ಫೋಟೋ ವೈರಲ್: ಪ್ರೇಮಿಗಳ ದಿನಕ್ಕೂ ಮುನ್ನ ಬಸ್ ನಿಲ್ದಾಣದಲ್ಲಿ 'ಒಂದು ಮುತ್ತಿನ ಕಥೆ'
ಮಂಡ್ಯ, ಫೆಬ್ರವರಿ 10: ಹಾಡಹಗಲೇ ಬಸ್ ನಿಲ್ದಾಣದಲ್ಲಿ ಯುವ ಜೋಡಿಯೊಂದು ಮೈ ಮರೆತು ಚುಂಬಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಪ್ರದೇಶದಲ್ಲಿ ಅಶ್ಲೀಲ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ ಬಂದರೆ ಅದು ಪ್ರೇಮಿಗಳ ತಿಂಗಳು, ಫೆಬ್ರವರಿ ಬಂದರೆ ಯುವ ಜೋಡಿಗಳಿಗೆ, ಪ್ರೇಮಿಗಳಿಗೆ ಖುಷಿಯೋ ಖುಷಿ. ಯುವತಿಯರು ತಮ್ಮ ಗೆಳೆಯ ನೀಡಿದ ಚಾಕೋಲೇಟ್, ಗೊಂಬೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸಂಭ್ರಮಿಸುತ್ತಾರೆ.
ಮಂಡ್ಯದ ರೈತನ ಮನೆಯೀಗ ಭತ್ತ ವೈವಿಧ್ಯ ಕೇಂದ್ರ!
ಆದರೆ ಕೆಲವೊಮ್ಮೆ ಈ ಯುವಜೋಡಿಗಳು ಮೈಮರೆತು ಬಿಡುತ್ತಾರೆ. ಪ್ರೀತಿಯ ಹೆಸರಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿ, ಜನರಿಗೆ ಇರುಸು-ಮುರುಸು ತಂದೊಡ್ಡುತ್ತಾರೆ.
ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲ್ಲೂಕಿನ ಬಸ್ ನಿಲ್ದಾಣದಲ್ಲಿ ಯುವ ಜೋಡಿ ಬಸ್ ನಿಲ್ದಾಣದಲ್ಲಿ ನಿಂತಿತ್ತು. ಈ ವೇಳೆ ಬಸ್ ಹಿಂಭಾಗಕ್ಕೆ ಹೋಗಿ, ಹುಡುಗ- ಹುಡುಗಿ ಇಬ್ಬರು ಪರಸ್ಪರ ಮುತ್ತಿಕ್ಕಲು ಪ್ರಾರಂಭಿಸಿದರು. ಸುತ್ತಮುತ್ತ ಸಾರ್ವಜನಿಕರು ಓಡಾಡುತ್ತಿದ್ದರೂ, ಯುವ ಪ್ರೇಮಿಗಳ ಮುತ್ತಿನ ಪ್ರಸಂಗ ಮುಂದುವರೆದಿತ್ತು.