ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ; ನಿವೃತ್ತ ಎಎಸ್‍ಐ ಕೊರೋನಾಗೆ ಬಲಿ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಏಪ್ರಿಲ್ 21; ಕೊರೊನಾ ಆರ್ಭಟ ಎಲ್ಲೆಡೆ ಹೆಚ್ಚುತ್ತಿದ್ದು, ಹಲವರನ್ನು ಬಲಿ ಪಡೆಯುತ್ತಿದೆ. ಇದೀಗ ಕೆ. ಆರ್. ಪೇಟೆ ಪಟ್ಟಣದ ನಿವೃತ್ತ ಸಹಾಯಕ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಕೋವಿಡ್ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.

ಪಟ್ಟಣದ ಜಯನಗರ ಬಡಾವಣೆಯ ನಿವಾಸಿಯಾದ ಹೊಸಹೊಳಲು ರಂಗಸ್ವಾಮಿ (70) ಕೋವಿಡ್‌ಗೆ ಬಲಿಯಾದವರು. ನಿವೃತ್ತಿಯ ನಂತರವೂ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿ ರಾಜೀ ಪಂಚಾಯಿತಿ ಮೂಲಕ ಹಲವು ಕೌಟುಂಬಿಕ ಕೇಸುಗಳನ್ನು ಬಗೆಹರಿಸಿಕೊಡುತ್ತಿದ್ದರು.

 ಕೊರೊನಾ ಸೋಂಕು ಕಡಿಮೆಯಾಗುವ ಬಗ್ಗೆ ತಜ್ಞ ವೈದ್ಯರು ನೀಡಿದ ಶಾಕಿಂಗ್ ಮಾಹಿತಿ ಕೊರೊನಾ ಸೋಂಕು ಕಡಿಮೆಯಾಗುವ ಬಗ್ಗೆ ತಜ್ಞ ವೈದ್ಯರು ನೀಡಿದ ಶಾಕಿಂಗ್ ಮಾಹಿತಿ

ಅಣ್ಣ-ತಮ್ಮಂದಿರು, ಅಕ್ಕತಂಗಿಯರು, ದಾಯಾದಿಗಳು ಅನೋನ್ಯವಾಗಿರಬೇಕು. ಸಣ್ಣಪುಟ್ಟ ವಿಚಾರಗಳಿಗೆ ಪೊಲೀಸ್, ಕೋರ್ಟು, ಕಚೇರಿ, ಕೇಸು ವ್ಯಾಜ್ಯ ಎಂದು ಅಲೆಯಬಾರದು ಎಂದು ತಿಳುವಳಿಕೆ ನೀಡುವ ಮೂಲಕ ಪೊಲೀಸ್ ಠಾಣೆಯ ಕೆಲಸವನ್ನು ಸುಗಮಗೊಳಿಸುತ್ತಿದ್ದರು.

ಕೊರೊನಾ ಕರ್ಫ್ಯೂ: ಹೊಸ ಕಠಿಣ ಮಾರ್ಗಸೂಚಿ ಪ್ರಕಟ, ಏನಿರುತ್ತೆ? ಏನಿರಲ್ಲ?ಕೊರೊನಾ ಕರ್ಫ್ಯೂ: ಹೊಸ ಕಠಿಣ ಮಾರ್ಗಸೂಚಿ ಪ್ರಕಟ, ಏನಿರುತ್ತೆ? ಏನಿರಲ್ಲ?

KR Pet Retired ASI Dies Due To COVID 19

ಅಲ್ಲದೆ ಪೊಲೀಸ್ ಠಾಣೆಯಲ್ಲಿ ಕಚೇರಿ ಕೆಲಸಗಳಿಗೂ ಉಚಿತವಾಗಿ ಸಹಕಾರ ನೀಡುತ್ತಿದ್ದರು. ಸುಮಾರು 10 ವರ್ಷಗಳ ಕಾಲ ಉಚಿತ ಸೇವೆ ನೀಡುವ ಮೂಲಕ ಪೊಲೀಸ್ ಅಧಿಕಾರಿಗಳ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು.

ಮಂಡ್ಯ: ಪಾರ್ಶ್ವವಾಯುವಿಗೆ ತುತ್ತಾಗಿ ಬಂದ ಸಾಲಗಾರನಿಗೆ ಮನೆಯಲ್ಲಿ ಆಶ್ರಯ ನಿರಾಕರಣೆ ಮಂಡ್ಯ: ಪಾರ್ಶ್ವವಾಯುವಿಗೆ ತುತ್ತಾಗಿ ಬಂದ ಸಾಲಗಾರನಿಗೆ ಮನೆಯಲ್ಲಿ ಆಶ್ರಯ ನಿರಾಕರಣೆ

Recommended Video

ಭಾರತ ಮತ್ತು ಇಂಗ್ಲೆಂಡ್ ನಡುವಿನ ವಿಮಾನ ಹಾರಾಟ ರದ್ದುಗೊಳಿಸಿದ ಏರ್‌ ಇಂಡಿಯಾ! | Oneindia Kannada

ಕಳೆದ ಒಂದು ವಾರದಿಂದ ಕೋವಿಡ್ ಸೋಂಕಿನಿಂದ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಸಂಜೆ ಮೃತಪಟ್ಟಿದ್ದಾರೆ. ಮೃತರ ಅಂತ್ಯ ಸಂಸ್ಕಾರವು ಸಾದುಗೋನಹಳ್ಳಿ ಬಳಿ ಕೋವಿಡ್ ನಿಯಮದ ಪ್ರಕಾರ ನಡೆಯಿತು.

English summary
Mandya district K. R. Pet taluk Rangaswamy died due to COVID. He worked as assistant police sub inspector and retired.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X