ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದಲ್ಲಿ ವಿಜಯಲಕ್ಷ್ಮೀ ಪಟಾಕಿ ಹೊಡೆಯುವತ್ತ ಜೆಡಿಎಸ್

|
Google Oneindia Kannada News

Recommended Video

Mandya By-elections Results 2018 : ಮಂಡ್ಯದಲ್ಲಿ ಜೆಡಿಎಸ್ ಕಿನ್ ಮೇಕರ್ ಆಗುವ ಸಾಧ್ಯತೆ

ಮಂಡ್ಯ, ನವೆಂಬರ್ 6: 1 ಲಕ್ಷ ಮತಗಳ ಗಡಿ ದಾಟುವ ಮೂಲಕ ಜೆಡಿಎಸ್ ಮಂಡ್ಯದಲ್ಲಿ ಕಿಂಗ್ ಆಗುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ.ಇದರಿಂದ ಮೈತ್ರಿ ಪಕ್ಷಕ್ಕೆ ಭಾರಿ ಮುನ್ನಡೆ ದೊರೆತಂತಾಗಿದೆ.

ಮಂಡ್ಯ ಲೋಕಸಭೆ ಉಪಚುನಾವಣೆ ಫಲಿತಾಂಶ: LIVE: ಜೆಡಿಎಸ್‌ನ ಶಿವರಾಮೇಗೌಡ ಮುನ್ನಡೆಮಂಡ್ಯ ಲೋಕಸಭೆ ಉಪಚುನಾವಣೆ ಫಲಿತಾಂಶ: LIVE: ಜೆಡಿಎಸ್‌ನ ಶಿವರಾಮೇಗೌಡ ಮುನ್ನಡೆ

ಜೆಡಿಎಸ್ ಅಭ್ಯರ್ಥಿ ಎಲ್ ಆರ್ ಶಿವರಾಮೇಗೌಡ ಮೊದಲ ಸುತ್ತಿನಲ್ಲಿ 4570 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದರು, ಎರಡನೇ ಸುತ್ತಿನಲ್ಲಿ 27,372 ಮತಗಳನ್ನು ಪಡೆದಿದ್ದರು, ಮೂರನೇ ಸುತ್ತಿನಲ್ಲಿ 40,796 ಮತಗಳನ್ನು ಪಡೆದು ಭಾರಿ ಮುನ್ನಡೆ ಸಾಧಿಸಿದ್ದಾರೆ. ಇದೀಗ ನಾಲ್ಕನೇ ಸುತ್ತಿ ಮತ ಎಣಿಕೆಯಲ್ಲಿ 1ಲಕ್ಷ ಮತವನ್ನು ದಾಟಿದ್ದಾರೆ.

ಉಪಚುನಾವಣೆ ಫಲಿತಾಂಶ LIVE:5 ಕ್ಷೇತ್ರಗಳಲ್ಲೂ ಬಿಜೆಪಿಗೆ ಮುಖಭಂಗ?! ಉಪಚುನಾವಣೆ ಫಲಿತಾಂಶ LIVE:5 ಕ್ಷೇತ್ರಗಳಲ್ಲೂ ಬಿಜೆಪಿಗೆ ಮುಖಭಂಗ?!

ಡಾ. ಸಿದ್ದರಾಮಯ್ಯ 15 ಸಾವಿರ ಮತಗಳನ್ನು ಪಡೆದು ಸೋಲುವ ದಿಕ್ಕಿನಲ್ಲಿ ಹೆಜ್ಜೆ ಹಾಕಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ನ ಭದ್ರಕೋಟೆ ಎನಿಸಿರುವ ಕ್ಷೇತ್ರಗಳ ಪೈಕಿ ಮಂಡ್ಯ ಕೂಡ ಒಂದಾಗಿದ್ದು, ಹಾಲಿ ಸಚಿವ ಸಿಎಸ್ ಪುಟ್ಟರಾಜು ಅವರ ರಾಜಿನಾಮೆಯಿಂದ ತೆರವಾಗಿತ್ತು.

JDS to celebrate first victory in Mandya

ಈ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಎಲ್‌ಆರ್ ಶಿವರಾಮೇಗೌಡ ಕಣಕ್ಕಿಳಿದಿದ್ದು ಕಾಂಗ್ರೆಸ್ ಇಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಿತ್ತು.ಹೀಗಾಗಿ ಈ ಬಾರಿ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡರಿಗೆ ಕಾಂಗ್ರೆಸ್ ನ ಬೆಂಬಲವೂ ದೊರಕಿದೆ.

ಬಿಜೆಪಿಯಿಂದ ಡಾ. ಸಿದ್ದರಾಮಯ್ಯ ಕಣಕ್ಕಿಳಿದಿದ್ದು, ಎಷ್ಟರ ಮಟ್ಟಿಗೆ ಪ್ರತಿಸ್ಪರ್ಧೆ ಒಡ್ಡುತ್ತಾರೆ ಎಂಬುದು ಈಗಿರುವ ಕುತೂಹಲ, ಮೇಲ್ನೋಟಕ್ಕೆ ಜೆಡಿಎಸ್ ಗೆ ವಿಜಯಲಕ್ಷ್ಮೀ ಒಲಿಯುತ್ತಾಳೆ ಎನ್ನಲಾಗುತ್ತಿದ್ದು ಮತದಾರನ ಮನದಲ್ಲಿ ಅಡಗಿರುವ ಗುಟ್ಟು, ರಟ್ಟಾಗಲು ಈಗ ಕ್ಷಣಗಣನೆ ಆರಂಭಗೊಂಡಿದೆ.

English summary
As L.R.Shivaramegowda has been crossed 50,000 votes ahead from Bjp's Dr. Siddaramaiha, JDS to celebrate first victory in five constituencies by poll in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X