• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾರಾಯಣಗೌಡರ ಮೇಲೆ ಚಪ್ಪಲಿ ಎಸೆದ ಜೆಡಿಎಸ್ ಕಾರ್ಯಕರ್ತರು

|

ಮಂಡ್ಯ, ನವೆಂಬರ್ 18: ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರ ಮೇಲೆ ಜೆಡಿಎಸ್ ಕಾರ್ಯಕರ್ತರು ಚಪ್ಪಲಿ ಎಸೆದು ಹಲ್ಲೆಗೆ ಮುಂದಾಗಿರುವ ಘಟನೆ ಕೆಆರ್ ಪೇಟೆಯಲ್ಲಿ ನಡೆದಿದೆ.

ನಾರಾಯಣಗೌಡ ಅವರು ಮೊದಲು ಜೆಡಿಎಸ್‌ನಲ್ಲಿಯೇ ಇದ್ದವರು, ಇದೀಗ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನಾಮಪತ್ರ ಸಲ್ಲಿಕೆಗೆಂದು ತೆರಳಿದ್ದ ನಾರಾಯಣಗೌಡರ ಮೇಲೆ ಜೆಡಿಎಸ್ ಕಾರ್ಯಕರ್ತರು ಚಪ್ಪಲಿ ಎಸೆದಿದ್ದಾರೆ. ಜೆಡಿಎಸ್‌ಗೆ ದ್ರೋಹ ಬಗೆದು ಬಿಜೆಪಿಗೆ ಹಾರಿದ್ದೀರ ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೂರಾರು ಜೆಡಿಎಸ್ ಕಾರ್ಯಕರ್ತರು ಚಪ್ಪಲಿ ಹಿಡಿದು ನಿಂತಿದ್ದ ಕಾರಣ ನಾಮಪತ್ರ ಸಲ್ಲಿಕೆಂದು ಬಂದಿದ್ದ ಅವರನ್ನು ಕಚೇರಿಯಲ್ಲೇ ಕೆಲಕಾಲ ಲಾಕ್ ಮಾಡಲಾಗಿತ್ತು. ಇದೀಗ ಕಚೇರಿಯಿಂದ ಹೊರಬಂದಿದ್ದಾರೆ. ಕಾರ್ಯಕರ್ತರ ಪ್ರತಿಭಟನೆ ಮುಂದುವರೆದಿದೆ.

ರಾಜೀನಾಮೆ ಹಿಂದೆ ಇದ್ದದ್ದು ಯಾರು?; ಅನರ್ಹ ಶಾಸಕನ ಸ್ಫೋಟಕ ಹೇಳಿಕೆರಾಜೀನಾಮೆ ಹಿಂದೆ ಇದ್ದದ್ದು ಯಾರು?; ಅನರ್ಹ ಶಾಸಕನ ಸ್ಫೋಟಕ ಹೇಳಿಕೆ

ಜೆಡಿಎಸ್ ಅಭ್ಯರ್ಥಿ ಬಿ.ಎಲ್. ದೇವರಾಜು ಅವರಿಗೆ ಎಚ್‌ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಬಿ ಫಾರ್ಮ್ ನೀಡಿ ಆಶೀರ್ವದಿಸಿದ್ದಾರೆ.

ಜೆಡಿಎಸ್ ಪಕ್ಷದ ಅಭ್ಯರ್ಥಿ ಜಿ.ಪಂ ಸದಸ್ಯರೂ ಆಗಿರುವ ದೇವರಾಜು ಕಣಕ್ಕಿಳಿಯಲಿದ್ದಾರೆ. ಬಿಜೆಪಿಯಿಂದ ನಾರಾಯಣಗೌಡ ಕೂಡ ಬಿಫಾರ್ಮ್ ಪಡೆದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ವಿಜಯಿಯಾಗಿದ್ದರು.

ಕಾಂಗ್ರೆಸ್‌ನಿಂದ ಕೆ.ಬಿ ಚಂದ್ರಶೇಖರ್ ನಾಮಪತ್ರ ಸಲ್ಲಿಸಲಿದ್ದಾರೆ. ಬಿಜೆಪಿ ಪಕ್ಷದ ಬಾವುಟ ಕಿತ್ತು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬಾವುಟ ಕಿತ್ತು ಆಕ್ರೋಶ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ‌ ಚಕಮಕಿ ನಡೆದಿದೆ.

ತಹಶೀಲ್ದಾರ್ ಕಚೇರಿ ಬಳಿ ಉದ್ಘಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು, ನಾರಾಯಣಗೌಡರಿಗೆ ಧಿಕ್ಕಾರ ಕೂಗುತ್ತಾ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾರಾಯಣಗೌಡ ತೆರಳುತ್ತಿರುವ ವೇಳೆ ಬಾವುಟ ಎಸೆತ

ನಾರಾಯಣಗೌಡ ತೆರಳುತ್ತಿರುವ ವೇಳೆ ಬಾವುಟ ಎಸೆತ

ನಾರಾಯಣಗೌಡ ಮೇಲೆ ಬಾವುಟ ಎಸೆದಿದ್ದಾರೆ. ಎಸ್‌ಪಿ ಕಾರ್‌ನಲ್ಲಿ ನಾರಾಯಣಗೌಡ ತೆರಳುತ್ತಿದ್ದಾಗ ಘಟನೆ ನಡೆದಿದೆ. ಈ ವೇಳೆ ಕಾರ್ ಮುತ್ತಲು ಜೆಡಿಎಸ್ ಕಾರ್ಯಕರ್ತರ ಯತ್ನ ನಡೆಸಿದ್ದಾರೆ. ನಂತರ ಕಾರ್‌ನ್ನು ಸ್ಪೀಡ್ ಮಾಡಿ ತೆರಳಿದ ಎಸ್‌ಪಿ ಡ್ರೈವರ್ ತೆರಳಿದ್ದಾರೆ.

ಪಟಾಕಿ ಹಚ್ಚಲು ಮುಂದಾದ ಕಾರ್ಯಕರ್ತರು

ಪಟಾಕಿ ಹಚ್ಚಲು ಮುಂದಾದ ಕಾರ್ಯಕರ್ತರು

ನಾರಾಯಣಗೌಡ ಬರುವ ವೇಳೆ ಪಟಾಕಿ ಹಚ್ಚಲು ಕಾರ್ಯಕರ್ತರು ಮುಂದಾಗಿದ್ದರು. ತಡೆದು ಪಟಾಕಿ‌ ಬೇರೆಡೆಗೆ ಪೊಲೀಸರು ಎಸೆದಿದ್ದಾರೆ. ಕಚೇರಿಯಿಂದ ಹೊರ ಬರುತ್ತಲೇ ಕಾರ್ಯಕರ್ತರತ್ತ ನಾರಾಯಣಗೌಡ ಕೈಬೀಸಿದ್ದಾರೆ. ನಾರಾಯಣಗೌಡರತ್ತ ಚಪ್ಪಲಿ ಎಸೆದು ಆಕ್ರೋಶ ಹೊರಹಾಕಿದ್ದಾರೆ.

ನಾರಾಯಣಗೌಡರತ್ತ ತಿರುಗಿಯೂ ನೋಡದ ನಿಖಿಲ್

ನಾರಾಯಣಗೌಡರತ್ತ ತಿರುಗಿಯೂ ನೋಡದ ನಿಖಿಲ್

ತಹಶೀಲ್ದಾರ್ ಕಚೇರಿ ಬಳಿ ಹೊರಗೆ ನಿಂತಿದ್ದ ನಾರಾಯಣಗೌಡರನ್ನೂ ನೋಡಿಯೂ ನೋಡದಂತೆ ನಿಖಿಲ್ ಕುಮಾರಸ್ವಾಮಿ ತಹಶೀಲ್ದಾರ್ ಕಚೇರಿಗೆ ತೆರಳಿದ್ದಾರೆ.

ನಾಮಪತ್ರ ಸಲ್ಲಿಕೆಯಾದ್ರೂ ಹೊರದೆ ಹೋಗದ ಪರಿಸ್ಥಿತಿ

ನಾಮಪತ್ರ ಸಲ್ಲಿಕೆಯಾದ್ರೂ ಹೊರದೆ ಹೋಗದ ಪರಿಸ್ಥಿತಿ

ನಾಮಪತ್ರ ಸಲ್ಲಿಕೆಯಾದ್ರೂ ಹೊರ ಹೋಗಲಾಗದ ಪರಿಸ್ಥಿತಿಯನ್ನು ನಾರಾಯಣಗೌಡರು ಅನುಭವಿಸಿದರು.ಪತ್ನಿ ಮಗಳೊಂದಿಗೆ ತಹಶೀಲ್ದಾರ್ ಕಚೇರಿಯಲ್ಲೇ ಇರೊ ನಾರಾಯಣಗೌಡ.

ಭದ್ರತೆಯ ಉದ್ದೇಶದಿಂದ ನಾರಾಯಣಗೌಡರನ್ನ ಹೊರ ಬಿಡದ ಪೊಲೀಸರು.ಹಶೀಲ್ದಾರ್ ಕಚೇರಿಯಿಂದ ಹೊರ ಬಂದ ನಾರಾಯಣಗೌಡ.ಎಸ್ ಕಾರ್ ನಲ್ಲಿ ಭದ್ರತೆಯಲ್ಲಿ ಪೊಲೀಸರು ಕರೆದೊಯ್ದಿದ್ದಾರೆ.

English summary
BJP candidate Narayana Gowda was attacked by JDS activists in KR Pete.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X