ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ: ರೈತಸಂಘದ ಕಾರ್ಯಕರ್ತನ ಮನೆಯಿಂದ ಅಕ್ರಮ ಮದ್ಯ ವಶ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಮೇ 05: ರೈತಸಂಘದ ಕಾರ್ಯಕರ್ತನೊಬ್ಬನ ಮನೆಯಲ್ಲಿ ಅಕ್ರಮ ಮದ್ಯ ಪತ್ತೆಯಾಗಿದೆ. ಮಂಡ್ಯ ಜಿಲ್ಲೆಯ ಪಾಂಡವರಪುರ ಪಟ್ಟಣದ ಕೃಷ್ಣನಗರದ ರೈತಸಂಘದ ಕಾರ್ಯಕರ್ತ ಚಿಟ್ಟನಹಳ್ಳಿ ಮಹೇಶ ಎಂಬುವರ ಮನೆಯ ಮೇಲೆ ಅಬಕಾರಿ ಉಪ ಆಯುಕ್ತರು ದಾಳಿ ನಡೆಸಿದ್ದು ಈ ವೇಳೆ 16 ಲೀಟರ್ ಅಕ್ರಮ ಮದ್ಯ ಪತ್ತೆಯಾಗಿದ್ದು, ದಾಳಿ ವೇಳೆ ಮಹೇಶ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ.

ಪಟ್ಟಣದ ಕೃಷ್ಣನಗರದಲ್ಲಿ ನಿವೃತ್ತ ಉಪ ಪ್ರಾಂಶುಪಾಲ ಎಸ್.ನಾರಾಯಣಗೌಡ ಎಂಬುವರಿಗೆ ಸೇರಿದ ಮನೆಯ ಮೊದಲನೆ ಮಹಡಿಯಲ್ಲಿ ರೈತ ಸಂಘದ ಕಾರ್ಯಕರ್ತ ಮತ್ತು ಗುತ್ತಿಗೆದಾರ ಚಿಟ್ಟನಹಳ್ಳಿ ಮಹೇಶ ಬಾಡಿಗೆಗೆ ಇದ್ದರು ಎನ್ನಲಾಗಿದೆ. ತಮ್ಮ ಮನೆಯಲ್ಲಿ ಮದ್ಯವನ್ನು ಸಂಗ್ರಹಿಸಿಟ್ಟಿದ್ದರು.

ಬೆಂಗಳೂರು: ಮತದಾನ, ಮತಎಣಿಕೆ ದಿನ ಮದ್ಯ ಮಾರಾಟ ಇಲ್ಲ ಬೆಂಗಳೂರು: ಮತದಾನ, ಮತಎಣಿಕೆ ದಿನ ಮದ್ಯ ಮಾರಾಟ ಇಲ್ಲ

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಆಯುಕ್ತ ಮಾದೇಶ್ ತಮ್ಮ ಸಿಬ್ಬಂದಿಯೊಡನೆ ದಾಳಿ ನಡೆಸಿದಾಗ ಅಕ್ರಮ ಮದ್ಯ ಪತ್ತೆಯಾಗಿದೆ.

Karnataka elections: Illegal liquor detained

ದಾಳಿ ನಡೆಯುತ್ತಿದ್ದಂತೆ ಸಾರ್ವಜನಿಕರಿಗೆ ವಿಷಯ ತಿಳಿದು ಮಹೇಶನ ಮನೆ ಮುಂದೆ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು ಕಂಡು ಬಂದಿತು. ವಶಪಡಿಸಿಕೊಂಡ ಅಕ್ರಮ ಮದ್ಯವನ್ನು ಅಬಕಾರಿ ಅಧಿಕಾರಿಗಳು ಚೀಲದಲ್ಲಿ ತುಂಬಿಸಿ ಕೊಂಡೊಯ್ದಿದ್ದಾರೆ. ಈ ತನಿಖೆ ನಡೆಯುತ್ತಿದೆ.

English summary
Karnataka assebly elections 2018: As model code of conduct is implemented in Karnataka for assembly elections, illegal liquor has been detained in a farmer organisation worker's house in Pandavapura, Mandya district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X