ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಮಂಡ್ಯ ಬೆಲ್ಲ' ಖರೀದಿಯನ್ನು ನಿಲ್ಲಿಸಿದ ಕೇರಳ ಸರ್ಕಾರ

|
Google Oneindia Kannada News

ಮಂಡ್ಯ, ಮಾರ್ಚ್ 16; ಕೇರಳ ಸರ್ಕಾರ ಪಡಿತರ ಯೋಜನೆಯಡಿ ಮಂಡ್ಯದ ಬೆಲ್ಲವನ್ನು ವಿತರಣೆ ಮಾಡುತ್ತಿತ್ತು. ಆದರೆ, ಬೆಲ್ಲ ಮಾನವ ಬಳಕೆಗೆ ಯೋಗ್ಯವಲ್ಲ ಎಂದು ತಿರಸ್ಕರಿಸಿದೆ. ಮಂಡ್ಯದ ಬೆಲ್ಲ ಖರೀದಿಯನ್ನು ನಿಲ್ಲಿಸಿದ 2ನೇ ರಾಜ್ಯ ಕೇರಳವಾಗಿದೆ.

'ಮಂಡ್ಯ ಬೆಲ್ಲ' ಎಂಬ ಬ್ರಾಂಡ್‌ನಲ್ಲಿಯೇ ಎಪಿಎಂಸಿ ವರ್ತಕರು ಕೇರಳಕ್ಕೆ ಬೆಲ್ಲವನ್ನು ಕಳಿಸುತ್ತಿದ್ದರು. ಇದುವರೆಗೂ ಸುಮಾರು 20 ಸಾವಿರ ಟನ್ ಬೆಲ್ಲವನ್ನು ಮಾರಾಟ ಮಾಡಲಾಗಿದೆ. ಈಗ ಕೇರಳ ಸರ್ಕಾರ ಮಂಡ್ಯದ ಬೆಲ್ಲ ಖರೀದಿಯನ್ನು ಸ್ಥಗಿತ ಮಾಡಿದೆ.

ಸಂಕಷ್ಟದಲ್ಲಿದ್ದ ಮಂಡ್ಯ ರೈತರಿಗೆ ಕನಕಾಂಬರದಿಂದ ಕನಕವೃಷ್ಠಿ ಆಗಿದ್ದು ಹೇಗೆ? ಸಂಕಷ್ಟದಲ್ಲಿದ್ದ ಮಂಡ್ಯ ರೈತರಿಗೆ ಕನಕಾಂಬರದಿಂದ ಕನಕವೃಷ್ಠಿ ಆಗಿದ್ದು ಹೇಗೆ?

ಬೆಲ್ಲದ ತಯಾರಿಕೆಯಲ್ಲಿ ನಿಷೇಧಿತ ರಾಸಾಯನಿಕ ಮತ್ತು ಸಕ್ಕರೆ ಬಳಕೆ ಮಾಡಲಾಗಿದೆ ಎಂಬ ಕಾರಣ ನೀಡಿ ಖರೀದಿಯನ್ನು ನಿಲ್ಲಿಸಲಾಗಿದೆ. ಈ ಹಿಂದೆ ಗುಜರಾತ್ ರಾಜ್ಯ ಸಹ ಮಂಡ್ಯದ ಬೆಲ್ಲದ ಖರೀದಿಯನ್ನು ಸ್ಥಗಿತಗೊಳಿಸಿತ್ತು.

ಒಂದು ಜಿಲ್ಲೆ ಒಂದು ಉತ್ಪನ್ನ: ಮಂಡ್ಯದ ಬೆಲ್ಲಕ್ಕೆ ಬರಲಿದೆಯಾ ಶುಕ್ರದೆಸೆ?ಒಂದು ಜಿಲ್ಲೆ ಒಂದು ಉತ್ಪನ್ನ: ಮಂಡ್ಯದ ಬೆಲ್ಲಕ್ಕೆ ಬರಲಿದೆಯಾ ಶುಕ್ರದೆಸೆ?

Kerala Government Stops Purchase Of Mandya Jaggery

ಮಂಡ್ಯದ ಎಪಿಎಂಸಿ ಗೋದಾಮಿನ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಕಳಪೆ ಬೆಲ್ಲಪತ್ತೆಯಾಗಿದೆ. ಕಳಪೆ ಬೆಲ್ಲವನ್ನು ತಯಾರು ಮಾಡುತ್ತಿದ್ದ ಆಲೆಮನೆ, ಮಾರಾಟ ಮಾಡುತ್ತಿದ್ದ ಟ್ರೇಡರ್ಸ್‌ಗಳ ಮೇಲೂ ದಾಳಿ ನಡೆದಿದೆ.

ಮಂಡ್ಯದಲ್ಲಿ ಕಳಪೆ ಬೆಲ್ಲ ಮಾರಾಟ ತಡೆಗೆ ಡಿಸಿ ಸೂಚನೆಮಂಡ್ಯದಲ್ಲಿ ಕಳಪೆ ಬೆಲ್ಲ ಮಾರಾಟ ತಡೆಗೆ ಡಿಸಿ ಸೂಚನೆ

ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರದಿಂದ ಕಳಪೆ ಬೆಲ್ಲವನ್ನು ತರಿಸಿ, ಅದಕ್ಕೆ ಸಕ್ಕರೆ, ರಾಸಾಯನಿಕ ಸೇರಿಸಿ ಪುನರ್ ಉತ್ಪಾದನೆ ಮಾಡಿ 'ಮಂಡ್ಯ ಬೆಲ್ಲ' ಬ್ರಾಂಡ್‌ನಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂಬುದು ಆರೋಪವಾಗಿದೆ.

Recommended Video

ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡುವ ಪ್ರಸ್ತಾಪ ಇಲ್ಲ : ಕೇಂದ್ರ ಸರ್ಕಾರ ಸ್ಪಷ್ಟನೆ | Oneindia Kannada

'ಒಂದು ಜಿಲ್ಲೆ ಒಂದು ಉತ್ಪನ್ನ'ದ ಅಡಿ ಮಂಡ್ಯ ಬೆಲ್ಲವನ್ನು ಆಯ್ಕೆ ಮಾಡಲಾಗಿದೆ. ಆದರೆ, ಕೆಲವರು ಕಳಪೆ ಬೆಲ್ಲವನ್ನು ಉತ್ಪಾದನೆ ಮಾಡಿ ಮಾರಾಟ ಮಾಡಿದ್ದರಿಂದ ಬ್ರಾಂಡ್‌ನ ಹೆಸರಿಗೆ ತೊಂದರೆಯಾಗಿದೆ.

English summary
Kerala government stop the purchase Mandya Jaggery. Government distributing Mandya Jaggery under the scheme of food and civil supplies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X