ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಸ್ವಾಮಿ ಸಿಎಂ ಆದಾಗ ಸಿಡಿ ಕೇಸ್ ಸಿಬಿಐಗೆ: ಎಲ್.ಆರ್ ಶಿವರಾಮೇಗೌಡ

|
Google Oneindia Kannada News

ಮಂಡ್ಯ, ಏಪ್ರಿಲ್ 1: "ಎಚ್.ಡಿ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಸಿಡಿ ಪ್ರಕರಣವನ್ನು ಸಿಬಿಐನಿಂದ ತನಿಖೆ ಮಾಡಿಸಿ ಸಂತ್ರಸ್ತೆಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ'' ಎಂದು ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಹೇಳಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ ಶಿವರಾಮೇಗೌಡ, ""ರಾಜ್ಯದಲ್ಲಿ ಡ್ರಗ್ಸ್ ಕೇಸ್ ಯಾವ ರೀತಿ ಹಳ್ಳ ಹಿಡಿದಿದೆ ಎಂದು ನಾವೆಲ್ಲ ನೋಡಿದ್ದೇವೆ. ಅದೇ ರೀತಿ ಸಿಡಿ ಪ್ರಕರಣ ಸಹ ಹಳ್ಳ ಹಿಡಿಯುತ್ತದೆ'' ಎಂದು ಆರೋಪಿಸಿದರು.

ಜಾರಕಿಹೊಳಿ ಸಿಡಿ ಪ್ರಕರಣ: ಹೊಸ ಬಾಂಬ್ ಸಿಡಿಸಿದ ಜೆಡಿಎಸ್ಜಾರಕಿಹೊಳಿ ಸಿಡಿ ಪ್ರಕರಣ: ಹೊಸ ಬಾಂಬ್ ಸಿಡಿಸಿದ ಜೆಡಿಎಸ್

ಡ್ರಗ್ಸ್ ಪ್ರಕರಣದಲ್ಲಿ ಬಿಲ ಅಗೆದು ಇಲಿ ಹಿಡಿಯುವ ಹಾಗೆ ಬೇಕಾದವರನ್ನು ಬಿಟ್ಟು ಬೇಡವಾದವರನ್ನು ಹಿಡಿದರು. ಅದೇ ರೀತಿಯಲ್ಲಿ ಈ ಸಿಡಿ ಕೇಸ್ ಕೂಡ ಹಳ್ಳ ಹಿಡಿಯುತ್ತದೆ. ಪೊಲೀಸರು ಸರ್ಕಾರದ ಅನ್ನ ತಿನ್ನುತ್ತಿದ್ದೇವೆ ಎಂದು ಅಂದುಕೊಂಡಿದ್ದರೆ ಇಷ್ಟೊತ್ತಿಗೆ ರಮೇಶ್ ಜಾರಕಿಹೊಳಿಯನ್ನು ಬಂಧಿಸಬೇಕಿತ್ತು ಎಂದು ಆಗ್ರಹಿಸಿದರು.

Ramesh Jarkiholi CD Case Will Be Handed Over To CBI When HD Kumaraswamy Becomes CM: LR Shivaramegowda

ರಮೇಶ್ ಜಾರಕಿಹೊಳಿಯನ್ನು ಇಲ್ಲಿಯವರೆಗೆ ಬಂಧಿಸುವ ಕೆಲಸ ಮಾತ್ರ ಆಗಿಲ್ಲ. ಮುಖ್ಯಮಂತ್ರಿಗಳು ಅತ್ಯಾಚಾರ ಆರೋಪಿಯನ್ನು ಉಪ ಚುನಾವಣೆಯ ಪ್ರಚಾರಕ್ಕೆ ಆಹ್ವಾನ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಸಿಡಿ ಪ್ರಕರಣಕ್ಕೆ ನ್ಯಾಯವಾದರೂ ಹೇಗೆ ಸಿಗುತ್ತದೆ ಎಂದು ಸಿಎಂ ಯಡಿಯೂರಪ್ಪ ವಿರುದ್ಧ ಟೀಕಿಸಿದರು.

Ramesh Jarkiholi CD Case Will Be Handed Over To CBI When HD Kumaraswamy Becomes CM: LR Shivaramegowda

ಒಂದು ವೇಳೆ ಎಸ್‍ಐಟಿ ಅಧಿಕಾರಿಗಳು ಈ ಕೇಸ್ ಅನ್ನು ಹಳ್ಳ ಹಿಡಿಸಿದರೆ, ನಾವು ನ್ಯಾಯಾಲಯದಲ್ಲಿ ಈ ಬಗ್ಗೆ ದೂರು ದಾಖಲು ಮಾಡಿ, ಸಿಬಿಐ ತನಿಖೆ ಆಗುವಂತೆ ಹೋರಾಟ ಮಾಡುತ್ತೇವೆ. ಅತ್ಯಾಚಾರಿ ಆರೋಪಿಯಾಗಿರುವ ರಮೇಶ್ ಜಾರಕಿಹೊಳಿ ತಲೆ ತಗ್ಗಿಸಿ ಇರಬೇಕಿತ್ತು. ಆದರೆ ಅವರು ಸರ್ಕಾರವನ್ನು ಬೀಳಿಸುತ್ತೇನೆ ಎಂದು ಬೆದರಿಸುತ್ತಿದ್ದಾರೆ. ಹೀಗೆ ಇರುವಾಗ ಈ ಪ್ರಕರಣದಲ್ಲಿ ಜಾರಕಿಹೊಳಿಗೆ ಕ್ಲೀನ್ ಚೀಟ್ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.

Recommended Video

ವಿಜಯಪುರ: ಸಚಿವ ಈಶ್ವರಪ್ಪ ಪರ ಬ್ಯಾಟಿಂಗ್ ಮಾಡಿದ ಯತ್ನಾಳ್ | Oneindia Kannada

ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ

English summary
Former MP LR Shivaramegowda said the CD case would be investigated by the CBI when the government headed by HD Kumaraswamy came to power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X