ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆ.ಸಿ.ನಾರಾಯಣಗೌಡ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

|
Google Oneindia Kannada News

ಮಂಡ್ಯ, ಜುಲೈ 8: ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕೆ. ಸಿ ನಾರಾಯಣಗೌಡ ವಿರುದ್ಧ ಮಂಡ್ಯದ ಜಾತ್ಯತೀತ ಜನತಾದಳ ಪಕ್ಷದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಶಾಸಕ ನಾರಾಯಣಗೌಡ ವಿರುದ್ಧ ಕಾರ್ಯಕರ್ತರು ಕೆಂಡಕಾರುತ್ತಿದ್ದಾರೆ. ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ರೀತಿಯಲ್ಲಿ ಅಸಮಾಧಾನವನ್ನು ಹೊರಹಾಕಿದ್ದಾರೆ. ಬಿಜೆಪಿಗೆ ಶಾಸಕರು ಸೋಲ್ಡ್ ಆಗಿದ್ದಾರೆ ಎಂಬ ರೀತಿಯ ಬರಹ ಹಾಗೂ ಶ್ರದ್ಧಾಂಜಲಿ ಭಾವಚಿತ್ರವನ್ನು ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 ದೇವೇಗೌಡರ ಮನೆ ಹೆಣ್ಣುಮಕ್ಕಳ ಕಾರಣದಿಂದ ರಾಜೀನಾಮೆ ನೀಡಿದೆ: ಜೆಡಿಎಸ್ ಶಾಸಕ ದೇವೇಗೌಡರ ಮನೆ ಹೆಣ್ಣುಮಕ್ಕಳ ಕಾರಣದಿಂದ ರಾಜೀನಾಮೆ ನೀಡಿದೆ: ಜೆಡಿಎಸ್ ಶಾಸಕ

ಶಾಸಕ ನಾರಾಯಣಗೌಡ ವಿರುದ್ಧ ದಳ ಕಾರ್ಯಕರ್ತರು ಆಕ್ರೋಶಗೊಂಡಿದ್ದರೆ, ಇತ್ತ ಮಾಜಿ ಶಾಸಕ ಚಂದ್ರಶೇಖರ್ ಬೆಂಬಲಿಗರು ಹರ್ಷ ವ್ಯಕ್ತಪಡಿಸುತ್ತಾ ಕೆಆರ್ ಪೇಟೆಗೆ ಅಂಟಿಕೊಂಡಿದ್ದ ಗ್ರಹಣ ತೊಲಗಿ ಬಿಡುಗಡೆಯಾಗುವ ಸಮಯ ಬಂದಿದೆ. ಮತ್ತೊಮ್ಮೆ ಚಂದ್ರಶೇಖರ್ ಎನ್ನುವ ಬರಹಗಳನ್ನು ಸಾಮಾಜಿಕ ಜಾಲತಾಣ ಹರಿಬಿಟ್ಟಿದಾರೆ.

KR Pete JDS activists opposing narayana gowda in social media

ಶಾಸಕ ಕೆ ಸಿ ನಾರಾಯಣಗೌಡರು ರಾಜೀನಾಮೆ ನೀಡಿದ್ದು ಕೆ.ಆರ್ ಪೇಟೆ ಕ್ಷೇತ್ರಕ್ಕೆ ಉಪಚುನಾವಣೆ ನಿಗದಿಯಾದರೆ, ಜಾತ್ಯತೀತ ಜನತಾದಳದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಬೇಕು ಎನ್ನುವ ಕೂಗು ಅಭಿಮಾನಿಗಳು ಹಾಗೂ ಕಾರ್ಯಕರ್ತರಿಂದ ಕೇಳಿಬಂದಿದೆ. ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪೋಸ್ಟ್ ಗಳನ್ನು ತೇಲಿಬಿಟ್ಟಿದ್ದಾರೆ.

ಕರ್ನಾಟಕ ವಿಧಾನಸಭೆಯಲ್ಲಿ ನಂಬರ್ ಗೇಮ್, ಬಲಾಬಲ ಎಷ್ಟಿದೆ? ಕರ್ನಾಟಕ ವಿಧಾನಸಭೆಯಲ್ಲಿ ನಂಬರ್ ಗೇಮ್, ಬಲಾಬಲ ಎಷ್ಟಿದೆ?

'ನಮ್ಮ ಪಕ್ಷದ ಕೆಲವು ಶಾಸಕರ ಅಕಾಲಿಕ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆ ಕೆ.ಆರ್ ಪೇಟೆಯಿಂದ ನಮ್ಮ ಯುವರಾಜ ನಿಖಿಲ್ ಕುಮಾರಸ್ವಾಮಿ' ಎಂಬ ಸ್ಟೇಟಸ್ ಹಾಕುವ ಮೂಲಕ ನಿಖಿಲ್ ಸ್ಪರ್ಧಿಸುವಂತೆ ಕಾರ್ಯಕರ್ತರು ಮನವಿ ಮಾಡಿದ್ದಾರೆ.

English summary
Mandya's Janata Dal activists has expressed outrage against KC Narayana Gowda who resigned from the MLA seat. In social media, activists posted against narayana gowda of kr pete.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X