ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್ಡಿಕೆ ತನ್ನ ಹೆಸರು ಉಳಿಸಿಕೊಳ್ಳಲು ರೇವಣ್ಣನ ಹೆಸರು ಹಾಳು ಮಾಡುತ್ತಿದ್ದಾರೆ: ಚೆಲುವರಾಯಸ್ವಾಮಿ

|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿ ಹಾಗು ಎಚ್ ಡಿ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ ಎನ್ ಚೆಲುವರಾಯ ಸ್ವಾಮಿ

ಮಂಡ್ಯ, ಜುಲೈ 15: ಅತೃಪ್ತ ಶಾಸಕರು ಯಾವುದೇ ಮನವೊಲಿಕೆಗೆ, ಆಫರ್ ಗಳಿಗೆ ಬಗ್ಗುತ್ತಿಲ್ಲ ಎಂದರೆ, ಅವರಿಗೆಲ್ಲಾ ಸಮ್ಮಿಶ್ರ ಸರಕಾರದ ಮೇಲೆ ಎಷ್ಟು ಬೇಸರ ಇರಬೇಡ. ಇದಕ್ಕೆಲ್ಲಾ ಕಾರಣ ಸಿಎಂ ಕುಮಾರಸ್ವಾಮಿ ಮತ್ತು ಅವರ ಸಹೋದರ ರೇವಣ್ಣ ಎಂದು ಮಾಜಿ ಶಾಸಕ ಚೆಲುವರಾಯಸ್ವಾಮಿ ದೂರಿದ್ದಾರೆ.

ಕರ್ನಾಟಕ ರಾಜಕೀಯ LIVE: ರಕ್ಷಣೆ ನೀಡಿರೆಂದು ಮುಂಬೈ ಪೊಲೀಸರ ಮೊರೆ ಹೋದ ಅತೃಪ್ತರುಕರ್ನಾಟಕ ರಾಜಕೀಯ LIVE: ರಕ್ಷಣೆ ನೀಡಿರೆಂದು ಮುಂಬೈ ಪೊಲೀಸರ ಮೊರೆ ಹೋದ ಅತೃಪ್ತರು

ಎಲ್ಲರೂ ರೇವಣ್ಣನನ್ನು ದೂರುತ್ತಿದ್ದಾರೆ, ಸಮಸ್ಯೆಗಳಿಗೆ ಅವರೊಬ್ಬರೇ ಕಾರಣರಲ್ಲ. ಅದರಲ್ಲೂ ಕುಮಾರಸ್ವಾಮಿಯದ್ದೂ ಪಾಲಿದೆ. ಮುಖ್ಯಮಂತ್ರಿಗಳು ತಮ್ಮ ಹೆಸರನ್ನು ಉಳಿಸಿಕೊಳ್ಳಲು ರೇವಣ್ಣನ ಹೆಸರನ್ನು ಡ್ಯಾಮೇಜ್ ಮಾಡುತ್ತಿದ್ದಾರೆಂದು ಚೆಲುವರಾಯಸ್ವಾಮಿ ಆರೋಪಿಸಿದ್ದಾರೆ.

ಕಾಂಗ್ರೆಸ್ಸಿಗೆ ಅತೃಪ್ತರಲ್ಲಿ ಸದ್ಯ ರೋಷನ್ ಬೇಗ್ ಒಬ್ಬರೇ ಗಟ್ಟಿ: ಯೆಸ್!ಕಾಂಗ್ರೆಸ್ಸಿಗೆ ಅತೃಪ್ತರಲ್ಲಿ ಸದ್ಯ ರೋಷನ್ ಬೇಗ್ ಒಬ್ಬರೇ ಗಟ್ಟಿ: ಯೆಸ್!

ಬೇರೆ ಬೇರೆ ಇಲಾಖೆಗಳಲ್ಲಿ ರೇವಣ್ಣ ಎಷ್ಟೇ ಮೂಗು ತೂರಿಸಿದರೂ, ಕೊನೆಗೆ ಕಡತಕ್ಕೆ ಸಹಿ ಹಾಕಬೇಕಾದವರು ಮುಖ್ಯಮಂತ್ರಿಗಳಲ್ಲವೇ ಎಂದು ಚೆಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.

Karnataka coalition government: Problem is not only Revanna, main problem for the government is CM itself: Cheluvarayaswamy

ನನ್ನ ಪ್ರಕಾರ, ಸಮ್ಮಿಶ್ರ ಸರಕಾರ ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಕುಮಾರಸ್ವಾಮಿಯೇ ಹೊಣೆ. ಸುಮ್ಮನೆ ರೇವಣ್ಣನ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದು ಚೆಲುವರಾಯಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜಕೀಯದ ಬಗ್ಗೆ ಹೆಚ್ಚು ಅನುಭವವಿಲ್ಲದವರು ರೇವಣ್ಣನವರನ್ನು ದೂರುತ್ತಿದ್ದಾರೆ. ಅಸಲಿಗೆ ಸಮಸ್ಯೆ ಅದಲ್ಲ ಎಂದು ಚೆಲುವರಾಯಸ್ವಾಮಿ, ಮುಖ್ಯಮಂತ್ರಿಗಳನ್ನು ದೂರಿದ್ದಾರೆ.

ವಿಶ್ವಾಸಮತ, ನಮಗೆ ಗೆಲುವಿನ ಸಿಗ್ನಲ್ ಸಿಕ್ಕಿದೆ: ಡಿ ಕೆ ಶಿವಕುಮಾರ್ವಿಶ್ವಾಸಮತ, ನಮಗೆ ಗೆಲುವಿನ ಸಿಗ್ನಲ್ ಸಿಕ್ಕಿದೆ: ಡಿ ಕೆ ಶಿವಕುಮಾರ್

ರೇವಣ್ಣ ಒಬ್ಬರಿಂದಲೇ ಸಮ್ಮಿಶ್ರ ಸರಕಾರಕ್ಕೆ ಸಮಸ್ಯೆ ಎಂದಾದರೆ, ಅವರನ್ನು ಸಂಪುಟದಿಂದ ಕೈಬಿಡಬಹುದಲ್ಲವೇ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.

English summary
Karnataka coalition government: Problem is not only PWD Minister HD Revanna, main problem for the government is CM Kumaraswamy itself: Former MLA, Congress leader Cheluvarayaswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X