ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ: ಮಾಹಿತಿ ನೀಡಲು ತಡಮಾಡಿದ ಪ್ರಾಂಶುಪಾಲರಿಗೆ ಕಪಾಳಮೋಕ್ಷ ಮಾಡಿದ ಶಾಸಕ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಜೂನ್ 21 : ಮಂಡ್ಯ ನಗರದ ಸರಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲರಿಗೆ ಮಂಡ್ಯ ಶಾಸಕ, ಜೆಡಿಎಸ್ ನಾಯಕ ಎಂ. ಶ್ರೀನಿವಾಸ್‌ ಕಪಾಳಮೋಕ್ಷ ಮಾಡಿರುವ ಘಟನೆ ಸೋಮವಾರ ನಡೆದಿದೆ.

ಮಂಡ್ಯದ ಉನ್ನತೀಕರಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಐಟಿಐ ಕಾಲೇಜು ಉದ್ಘಾಟನೆ ವೇಳೆ ಶಾಸಕ ಎಂ. ಶ್ರೀನಿವಾಸ್ ಕೇಂದ್ರದ ಪ್ರಾಂಶುಪಾಲ ನಾಗಾನಂದ್ ಮೇಲೆ ಹಲ್ಲೆ ನಡೆಸಿದ್ದಾರೆ. ಐಟಿಐ ಕೇಂದ್ರಕ್ಕೆ ಆಗಮಿಸಿದ ಶಾಸಕ ಕೇಂದ್ರವನ್ನು ಉದ್ಘಾಟಿಸಿದರು. ನಂತರ ನಗರಸಭಾಧ್ಯಕ್ಷ ಎಚ್.ಎಸ್. ಮಂಜು ಕಂಪ್ಯೂಟರ್ ಲ್ಯಾಬ್‌ ಉದ್ಘಾಟಿಸಿದರು.

ದಂಪತಿ ಮೇಲೆ ಹಲ್ಲೆ ಮಾಡಿದ ಬಿಜೆಪಿ ಶಾಸಕ, 3 ಕೋಟಿ ಜಾಗ ಬಿಚ್ಚಿಡಲಿದೆ ಜಾತಕ! ದಂಪತಿ ಮೇಲೆ ಹಲ್ಲೆ ಮಾಡಿದ ಬಿಜೆಪಿ ಶಾಸಕ, 3 ಕೋಟಿ ಜಾಗ ಬಿಚ್ಚಿಡಲಿದೆ ಜಾತಕ!

ಈ ಸಂದರ್ಭದಲ್ಲಿ ಶಾಸಕ ಮತ್ತು ನಗರಸಭಾಧ್ಯಕ್ಷ ಪ್ರಯೋಗಾಲಯದ ಒಳಗೆ ತೆರಳಿದದರು, ಆದರೆ ಕಿರಿದಾದ ಜಾಗವಾಗಿದ್ದರಿಂದ ಪ್ರಾಂಶುಪಾಲರು ಮುಂದೆ ಬರಲು ಸಾಧ್ಯವಾಗಲಿಲ್ಲ. ಈ ವೇಳೆ ಕಂಪ್ಯೂಟರ್ ಕೊಠಡಿ ವೀಕ್ಷಣೆ ವೇಳೆ ಮಾಹಿತಿಗಾಗಿ ಪ್ರಾಂಶುಪಾಲರನ್ನು ಹುಡುಕಾಡಿದ್ದಾರೆ.

JDS MLA slaps ITI college principal in Mandya

ತಡವಾಗಿ ಮುಂದೆ ಬಂದಿದ್ದರಿಂದ ಕುಪಿತಗೊಂಡ ಶ್ರೀನಿವಾಸ್‌ ಪ್ರಾಂಶುಪಾಲರಾದ ನಾಗಾನಂದ್‌ ಮುಂದೆ ಬರುತ್ತಿದ್ದಂತೆ ಅವರಿಗೆ ಮೂರ್ನಾಲ್ಕು ಏಟುಕೊಟ್ಟಿದ್ದಾರೆ. ಬಂದ ಅತಿಥಿಗಳಿಗೆ ಇಲ್ಲಿನ ಕಾರ್ಯಕ್ಷೇತ್ರ ಮತ್ತು ಕಾರ್ಯಕ್ಷಮತೆ ಬಗ್ಗೆ ವಿವರಿಸದ ಪ್ರಾಂಶುಪಾಲರ ಕ್ರಮಕ್ಕೆ ಶಾಸಕ ಕೋಪಗೊಂಡಿಡು ಕೈ ಮಾಡಿದ್ದಾರೆ.

ಅಗ್ನಿಪಥ್ ವಿರೋಧಿಸಿ ಹಿಂಸಾಚಾರ: ಕಾಶಿಯಲ್ಲಿ ಅತಂತ್ರರಾದ ಮಂಡ್ಯ ಪ್ರವಾಸಿಗರು ಅಗ್ನಿಪಥ್ ವಿರೋಧಿಸಿ ಹಿಂಸಾಚಾರ: ಕಾಶಿಯಲ್ಲಿ ಅತಂತ್ರರಾದ ಮಂಡ್ಯ ಪ್ರವಾಸಿಗರು

ಶಾಸಕರ ದಿಢೀರ್ ಕೋಪದಿಂದ ಒಂದು ಕ್ಷಣ ಗಲಿಬಿಲಿಗೊಂಡ ಪ್ರಾಂಶುಪಾಲರು ನಗುತ್ತಲೇ ಪರಿಸ್ಥಿತಿ ತಿಳಿಗೊಳಿಸುವಲ್ಲಿ ಯಶಸ್ವಿಯಾದರು. ನಂತರ ಶಾಸಕರು ಮತ್ತು ಅತಿಥಿಗಳು ಕೇಂದ್ರದಲ್ಲಿರುವ ಎಲ್ಲಾ ವಿಭಾಗಗಳಿಗೂ ಭೇಟಿ ನೀಡಿ ಪ್ರಾಂಶುಪಾಲರು, ಅಧ್ಯಾಪಕರದಿಂದ ವಿವರಣೆ ಪಡೆದು ತೃಪ್ತರಾಗಿ ಹೊರನಡೆದರು.

30 ಕೋಟಿ ರೂ. ವೆಚ್ಚದಲ್ಲಿಐಟಿಐ ಕೇಂದ್ರ ಸ್ಥಾಪನೆ; ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ 30 ಕೋಟಿ ರೂ. ವೆಚ್ಚದಲ್ಲಿ ಈ ಐಟಿಐ ಕೇಂದ್ರವನ್ನು ಸ್ಥಾಪಿಸಲಾಗಿದೆ. ರಾಜ್ಯಾದ್ಯಂತ ಸುಮಾರು 150 ಕೇಂದ್ರಗಳು ಸ್ಥಾಪನೆಯಾಗಿವೆ. ಈ ಕೇಂದ್ರಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಏಕ ಕಾಲಕ್ಕೆ ವರ್ಚುವಲ್ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು.

ಯುವಜನರಿಗೆ ಅತ್ಯಾಧುನಿಕ ತರಬೇತಿ ನೀಡಲು ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, 6 ವಿವಿಧ ಕುಶಲಕರ್ಮಿಗಳಿಗೆ ಈ ಕೇಂದ್ರಗಳು ತರಬೇತಿ ನೀಡಲಿವೆ. ಉದ್ಯೋಗಾವಶಕ್ಕೆ ಅನುಗುಣವಾಗಿ ಇಲ್ಲಿ ಕುಶಲಕರ್ಮಿಗಳು ತರಬೇತಿ ಪಡೆದು ಸ್ವಂತ ಉದ್ದಿಮೆ ಸ್ಥಾಪಿಸುವ ಮೂಲಕ ಸ್ವಾವಲಂಭಿ ಬದುಕು ಸಾಗಿಸಲು ನೆರವಾಗಲಿವೆ.

English summary
Mandya JD(S) MLA M. Srinivas slapped government ITI college principal for delay to provide information about computer lab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X