ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮನ್ ಮುಲ್ ಚುನಾವಣೆ; ಜೆಡಿಎಸ್ ಗೆ ಅದೃಷ್ಟ, ಬಿಜೆಪಿಗೆ ಮುಖಭಂಗ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಅಕ್ಟೋಬರ್ 3: ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಸಂಘದ (ಮನ್ ಮುಲ್) ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಮನ್ ಮುಲ್ ಜೆಡಿಎಸ್ ಪಾಲಾಗಿದೆ. ಜೆಡಿಎಸ್ ‌ಗೆ ಅದೃಷ್ಟ ಒಲಿದಿದ್ದು, ಬಿಜೆಪಿಗೆ ಭಾರೀ ಮುಖಭಂಗವಾಗಿದೆ.

ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಬೆಂಬಲ ವಿಚಾರ: ಕಾಂಗ್ರೆಸ್ ಒಳಗೇ ಕಿತ್ತಾಟಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಬೆಂಬಲ ವಿಚಾರ: ಕಾಂಗ್ರೆಸ್ ಒಳಗೇ ಕಿತ್ತಾಟ

ಲಾಟರಿ ಮೂಲಕ‌ ಜೆಡಿಎಸ್ ಮನ್ ಮುಲ್ ಗದ್ದುಗೆ ಹಿಡಿದಿದ್ದು, ಅದೃಷ್ಟ ಲಕ್ಷ್ಮೀ ಜೆಡಿಎಸ್ ಕೈಹಿಡಿದಿದೆ. ಚಲಾವಣೆಯಾಗಿದ್ದ 16 ಮತಗಳಲ್ಲಿ 8-8 ಸಮಬಲ ಸಾಧಿಸಿದ್ದವು. ಸಮಬಲ ಸಾಧಿಸಿದ್ದ ಜೆಡಿಎಸ್-ಬಿಜೆಪಿ ಅಧ್ಯಕ್ಷ ಸ್ಥಾನದ ಸ್ಪರ್ಧಿಗಳನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ‌ನ ರಾಮಚಂದ್ರು ಆಯ್ಕೆಯಾಗಿದ್ದಾರೆ.

JDS Wins In Manmul Election

ಮೈಮೂಲ್ ನಿಂದ ಹಾಲು ಉತ್ಪಾದಕರಿಗೆ 1 ರೂಪಾಯಿ ಹೆಚ್ಚಳಮೈಮೂಲ್ ನಿಂದ ಹಾಲು ಉತ್ಪಾದಕರಿಗೆ 1 ರೂಪಾಯಿ ಹೆಚ್ಚಳ

ಬಿಜೆಪಿ ಹಿನ್ನಡೆಗೆ ಅಧಿಕಾರಿಯೊಬ್ಬರ ಕ್ರಾಸ್ ಓಟಿಂಗ್ ಶಂಕೆ ವ್ಯಕ್ತವಾಗಿದೆ. ಜೆಡಿಎಸ್ ಬಿಟ್ಟು ಬಿಜೆಪಿ ಸೇರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್‌ಪಿ ಸ್ವಾಮಿಗೆ ಮುಖಭಂಗವಾಗಿದೆ. ಉಪಾಧ್ಯಕ್ಷ ಸ್ಥಾನ ಕೂಡ ಜೆಡಿಎಸ್ ಗೆ ಲಭಿಸಿದೆ. 9 ಮತ ಪಡೆದು ರಘು ನಂದನ್ ಉಪಾಧ್ಯಕ್ಷ ಗದ್ದುಗೆ ಏರಿದ್ದಾರೆ. ಡಿಸಿಎಂ ಅಶ್ವತ್ ನಾರಾಯಣ, ಮಾಜಿ ಸಚಿವ ಚಲುವರಾಯಸ್ವಾಮಿಗೆ ತೀವ್ರ ಮುಖಭಂಗವಾಗಿದ್ದು, ಜೆಡಿಎಸ್ ಗೆ ಅಧಿಕಾರ ತಪ್ಪಿಸಲು ಉಭಯ ನಾಯಕರು ಕಸರತ್ತು ನಡೆಸಿದ್ದರು.

English summary
The results of the election of the president and Vice President for Mandya District Cooperative Milk Federation Association (Mann Mul) have been announced. JDS win this election by lottery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X