ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದರ್ಶನ್ 100 ಸಲ ಹುಟ್ಟಿದ್ರೂ, ಈ 4 ಹೆಸರನ್ನು ಅಳಿಸಲು ಸಾಧ್ಯವಿಲ್ಲ

|
Google Oneindia Kannada News

Recommended Video

ದರ್ಶನ್ ಗೆ ಸೇಬು ಹೂವಿನ ಹಾರಗಳ ಸುರಿಮಳೆ..!

ಮಂಡ್ಯ, ಏ 3: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಿರುಸಿನ ಪ್ರಚಾರ ಬುಧವಾರವೂ ಮುಂದುವರಿದಿದೆ. ಕೆ ಆರ್ ಪೇಟೆ ಭಾಗದಲ್ಲಿ ಪ್ರಚಾರ ನಡೆಯುತ್ತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಿಸಿಲಲ್ಲಿ ಜೋಡೆತ್ತುಗಳು ಸ್ವಲ್ಪದಿನ ತಿರುಗಲಿ, ಆಮೇಲೆ ಗೊತ್ತಾಗುತ್ತೆ ಎಂದು ದರ್ಶನ್ ಮತ್ತು ಯಶ್ ಪ್ರಚಾರದ ಬಗ್ಗೆ ಮುಖ್ಯಮಂತ್ರಿಗಳ ವ್ಯಂಗ್ಯದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ದರ್ಶನ್, ಕರ್ನಾಟಕ ಎಂದಿಗೂ ನಾಲ್ಕು ಜನರ ಹೆಸರನ್ನು ಮರೆಯಲು ಸಾಧ್ಯವಿಲ್ಲ.

ಸುಮಲತಾ ಜಾತಿ ಕೆದಕುವ ಶಿವರಾಮೇಗೌಡ್ರೇ, ಸೋನಿಯಾ ಬಳಿಯೂ ಇದನ್ನೇ ಕೇಳ್ತೀರಾ?ಸುಮಲತಾ ಜಾತಿ ಕೆದಕುವ ಶಿವರಾಮೇಗೌಡ್ರೇ, ಸೋನಿಯಾ ಬಳಿಯೂ ಇದನ್ನೇ ಕೇಳ್ತೀರಾ?

ನನ್ನಂತ ನೂರು ಜನ ಮತ್ತೆ ಹುಟ್ಟಿಬಂದರೂ, ಡಾ.ರಾಜಕುಮಾರ್, ಡಾ. ವಿಷ್ಣುವರ್ಧನ್, ಅಪ್ಪಾಜಿ ಅಂಬರೀಶ್ ಮತ್ತು ಶಂಕರ್ ನಾಗ್ ಈ ನಾಲ್ಕು ಜನರ ಹೆಸರನ್ನು ನಿಮ್ಮ ಮನಸ್ಸಿನಿಂದ ಅಳಿಸಲು ಸಾಧ್ಯವೇ ಎಂದು ದರ್ಶನ್ ಪ್ರಶ್ನಿಸಿದ್ದಾರೆ. ಜನರು ಏನು ಬೇಕಾದರೂ ಕೊಟ್ಟು, ಏನು ಬೇಕಾದರೂ ಪಡೆಯಬಹುದು ಎಂದು ದರ್ಶನ್ ಹೇಳಿದ್ದಾರೆ.

Kannadigas cannot forget four names, Darshan statement during Mandya campaign

ನಮ್ಮ ಅಪ್ಪಾಜಿಗೆ (ಅಂಬರೀಶ್) ಒಂದು ಅವಕಾಶ ನೀಡಿದ್ದೀರಾ, ನಮ್ಮ ಅಮ್ಮನಿಗೂ ನೀವು ಆಶೀರ್ವಾದ ಮಾಡಿ. ಈ ಬಾರಿಯ ಮಂಡ್ಯ ಚುನಾವಣೆಯ ಹೆಸರಿನಲ್ಲಿ ಬಹಳಷ್ಟು ಗೊಂದಲಗಳು ಇರುವುದರಿಂದ ಕ್ರಮ ಸಂಖ್ಯೆ 20, ಸುಮಲತಾ ಅಂಬರೀಶ್, ಇದಕ್ಕೆ ಮತಹಾಕುವುದನ್ನು ಮರೆಯಬೇಡಿ ಎಂದು ದರ್ಶನ್ ಮತಯಾಚಿಸಿದ್ದಾರೆ.

ನಿಮ್ಮ ಪ್ರೀತಿ, ಬೆಂಬಲ, ಆಶೀರ್ವಾದ ಪಡೆಯಲು ನಾನು ಇಲ್ಲಿಗೆ ಬಂದಿದ್ದೇನೆ. ನಿಮ್ಮ ಸೇವೆಯನ್ನು ಮಾಡುವ ಒಂದು ಅವಕಾಶವನ್ನು ಸುಮಲತಾ ಅವರಿಗೆ ಕೊಡಿ ಎಂದು ದರ್ಶನ್ ಮನವಿ ಮಾಡಿದ್ದಾರೆ.

ಅಮ್ಮನನ್ನು ಗೆಲ್ಲಿಸಿ ಪಾರ್ಲಿಮೆಂಟ್ ಗೆ ಕಳುಹಿಸಿಕೊಡಿ:ಮಂಡ್ಯದಲ್ಲಿ ಪ್ರಚಾರ ಆರಂಭಿಸಿದ ಡಿಬಾಸ್ಅಮ್ಮನನ್ನು ಗೆಲ್ಲಿಸಿ ಪಾರ್ಲಿಮೆಂಟ್ ಗೆ ಕಳುಹಿಸಿಕೊಡಿ:ಮಂಡ್ಯದಲ್ಲಿ ಪ್ರಚಾರ ಆರಂಭಿಸಿದ ಡಿಬಾಸ್

ಇತ್ತ, ಮೈತ್ರಿ ಸರಕಾರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಾತನಾಡುತ್ತಾ, ದರ್ಶನ್ ಮತ್ತು ಯಶ್ ಅವರ ಪ್ರಚಾರದ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ, ಅವರಿಗೆ ಒಳ್ಲೆಯದಾಗಲಿ ಎಂದಿದ್ದಾರೆ.

English summary
Kannadigas cannot forget four names, Darshan statement during his campaign for Mandya independent candidate Sumalatha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X