ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿರುವುದು ಕನಕನ ಕಿಂಡಿ ಅಲ್ಲ: ಹೊಸ ವಿವಾದ

|
Google Oneindia Kannada News

ಮೇಲುಕೋಟೆ, ಮೇ 03 : ಕನಕನ ಕಿಂಡಿ ಇರೋದು ಉಡುಪಿಯಲ್ಲಿ, ಇದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ, ಮೇಲುಕೋಟೆಯ ಸ್ಥಾನೀಯ ಅರ್ಚಕರೊಬ್ಬರು ಕನಕನ ಕಿಂಡಿ ಇರುವುದು ಉಡುಪಿಯಲ್ಲಿ ಅಲ್ಲ ಎಂದು ಹೇಳಿ ಹೊಸ ವಿವಾದದ ರಣ ಕಹಳೆ ಊದಿದ್ದಾರೆ.

"ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ" ಎಂಬ ಭಕ್ತ ಕನಕದಾಸರ ಕೀರ್ತನೆ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮೇಲುಕೋಟೆಯಿಂದಲೇ ಹೊರತು ಉಡುಪಿಯಿಂದಲ್ಲ ಎಂದು ಅರ್ಚಕ ಶೆಲ್ವ ಪಿಳ್ಳೇ ಹೇಳಿದ್ದಾರೆ.

Kanakana Kindi is not in Udupi says Melkote priest Selva Pillai Iyengar

ಕನಕದಾಸರು ಉಡುಪಿಗೆ ಹೋಗಿದ್ದ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಭಕ್ತ ಕನಕದಾಸರು ಮೇಲುಕೋಟೆಯಲ್ಲಿ 10-12 ದಿನಗಳ ಕಾಲ ತಂಗಿದ್ದಕ್ಕೆ ಸಾಕಷ್ಟು ಸಾಕ್ಷಿಗಳಿವೆ.

ರಾಮಾನುಜಾಚಾರ್ಯರ ಉತ್ಸವ ಮೂರ್ತಿ ಸಂಪ್ರದಾಯ ನೋಡಿದ್ದ ಕನಕದಾಸರು, "ಬಾಗಿಲನು ತೆರೆದು ಸೇವೆಯನು ಕೊಡು" ಕೀರ್ತನೆಯಲ್ಲಿ ಅದನ್ನು ಉಲ್ಲೇಖಿಸಿದ್ದಾರೆ.

ಆದ್ದರಿಂದ ಇದು ಮೇಲುಕೋಟೆಗೆ ಸಂಬಂಧಪಟ್ಟ ಕೀರ್ತನೆಯೇ ಹೊರತು ಉಡುಪಿಯದ್ದಲ್ಲ ಎಂದು ಹೇಳಿ ಹೊಸ ವಿವಾದ ಸೃಷ್ಟಿಸಿದ್ದಾರೆ.

English summary
Melkote priest Selva Pillai Iyengar issues a controversial statement in which he argues Kanakana Kindi is not in Udupi, but it is in Melukote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X