯ ಭರ್ತಿಗಾಗಿ ಜನರ ಪ್ರಾರ್ಥನೆ

2016ರಲ್ಲಿ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ರೈತರು ಹಿನ್ನೀರಿನಲ್ಲಿ ಉಳುಮೆ ಮಾಡಿ ಬೆಳೆ ಬೆಳೆದಿದ್ದರು. ಬೆಸ್ತರು ಗುಡಿಸಲು ಹಾಕಿಕೊಂಡು ಮೀನು ಹಿಡಿದಿದ್ದರು. ಅದಾದ ನಂತರ 2017ರ ಮುಂಗಾರು ಮಳೆ ಕ್ಷೀಣಿಸಿದರೂ ಹಿಂಗಾರು ಚೆನ್ನಾಗಿ ಸುರಿದಿದ್ದರಿಂದ ಜಲಾಶಯಕ್ಕೆ ನೀರು ಹರಿದು ಬಂದಿತ್ತಾದರೂ ಭರ್ತಿಯಾಗಿರಲಿಲ್ಲ.

2018ರ ನಂತರ ಮೂರು ವರ್ಷಗಳ ಕಾಲ ಭಾರೀ ಮಳೆ ಸುರಿದಿದ್ದರಿಂದ ಜಲಾಶಯ ಭರ್ತಿಯಾಗಿದ್ದಲ್ಲದೆ, ಅಪಾರ ಪ್ರಮಾಣದ ನೀರು ಜಲಾಶಯದಿಂದ ಹೊರಕ್ಕೆ ಹರಿದು ಹೋಗಿತ್ತು. ಈ ಬಾರಿ ಡ್ಯಾಂ ಭರ್ತಿಯಾದರೆ ಸಾಕು ಎನ್ನುವುದು ಎಲ್ಲರ ಪ್ರಾರ್ಥನೆಯಾಗಿದೆ.

English summary
Krishna Raja Sagara Dam (KRS) dam water level touches 119 on October 19, 2021. Dam full capacity 124 feet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X