ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಆರ್ ಎಸ್ ಡ್ಯಾಂಗೆ ಬಣ್ಣದ ಬೆಳಕಿನ ಚಿತ್ತಾರ

|
Google Oneindia Kannada News

ಮಂಡ್ಯ, ಆಗಸ್ಟ್ 12 : ತ್ರಿವರ್ಣ ಧ್ವಜದ ಬೆಳಕಿನ ವೈಭವವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಕೆಆರ್ ಎಸ್ ನಲ್ಲಿ ನೂರಾರು ಪ್ರವಾಸಿಗರು ಮಳೆಯನ್ನು ಲೆಕ್ಕಿಸದೆ ಆಗಮಿಸಿದ್ದರು.

ಕೆಆರ್ ಎಸ್ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೆಆರ್ ಎಸ್ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ 1.5 ಲಕ್ಷ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.

KRS Dam Lightened colorfully
ಕಳೆದ ಬಾರಿಯಂತೆ ಈ ಬಾರಿಯೂ ಕಾವೇರಿ ನೀರಾವರಿ ನಿಗಮದ ವತಿಯಿಂದ ಬಣ್ಣ ಬಣ್ಣದ ಎಲ್ ಇ ಡಿ ಲೈಟಿಂಗ್ ವ್ಯವಸ್ಥೆ ಮಾಡಿದ್ದು, 500ಕ್ಕೂ ಹೆಚ್ಚು ಲೈಟಿಂಗ್ ಅಳವಡಿಸಿ ರಾತ್ರಿ 7.15ರ ಸುಮಾರಿಗೆ ಆರಂಭಿಸಲಾಯಿತು. ಕೆಂಪು, ಹಸಿರು, ಹಳದಿ, ನೀಲಿ ಹೀಗೆ ನಾನಾ ಬಣ್ಣಗಳಲ್ಲಿ ಜಲಾಶಯದಿಂದ ನೀರು ಕಂಗೊಳಿಸುತ್ತಿತ್ತು. ಪ್ರವಾಸಿಗರು ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದು ಸಂತಸಗೊಂಡರು.

KRS Dam Lightened colorfully
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ನೌಕರರು, ಗಣ್ಯರ ಹೊರತಾಗಿ ಬೇರೆಯವರಿಗೆ ಅಣೆಕಕಟ್ಟೆ ಮೇಲೆ ಓಡಾಡಲು ಅವಕಾಶವಿಲ್ಲ. ಜಲಾಶಯಕ್ಕೆ ಲೈಟಿಂಗ್ ವ್ಯವಸ್ಥೆ ಮಾಡುತ್ತಿರುವ ವಿಷಯ ತಿಳಿದು ಆಗಮಿಸಿದ ಸಾವಿರಾರು ಮಂದಿ ಪ್ರವಾಸಿಗರು ಜಲಾಶಯದ ಪಶ್ಚಿಮ ದ್ವಾರದ ಬಳಿಯ ನೀಲಿ ಜಾಗದಲ್ಲಿ ಜಿಟಿ-ಜಿಟಿ ಮಳೆಯನ್ನು ಲೆಕ್ಕಿಸದೇ ಬೆಳಕಿನ ವೈಭವದ ನೀರಿನ ರುದ್ರ ರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡು ಪುಳಕಿತರಾದರು.
English summary
As the KRS dam is filled to its brim the dam has been lightened and thousands of tourists are arriving to take a look at the beautiful view.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X