ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಸ್ವಾಮಿ ಕಣ್ಣೀರಿಗೆ ನಾರಾಯಣ ಗೌಡ ಹೇಳಿದ್ದೇನು?

|
Google Oneindia Kannada News

ಮಂಡ್ಯ, ನವೆಂಬರ್ 28 : "ಭಗವಂತನ ಮೇಲಾಣೆ ನಾನು ಯಾವುದೇ ಪತ್ರ ಬರೆದಿಲ್ಲ. ನಕಲಿ ಪತ್ರ ಓದಿ ಓಟಿಗಾಗಿ ಕಣ್ಣೀರು ಹಾಕಿದ್ದಾರೆ" ಎಂದು ಕೆ. ಸಿ. ನಾರಾಯಣ ಗೌಡ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

ಎಚ್. ಡಿ. ಕುಮಾರಸ್ವಾಮಿ ಕೆ. ಆರ್. ಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ಬುಧವಾರ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು. ನಾರಾಯಣ ಗೌಡ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಸಮಾವೇಶದಲ್ಲಿ ಓದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಗುಡುಗು, ಹೊಗೆಯಂತೆ ಎಚ್. ಡಿ. ಕುಮಾರಸ್ವಾಮಿ ಕಣ್ಣೀರು!ಗುಡುಗು, ಹೊಗೆಯಂತೆ ಎಚ್. ಡಿ. ಕುಮಾರಸ್ವಾಮಿ ಕಣ್ಣೀರು!

ಗುರುವಾರ ನಾರಾಯಣ ಗೌಡರು ಮಾಧ್ಯಮಗಳ ಜೊತೆ ಮಾತನಾಡಿ, "ರಾಜಕೀಯಕ್ಕಾಗಿ ಸುಳ್ಳು ಹೇಳಿ ಕಣ್ಣೀರು ಹಾಕಬೇಡಿ. ಈ ರೀತಿ ಸುಳ್ಳು ಹೇಳುವುದರಿಂದಲೇ ನಾನು ಪಕ್ಷ ತೊರೆದಿದ್ದು" ಎಂದು ವಾಗ್ದಾಳಿ ನಡೆಸಿದರು.

ನಾರಾಯಣಗೌಡ ಬರೆದ ಪತ್ರ ಓದಿ ಕಣ್ಣೀರಿಟ್ಟ ಕುಮಾರಸ್ವಾಮಿನಾರಾಯಣಗೌಡ ಬರೆದ ಪತ್ರ ಓದಿ ಕಣ್ಣೀರಿಟ್ಟ ಕುಮಾರಸ್ವಾಮಿ

KC Narayana Gowda Attack On Kumaraswamy

ಸಮಾವೇಶದಲ್ಲಿ ಮಾತನಾಡಿದ್ದ ಎಚ್. ಡಿ. ಕುಮಾರಸ್ವಾಮಿ, "ಈ ಹಿಂದೆ ನಾರಾಯಣ ಗೌಡ ನಾನು ಅನಾಥ, ನಿವೇ ಸಹೋದರ, ರಾಜಕೀಯದಲ್ಲಿ ದೇವೇಗೌಡರೇ ನನಗೆ ತಂದೆ" ಎಂದು ಪತ್ರ ಬರೆದಿದ್ದ ಎಂದು ಓದಿ ಹೇಳಿದ್ದರು.

ಕುಮಾರಸ್ವಾಮಿ ಎಲೆಕ್ಷನ್ ಟೈಮಲ್ಲಿ ಮಾತ್ರ ಕಣ್ಣೀರ್ ಹಾಕ್ತಾರಂತೆಕುಮಾರಸ್ವಾಮಿ ಎಲೆಕ್ಷನ್ ಟೈಮಲ್ಲಿ ಮಾತ್ರ ಕಣ್ಣೀರ್ ಹಾಕ್ತಾರಂತೆ

ಮಾಜಿ ಸಚಿವ ಡಿ. ಸಿ. ತಮ್ಮಣ್ಣ ಹೇಳಿಕೆಗೆ ತಿರುಗೇಟು ಕೊಟ್ಟ ನಾರಾಯಣ ಗೌಡ, "ನಾನು ಕಾಮಾಟಿಪುರವನ್ನು ನೋಡಿಲ್ಲ. ಅದೆಲ್ಲಾ ಡಿ. ಸಿ. ತಮ್ಮಣ್ಣಗೆ ಗೊತ್ತು. ಅವರಿಗೆ ಅನುಭವ ಇರಬೇಕು" ಎಂದರು.

"ನಾನು ಮಹಿಳೆಯರನ್ನು ಪೂಜ್ಯ ಸ್ಥಾನದಲ್ಲಿ ನೋಡುವವನು. ಇದು ಕೆ. ಆರ್ ಪೇಟೆ ಮಹಿಳೆಯರಿಗೆ ಮಾಡಿದ ಅಪಮಾನ. ಮಹಿಳೆಯರು ಡಿ. ಸಿ. ತಮ್ಮಣ್ಣಗೆ ಶಾಪ ಹಾಕಬೇಕು" ಎಂದು ನಾರಾಯಣ ಗೌಡ ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಕೆ. ಎಸ್. ಈಶ್ವರಪ್ಪ, ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಸಹ ಕುಮಾರಸ್ವಾಮಿ ಕಣ್ಣೀರಿನ ಕುರಿತು ಲೇವಡಿ ಮಾಡಿದ್ದರು.

ಡಿಸೆಂಬರ್ 5ರಂದು ಕೆ. ಆರ್. ಪೇಟೆ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಕೆ. ಸಿ. ನಾರಾಯಣ ಗೌಡ, ಕಾಂಗ್ರೆಸ್‌ನಿಂದ ಕೆ. ಬಿ. ಚಂದ್ರಶೇಖರ್, ಜೆಡಿಎಸ್‌ನಿಂದ ದೇವರಾಜ್ ಬಿ. ಎಲ್. ಕಣದಲ್ಲಿದ್ದಾರೆ.

English summary
Former Karnataka chief minister H.D.Kumaraswamy turned emotional in Mandya during by elections campaign. K. R. Pet BJP candidate K.C.Narayana Gowda verbally attacked Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X