ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುತಾತ್ಮ ಯೋಧ ಗುರು ಕುಟುಂಬಕ್ಕೆ ಕಾಂಗ್ರೆಸ್‌ನಿಂದ 5 ಲಕ್ಷ ನೆರವು

|
Google Oneindia Kannada News

ಮಂಡ್ಯ, ಫೆಬ್ರವರಿ 20: ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು ಅವರ ಕುಟುಂಬಕ್ಕೆ ರಾಜ್ಯ ಕಾಂಗ್ರೆಸ್‌ ಐದು ಲಕ್ಷ ರೂಪಾಯಿ ನೆರವು ನೀಡಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ನಿಯೋಗ ಇಂದು ಮಂಡ್ಯಕ್ಕೆ ಭೇಟಿ ನೀಡಿ ಹುತಾತ್ಮ ಯೋಧ ಗುರು ಅವರ ನಿವಾಸಕ್ಕೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು, ದಿನೇಶ್ ಗುಂಡೂರಾವ್ ಅವರು ರಾಜ್ಯ ಕಾಂಗ್ರೆಸ್ ಪರವಾಗಿ ಐದು ಲಕ್ಷ ರೂಪಾಯಿಗಳ ಚೆಕ್ ನೀಡಿದರು.

ಕಾಶ್ಮೀರದಿಂದ ವಾಪಸ್ ಬಂದ ಪತ್ರಕರ್ತ ರವಿ ಬೆಳಗೆರೆ ಹಂಚಿಕೊಂಡ ಎದೆ ನಡುಗಿಸುವ ಮಾಹಿತಿಗಳು ಕಾಶ್ಮೀರದಿಂದ ವಾಪಸ್ ಬಂದ ಪತ್ರಕರ್ತ ರವಿ ಬೆಳಗೆರೆ ಹಂಚಿಕೊಂಡ ಎದೆ ನಡುಗಿಸುವ ಮಾಹಿತಿಗಳು

ಇದೇ ಸಮಯದಲ್ಲಿ ಮನ್ಮೂಲ್‌ನಿಂದ ಮೂರು ಲಕ್ಷ ಮತ್ತು ಡಿಸಿಸಿ ಬ್ಯಾಂಕ್ ವತಿಯಿಂದ ಎರಡು ಲಕ್ಷ ನೆರವನ್ನು ಯೋಧ ಗುರು ಅವರ ಕುಟುಂಬಕ್ಕೆ ನೀಡಲಾಯಿತು. ಒಟ್ಟು ಹತ್ತು ಲಕ್ಷ ರೂಪಾಯಿಗಳ ನೆರವನ್ನು ಇಂದು ಗುರು ಕುಟುಂಬಕ್ಕೆ ನೀಡಲಾಯಿತು.

Karnataka congress gives 5 lakh to martyred soldier Gurus family

ನಾನೂ ಸೇನೆಗೆ ಸೇರಿ ಉಗ್ರರ ರುಂಡ ಚೆಂಡಾಡುತ್ತೇನೆ:ಹುತಾತ್ಮ ಗುರು ಪತ್ನಿ ಕಲಾವತಿನಾನೂ ಸೇನೆಗೆ ಸೇರಿ ಉಗ್ರರ ರುಂಡ ಚೆಂಡಾಡುತ್ತೇನೆ:ಹುತಾತ್ಮ ಗುರು ಪತ್ನಿ ಕಲಾವತಿ

ಸರ್ಕಾರವು ಈಗಾಗಲೇ ಗುರು ಅವರ ಕುಟುಂಬಕ್ಕೆ 25 ಲಕ್ಷ ನೆರವು ನೀಡಿದೆ. ಯೋಧ ಗುರು ಅವರ ಕುಟುಂಬದ ಜೊತೆಗೆ ನಿಲ್ಲಬೇಕಾದುದು ನಮ್ಮ ಧರ್ಮ ಅದನ್ನು ಪಾಲಿಸಿದ್ದೇವೆ. ಇದು ಕೆಪಿಸಿಸಿ ವತಿಯಿಂದ ಅಳಿಲು ಸೇವೆ ಎಂದು ಈ ದಿನೇಶ್ ಗುಂಡೂರಾವ್ ಹೇಳಿದರು.

Karnataka congress gives 5 lakh to martyred soldier Gurus family

ಯೋಧ ಗುರು ಕುಟುಂಬಕ್ಕೆ ಅರ್ಧ ಎಕರೆ ಜಮೀನು ಕೊಟ್ಟ ಸುಮಲತಾ ಅಂಬರೀಶ್‌ ಯೋಧ ಗುರು ಕುಟುಂಬಕ್ಕೆ ಅರ್ಧ ಎಕರೆ ಜಮೀನು ಕೊಟ್ಟ ಸುಮಲತಾ ಅಂಬರೀಶ್‌

ಈ ರೀತಿಯ ದಾಳಿಗಳನ್ನು ತಡೆಯುವಂತಹಾ ಕೆಲಸವನ್ನು ಮೋದಿ ಅವರು ಮಾಡಬೇಕು, ಪುಲ್ವಾಮಾ ದಾಳಿ ವಿಷಯದಲ್ಲಿ ಮೋದಿ ಅವರ ಜೊತೆ ದೇಶವೇ ನಿಂತಿದೆ, ಇದು ಮಾತನಾಡುವ ಸಮಯ ಅಲ್ಲ ಮಾಡಿ ತೋರಿಸುವ ಸಮಯ ಎಂದು ದಿನೇಶ್ ಗುಂಡೂರಾವ್ ಹೇಳಿದರು.

English summary
Karnataka congress gives 5 lakh to martyred soldier Guru's family. Mandya's Guru was martyred in Pulwama terror attack. State government already giving 25 lakh to Guru family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X