ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಕ್ಕನಂತರ ವೋಟು ಮಂಡ್ಯದಿಂದ ಗಂಟುಮೂಟೆ ಕಟ್ಟು!

By ಕಿಕು
|
Google Oneindia Kannada News

Recommended Video

Karnataka Elections 2018 : ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗಂಟು ಮೂಟೆ ಕಟ್ಟು ಆಟ

ಮಂಡ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್ ಗಾಗಿ ನಡೆದ ರಾಜಕಾರಣ ಕಡೆಗೂ ದಡಮುಟ್ಟಿದೆ. ಟಿಕೆಟ್ ಹಂಚುವಿಕೆಯಲ್ಲಿ ಹಲವು ಕ್ಷೇತ್ರಗಳಲ್ಲಿ ದ್ವಂದ್ವ, ಅಸಮಾಧಾನ, ತೊಳಲಾಟಗಳಿರುವುದು ಎಲ್ಲ ಪಕ್ಷಗಳಲ್ಲೂ ಸಾಮಾನ್ಯವಾಗಿ ಕಂಡುಬರುವ ಸಂಗತಿಯೇ. ಆದರೆ, ಮಂಡ್ಯ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ನಡೆದ ಇಂತಹ ರಾಜಕೀಯ ಮೇಲಾಟ ಇದೆ ಮೊದಲು ಹಾಗು ವಿಶೇಷವಾದದ್ದು. ಈ ಎಲ್ಲ ಪ್ರಹಸನಕ್ಕೂ ಮೂಲ ಪುರುಷ ಮಂಡ್ಯದ ಹಾಲಿ ಶಾಸಕ ಅಂಬರೀಷ್!

ಕಳೆದ 20 ವರ್ಷಕ್ಕೂ ಹೆಚ್ಚು ಕಾಲ ಚಿತ್ರನಟ, ಮಂಡ್ಯದ ಹಾಲಿ ಶಾಸಕ ಅಂಬರೀಷ್ ಅವರು ಮಂಡ್ಯ ರಾಜಕಾರಣದಲ್ಲಿ ಪಾರುಪತ್ಯ ಮೆರೆದಿದ್ದಾರೆ. ಆದರೆ ಕಳೆದೆರಡು ವರ್ಷಗಳಿಂದ ತಮ್ಮ ರಾಜಕೀಯ ಅವನತಿಯತ್ತ ಸಾಗುತ್ತಿದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಅಂಬಿ ನಿರ್ಗಮನ : ಕಾಂಗ್ರೆಸ್ ಮೇಲೆ ಪರಿಣಾಮ ಬೀರಲು 10 ಕಾರಣ
ಮೊದಲಬಾರಿಗೆ ಜೆಡಿಎಸ್ ನಿಂದ ಲೋಕಸಭೆಗೆ ಆಯ್ಕೆಯಾಗಿ, ನಂತರ 2 ಬಾರಿ ಕಾಂಗ್ರೆಸ್ ನಿಂದ ಲೋಕಸಭೆ ಪ್ರವೇಶಿಸಿ, 2013ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿದಾಗ ಇದು ನನ್ನ ಕೊನೆಯ ಚುನಾವಣೆಯೆಂದು ಘೋಷಿಸಿ, ಗೆದ್ದು ಈಗ 2018ರ ಚುನಾವಣೆಯಲ್ಲಿ ಸ್ಪರ್ಧಿಸದೇ ತಾವಾಡಿದ ಮಾತುಗಳನ್ನು ಉಳಿಸಿಕೊಂಡಿದ್ದಾರೆ.

ಪ್ರತೀ ಬಾರಿಯೂ ಅಂಬರೀಷ್ ಕೇವಲ ತಮಗೆ ಬೇಕಾದ ಟಿಕೆಟ್ ಮಾತ್ರ ಪಡಿಯುತ್ತಿರಲಿಲ್ಲ, ತಮ್ಮ ಅನುಯಾಯಿಗಳಿಗೂ ಟಿಕೆಟ್ ಕೊಡಿಸುವಲ್ಲಿ ಯಶಸ್ಸು ಕಂಡಿದ್ದರು. ಆದರೆ ಎಂದಿಗೂ ಜನಸಾಮಾನ್ಯರಿಗೆ, ರೈತರಿಗೆ, ಸಕ್ಕರೆ ಕಾರ್ಖಾನೆ ಕಾರ್ಮಿಕರಿಗೆ ಸಿಗುತ್ತಲೇ ಇರಲಿಲ್ಲ.

ಸಿಕ್ಕನಂತರ ವೋಟು ಗಂಟುಮೂಟೆ ಕಟ್ಟು

ಸಿಕ್ಕನಂತರ ವೋಟು ಗಂಟುಮೂಟೆ ಕಟ್ಟು

ಜನಪ್ರತಿನಿಧಿಗಳು ಎಂದರೆ ಎಲ್ಲ ಕಾಲದಲ್ಲೂ ಜನರ ಮದ್ಯೆ ಇದ್ದು ಜನರೊಂದಿಗೆ ಬೆರೆತು, ಎಲ್ಲರ ಸಮಸ್ಯೆಗಳಿಗೆ ಸ್ಪಂದಿಸುವುದು ಎಲ್ಲರೂ ಅಪೇಕ್ಷಿಸುವ ರಾಜಕಾರಣಿಯ ಕನಿಷ್ಠ ಯೋಗ್ಯತೆ. ಆದರೆ ಮಂಡ್ಯದಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಬೆಳವಣಿಗೆಯಿಂದ ಜನತೆ ಬೆಸತ್ತಂತೆ ಕಾಣುತ್ತಿದೆ. ಕಾರಣ, ಇಲ್ಲಿನ ರಾಜಕಾರಣಿಗಳು ವಿಶೇಷವಾಗಿ ಕಾಂಗ್ರೆಸ್ ಪಕ್ಷದವರು ಕೇವಲ ಚುನಾವಣೆಗಳು ಬಂದಾಗ, ಬಾಡಿಗೆ ಮನೆಯೊಂದನ್ನು ಮಾಡಿ ಚುನಾವಣೆ ಮುಗಿದನಂತರ ಗಂಟುಮೂಟೆ ಕಟ್ಟಿಕೊಂಡು ಬೆಂಗಳೂರು ಅಥವಾ ಮತ್ಯಾವುದೋ ಊರಿಗೆ ಹೋಗಿಬಿಡುವುದು ಎದ್ದು ಕಾಣುತ್ತಿದೆ. ಇಲ್ಲಿ ಪ್ರತಿ ಚುನಾವಣೆಯಲ್ಲೂ ಇಂತಹುದೇ ನಡೆಯುತ್ತಿದ್ದರೂ ಕಾಂಗ್ರೆಸ್ ಪಕ್ಷ ಅಂಥವರನ್ನೇ ಸ್ಪರ್ಧೆಗಿಳಿಸುತ್ತಿರುವುದು ಶೋಚನೀಯ.

ಮಂಡ್ಯದ ಗಂಡು ಕಚೇರಿಯನ್ನೇ ಮಾಡಲಿಲ್ಲ

ಮಂಡ್ಯದ ಗಂಡು ಕಚೇರಿಯನ್ನೇ ಮಾಡಲಿಲ್ಲ

ಚಿತ್ರನಟ ಮಂಡ್ಯದ ಗಂಡು ಅಂಬರೀಷ್ ಮೂರು ಬಾರಿ ಸಂಸದನಾಗಿ, ಕೇಂದ್ರ ಸಚಿವನಾಗಿ, ಶಾಸಕ ಹಾಗು ರಾಜ್ಯ ಸರ್ಕಾರದಲ್ಲಿ ವಸತಿ ಹಾಗು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವನಾಗಿ ಎಂದೂ ಮಂಡ್ಯದಲ್ಲಿ ವಾಸಿಸಲೇ ಇಲ್ಲ. ಕನಿಷ್ಠ ಪಕ್ಷ ಒಂದು ಕಚೇರಿಯನ್ನೂ ಮಾಡಿಕೊಳ್ಳಲಿಲ್ಲ. ಜನ ಅಹವಾಲುಗಳನ್ನು ಹೊತ್ತು ಅಂಬರೀಷರನ್ನು ಕಾಣಲು ಬೆಂಗಳೂರಿಗೆ ಹೋಗಿ, ಅಲ್ಲೂ ಸಿಗದೇ ಹೈರಾಣಬೇಕಾಗಿತ್ತು. 2013ರ ಚುನಾವಣೆಯ ನಂತರ ಗೆದ್ದು ಸಚಿವನಾದ ಮೇಲೆ ಮಂಡ್ಯದಲ್ಲಿ ವಾಸಿಸುವುದು ಬಿಡಿ, ಮಂಡ್ಯಕ್ಕೆ ಬರುವುದೇ ತೀರಾ ವಿರಳವಾಗಿ ಹೋಯಿತು. ಈ ಬಾರಿ ಚುನಾವಣೆಯಲ್ಲೂ ಸ್ಪರ್ಧಿಸುತ್ತಿಲ್ಲ, ಪ್ರಚಾರಕ್ಕೂ ಬರುತ್ತಿಲ್ಲ. ಇನ್ನು ಮಂಡ್ಯಕ್ಕೆ ಬರ್ತಾರಾ?

ಅಂಬರೀಶ್ ಚುನಾವಣಾ ನಿವೃತ್ತಿ: ಮಂಡ್ಯ ರಾಜಕೀಯದಲ್ಲಿ ಏನೇನಾಗಬಹುದು?ಅಂಬರೀಶ್ ಚುನಾವಣಾ ನಿವೃತ್ತಿ: ಮಂಡ್ಯ ರಾಜಕೀಯದಲ್ಲಿ ಏನೇನಾಗಬಹುದು?

ಮನೆ ಖಾಲಿ ಮಾಡಿಕೊಂಡು ಹೋದ ರಮ್ಯಾ...

ಮನೆ ಖಾಲಿ ಮಾಡಿಕೊಂಡು ಹೋದ ರಮ್ಯಾ...

ಇನ್ನು ಖ್ಯಾತ ನಟಿ, ಮಾಜಿ ಸಂಸದೆ, ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಹೆಡ್ ರಮ್ಯಾ ಕೂಡ ತನ್ನ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿದ್ದಾಗ ಮಂಡ್ಯ ನಗರದ ವಿದ್ಯಾನಗರದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು, ನಂತರ ಚುನಾವಣೆಯಲ್ಲಿ ಸೋತನಂತರ, ಮನೆ ಖಾಲಿ ಮಾಡಿಕೊಂಡು ಹೋದವರು ಮತ್ತೆ ಎಂದೂ ಮಂಡ್ಯಕ್ಕೆ ತಿರುಗಿಯೂ ನೋಡಲಿಲ್ಲ. ಎರಡು ಚುನಾವಣೆಯಲ್ಲಿ ಮತ ಹಾಕಿದ್ದ ಮತದಾರ ತಮ್ಮ ನಾಯಕಿ ಬೆಂಗಳೂರಿನಲ್ಲಿದ್ದಾರೋ, ದೆಹಲಿಯಲ್ಲಿದ್ದಾರೋ ಅಥವಾ ಲಂಡನ್ನಿನಲ್ಲಿದ್ದಾರೋ - ಎಂಬ ಊಹೆಗಳಲ್ಲೇ ತಮ್ಮ ಜೀವನ ಕಳೆಯುತ್ತಿರುವುದು ಇಲ್ಲಿನ ಮತದಾರನ ದೌರ್ಭಾಗ್ಯ.

ಇವರಿಬ್ಬರ ಸಾಲಿಗೆ ಗಣಿಗ ರವಿ ಸೇರ್ಪಡೆ

ಇವರಿಬ್ಬರ ಸಾಲಿಗೆ ಗಣಿಗ ರವಿ ಸೇರ್ಪಡೆ

ಇಂದಿನ ಚುನಾವಣೆಯ ಮಂಡ್ಯದ ಹೊಸ ಅಭ್ಯರ್ಥಿ ಗಣಿಗ ರವಿಕುಮಾರ್ ಕೂಡ ಇತ್ತೀಚಿಗಷ್ಟೇ ನಗರದ ಸುಭಾಷ್ ನಗರದ 3ನೆ ಕ್ರಾಸ್ ನಲ್ಲಿರುವ ದಿವಂಗತ ಡಾ.ಲೋಕೇಶ್ ಬಾಬು ರವರ ಮನೆ ಬಾಡಿಗೆಗೆ ಪಡೆದಿದ್ದಾರೆ. ಆದರೂ ಅವರದು ಬೆಂಗಳೂರಿನಿಂದಲೇ ಓಡಾಟ. ಮೊದಲಿಗೆ ಮಂಡ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದಕ್ಕೆ, ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ, ಜಿಲ್ಲಾ ಕಾಂಗ್ರೆಸ್ ಕಚೇರಿಯನ್ನು ದ್ವಂಸಗೊಳಿಸಿದ್ದ ರವಿಕುಮಾರ್ ಗೆ ಟಿಕೆಟ್ ನೀಡಿ ಕಾಂಗ್ರೆಸ್ ಅಚ್ಚರಿ ಮೂಡಿಸಿದೆ.

ಹಗ್ಗ-ಜಗ್ಗಾಟ ಅಂತ್ಯ : ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಅಂತಿಮ!ಹಗ್ಗ-ಜಗ್ಗಾಟ ಅಂತ್ಯ : ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಅಂತಿಮ!

ಯಾರ ಬಾಯಿಗೆ ಮಂಡ್ಯದ ಸಿಹಿ ಸಕ್ಕರೆ?

ಯಾರ ಬಾಯಿಗೆ ಮಂಡ್ಯದ ಸಿಹಿ ಸಕ್ಕರೆ?

ಜನರ ಮದ್ಯೆಯೇ ಇದ್ದು, ಮಂಡ್ಯದಲ್ಲೇ ಕೈಗೆ ಸಿಗುವ ಅಭ್ಯರ್ಥಿಗಳ ಕೊರತೆ ಕಾಂಗ್ರೆಸ್ ಗೆ ಇದೆಯೇ ಎಂಬುದು ಜನರಲ್ಲಿ ಮೂಡಿರುವ ಪ್ರಶ್ನೆ. ಈ ಬಾರಿ ಗಣಿಗ ರವಿಕುಮಾರ್ ರನ್ನು ಮಂಡ್ಯ ಜನತೆ ಗೆಲ್ಲಿಸಿದರೆ, ಮತ್ತೆ ತಮ್ಮ ಜನಪ್ರತಿನಿಧಿಯ ಹುಡುಕಾಟದಲ್ಲಿ ತೊಡಗಿಕೊಳ್ಳಬಹುದಾದ ಅನಿವಾರ್ಯಗಳು ಸೃಷ್ಟಿಯಾಗಬಹುದು. ಅಂದ ಹಾಗೆ, ಮಂಡ್ಯದಲ್ಲಿ ಗಣಿಗ ರವಿಕುಮಾರ್ ವಿರುದ್ಧ ಬಿಜೆಪಿಯಿಂದ ಚಂದಗಲ ಶಿವಣ್ಣ ಮತ್ತು ಜೆಡಿಎಸ್ ನಿಂದ ಎಂ ಶ್ರೀನಿವಾಸ್ ಅವರು ಸೆಣಸಲಿದ್ದಾರೆ. ಯಾರ ಬಾಯಿಗೆ ಮಂಡ್ಯದ ಜನತೆ ಸಕ್ಕರೆ ಹಾಕಲಿದ್ದಾರೆ?

5 ರುಪಾಯಿ ನಾಣ್ಯಗಳನ್ನೇ ಠೇವಣಿ ಕಟ್ಟಿದ ವೈದ್ಯ, ಮಂಡ್ಯದಲ್ಲಿ ನಾಮಪತ್ರ5 ರುಪಾಯಿ ನಾಣ್ಯಗಳನ್ನೇ ಠೇವಣಿ ಕಟ್ಟಿದ ವೈದ್ಯ, ಮಂಡ್ಯದಲ್ಲಿ ನಾಮಪತ್ರ

English summary
It is shame that Congress candidates search for rental house in Mandya only when they get ticket to contest in Karnataka assembly elections. Ambareesh, Ramya have done the same thing. They have never thought of having own house or office in Mandya. Now, Ganiga Ravikumar has joined them too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X