ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಬ್ಬಾಳಿಕೆ, ಗೂಂಡಾಗಿರಿ ಪ್ರದರ್ಶಿಸುವ ಜೆಡಿಎಸ್ ಶಾಸಕರಿಗೆ ಅಭಿವೃದ್ಧಿ ಬೇಕಿಲ್ಲ:ಸುಮಲತಾ ಕಿಡಿ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಸೆಪ್ಟೆಂಬರ್ 17: ದಬ್ಬಾಳಿಕೆ, ದೌರ್ಜನ್ಯ, ದುರಹಂಕಾರ, ಗೂಂಡಾಗಿರಿ ಪ್ರದರ್ಶನ ಬಿಟ್ಟರೆ ಜಿಲ್ಲೆಯ ಜೆಡಿಎಸ್ ಶಾಸಕರು ಅಭಿವೃದ್ಧಿ ಪರ ಅಥವಾ ಜನಸಾಮಾನ್ಯರ ಸಮಸ್ಯೆ ಬಗ್ಗೆ ಧ್ವನಿ ಎತ್ತುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್ ಹರಿಹಾಯ್ದಿದ್ದಾರೆ.

ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ಮಾತನಾಡಿದ ಅವರು, ಜಿಲ್ಲೆಯ ಜನರ ಪರವಾಗಿ ಒಂದೇ ಒಂದು ಸಮಸ್ಯೆ ಬಗ್ಗೆ ಯಾರೂ ಮಾತನಾಡುತ್ತಿಲ್ಲ, ಅವರನ್ನು ಜನ ಆಯ್ಕೆ ಮಾಡಿರುವುದು ಸುಮಲತಾರನ್ನ ಟಾರ್ಗೆಟ್ ಮಾಡಿ ಮಾತನಾಡುವುದಕ್ಕೆ ಬಂದಿದ್ದಾರೆ. ದಿಶಾ ಸಭೆಗೆ ಮೂರು ವರ್ಷಗಳಿಂದ ಎಷ್ಟು ಸಾರಿ ಬಂದಿದ್ದಾರೆ, ಇವರು ನನಗೆ ಮಾಹಿತಿ ನೀಡದೇ ಇವರ ತಾಲ್ಲೂಕಿನಲ್ಲಿ ಸಭೆ ಮಾಡಿದಾಗಲೂ ನಾನು ಪ್ರಶ್ನೆ ಮಾಡಿದಿನಾ ಎಂದು ಟೀಕಿಸಿದರು.

ರಾಜಧನ ವಸೂಲಿಯಲ್ಲಿ ಮಂಡ್ಯ ಜಿಲ್ಲೆಗೆ ಕೊನೆಯ ಸ್ಥಾನ: ಸುಮಲತಾ ಅಸಮಧಾನರಾಜಧನ ವಸೂಲಿಯಲ್ಲಿ ಮಂಡ್ಯ ಜಿಲ್ಲೆಗೆ ಕೊನೆಯ ಸ್ಥಾನ: ಸುಮಲತಾ ಅಸಮಧಾನ

ನಾನೇನು ಕದ್ದು ಮುಚ್ಚಿ ಯಾವುದೇ ಸಭೆ ಮಾಡುವುದಿಲ್ಲ, ಒಂದೇ ಸಭೆಯಲ್ಲಿ ಎಲ್ಲರ ಹಾಜರಾಗಿದ್ದರು, ಅದಯ ಅಕ್ರಮ ಗಣಿಗಾರಿಕೆ ಬಗ್ಗೆ ಮೊದಲ ಬಾರಿಗೆ ಧ್ವನಿ ಎತ್ತಿದಾಗ ಎಲ್ಲರು ಸೇರಿದ್ದರು. ಏಕೆಂದರೆ ಆಗ ಅವರಿಗೆ ಅಕ್ರಮ ಗಣಿಗಾರಿಕೆ ಬಿಸಿ ತಟ್ಟಿದ್ದರಿಂದ ಭಾಗವಹಿಸಿ ಕೂಗಾಡಿದ್ದರು. ಕೋವಿಡ್‌ ಸಂದರ್ಭದಲ್ಲಿ ಮಾತನಾಡುವುದಕ್ಕೆ ಬಿಟ್ಟಿಲ್ಲ, ಅಕ್ರಮ ಗಣಿಗಾರಿಗೆ ಮಾಡುವುದಕ್ಕೆ ಬಿಟ್ಟಿಲ್ಲ, ಬಂದಾಗಲೆಲ್ಲಾ ಗಲಾಟೆ ಮಾಡುತ್ತಾರೆ.

JDS MLAs are just tyranny, arrogance and hooliganism, Says Mandya MP Sumalatha

ಸಭೆಯನ್ನು ಒಂದು ರಾಜಕಾರಣದ ವೇದಿಕೆ ರೀತಿಯಲ್ಲಿ ನೋಡುತ್ತಾರೆ. ಇಂತಹ ಗಂಭೀರವಾದ ಸಭೆ, ಜನರ ಸಮಸ್ಯೆಗಳನ್ನು ಎತ್ತಿ ಪರಿಹಾರ ಕೊಡಿಸುವ ಯಾವುದೇ ವಿಚಾರ ಅವರಲ್ಲಿಲ್ಲ. ಸದನ ನಡೆಯುತ್ತಿದೆ ನಿಜಾ ಹಾಗಂತಾ ಜಿಲ್ಲೆಯ ಪರವಾಗಿ ಅಥವಾ ಸಮಸ್ಯೆ ಬಗ್ಗೆ ಯಾವಾಗಲಾದರೂ ಚರ್ಚೆ ನಡೆಸಿದ್ದರಾ? ಪಾರ್ಲಿಮೆಂಟ್‌ನಲ್ಲಿ ನಾನು ಮಾತಾಡ್ತೀನಿ, ಇವರು ಸದನದಲ್ಲಿ ಮಾತಾಡ್ತಾರಾ, ಇವರು ರಾಜಕಾರಣ ಮಾಡಿಕೊಂಡೇ ಇದ್ದಾರೆ. ಸಮಸ್ಯೆ ಬಗ್ಗೆ ಮಾತನಾಡುತ್ತಿಲ್ಲ ಎಂದು ಟೀಕಿಸಿದರು.

ದಿಶಾ ಸಭೆಗೆ ನೀವು ಶಾಸಕರಿಗೆ ಮಾಹಿತಿ ನೀಡಿಲ್ಲವಾ ಎಂದು ಕೇಳಿದ್ದಕ್ಕೆ, ನಾವು ಎಲ್ಲಾ ಗೈಡ್‌ಲೈನ್ಸ್ ಪ್ರಕಾರ ನಡೆಸಿದ್ದೇವೆ. ಇಲ್ಲಾ ಅಂದರೆ ಯಾವುದೇ ಅಧಿಕಾರಿಗಳು ಬರಲ್ಲ ಎಂದು ಶಾಸಕರಿಗೆ ಮಾಹಿತಿ ನೀಡಿಲ್ಲವಾ ಎಂಬ ಪ್ರಶ್ನೆ ಗೆ ಉತ್ತರಿಸಿದರು. ಮಳೆ ಬಂದು ರಸ್ತೆ, ಮನೆಗಳು ನಾಶವಾಗಿದೆ, ಈ ನಿಟ್ಟಿನಲ್ಲಿ ತುರ್ತಾಗಿ ದಿಶಾ ಸಭೆ ನಡೆಸಿ ಜನರಿಗೆ ಪರಿಹಾರ ಕೊಡುವುದಕ್ಕಾಗಿ ಸಭೆ ನಡೆಸಲಾಗಿದೆ ಎಂದರು.

JDS MLAs are just tyranny, arrogance and hooliganism, Says Mandya MP Sumalatha

ಅಧಿವೇಶನ ಇದ್ದ ಮಾತ್ರಕ್ಕೆ ಸಭೆಗೆ ಬರಬಾರದು ಎಂದು ಎಲ್ಲೂ ಹೇಳಿಲ್ಲ. ಅಧಿವೇಶನ ಇದ್ದಾಗ ಸಭೆ ಮಾಡಬಾರದು ಎಂದಿದೆ ಎಂದು ಕೇಳಿದ್ದಕ್ಕೆ ನಾವು ಗೈಡ್‌ಲೈನ್ಸ್‌ ಪ್ರಕಾರ ಸಭೆ ಕರೆದಿದ್ದೇವೆ. ಅಲ್ಲದೆ 3 ವರ್ಷಗಳಲ್ಲಿ ಎಷ್ಟು ಸಭೆಗೆ ಜೆಡಿಎಸ್​ ಶಾಸಕರು ಬಂದಿದ್ದಾರೆ. ಅಧಿವೇಶನದಲ್ಲಿ ಭಾಗಿಯಾದ ಮಾತ್ರಕ್ಕೆ ಅವರು ದಿಶಾ ಸಭೆಗೆ ಬರಬಾರದು ಎಂದೇನೂ ಇಲ್ಲ. ಇನ್ನು ಅವರು ಸದನದಲ್ಲಿ ಭಾಗಿಯಾದರೆ ಜಿಲ್ಲೆಯ ಸಮಸ್ಯೆ ಬಗೆಗೆ ಎಷ್ಟು ಪ್ರಶ್ನೆ ಮಾಡುತ್ತಾರೆ, ಎಷ್ಟು ಮಾತಾಡಿದ್ದಾರೆ. ನಾನೂ ಸಹ ಸಂಸತ್ ಅಧಿವೇಶನದಲ್ಲಿ ಭಾಗಿಯಾಗಿ ಜಿಲ್ಲೆಯ ಬಗ್ಗೆ ಮಾತಾಡಿದ್ದೀನಿ. ಇವರು ಎಷ್ಟು ಪ್ರಶ್ನೆ ಮಾಡಿದ್ದಾರೆ ಎಂದು ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಜೆಡಿಎಸ್ ಶಾಸಕರ ವಿರುದ್ಧ ಗುಡುಗಿದರು.

English summary
Mandya MP, Actress Sumalatha again slams JDS MLAs for not attending Disha Meeting. she said they don't need development, they showing only tyranny, arrogance, and hooliganism,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X