ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಟಿ ಅಧಿಕಾರಿಗಳೇನು ನಮ್ಮ ಮನೆಯ ಆಳುಗಳಾ? ಸುಮಲತಾ ಪ್ರಶ್ನೆ

|
Google Oneindia Kannada News

Recommended Video

Lok Sabha Elections 2019 : ಐಟಿ ದಾಳಿ ಮಾಡಿಸಿದ್ದು ಸುಮಲತಾ ಎಂದವರಿಗೆ ಖಡಕ್ ಉತ್ತರ ನೀಡಿದ ಸುಮಲತಾ

ಮಂಡ್ಯ, ಮಾರ್ಚ್ 28: ಐಟಿ ಅಧಿಕಾರಿಗಳೇನು ನಮ್ಮ ಮನೆಯ ಆಳುಗಳಾ ಎಂದು ಬಿಜೆಪಿ ಬೆಂಬಲಿತ ಲೋಕಸಭಾ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಪ್ರಶ್ನೆ ಮಾಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾಡಿದ ದಾಳಿಯ ಹಿಂದೆ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಯ ಕೈವಾಡವೂ ಇದೆ ಎಂಬ ಸಚಿವ ಸಿ.ಎಸ್​ಪುಟ್ಟರಾಜು ಅವರ ಆರೋಪವನ್ನು ನಟಿ ಸುಮಲತಾ ಅಂಬರೀಶ್​ ಅವರು ತಳ್ಳಿಹಾಕಿದ್ದಾರೆ.

ಐಟಿ ದಾಳಿ LIVE: ಐಟಿ ದಾಳಿ ಮಾಡಿಸುವ ಪವರ್ ನನಗಿಲ್ಲ ಎಂದ ಸುಮಲತಾ ಅಂಬರೀಶ್ ಐಟಿ ದಾಳಿ LIVE: ಐಟಿ ದಾಳಿ ಮಾಡಿಸುವ ಪವರ್ ನನಗಿಲ್ಲ ಎಂದ ಸುಮಲತಾ ಅಂಬರೀಶ್

ಸಚಿವ ಸಿಎಸ್ ಪುಟ್ಟರಾಜು ಅವರು ಐಟಿ ದಾಳಿಯನ್ನು ಸುಮಲತಾ ಅವರೇ ಮಾಡಿಸಿದ್ದಾರೆ ಇದೆಲ್ಲಾ ಅವರ ಕುತಂತ್ರ ಎಂದು ಪರೋಕ್ಷವಾಗಿ ಹೇಳಿದ್ದರು. ಇದಕ್ಕೆ ಕೆಂಡಾಮಂಡಲವಾದ ಸುಮಲತಾ ಅವರು ಐಟಿ ಅಧಿಕಾರಿಗಳೇನು ನಮ್ಮ ಮನೆಯ ಆಳುಗಳಾ ಎಂದು ಪ್ರಶ್ನೆ ಮಾಡಿದ್ದಾರೆ.

It officers are not my labours says sumalatha

ಕೇಂದ್ರದ ಐಟಿ ಅಧಿಕಾರಿಗಳು ಮಾಡುವಂತಹ ಕೆಲಸ ಇದು, ನನಗೆ ಐಟಿ ದಾಳಿಗೂ ಸಂಬಂಧವಿಲ್ಲ, ಐಟಿ ದಾಳಿ ಮಾಡಿಸುವಂತಹ ಪವರ್ ನನಗಿಲ್ಲ, ನಾನು ಲೋಕಸಭಾ ಪಕ್ಷೇತರ ಅಭ್ಯರ್ಥಿ ಅಷ್ಟೆ, ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ.

ಐಟಿ ದಾಳಿ ನಿರೀಕ್ಷಿತ, ಆತಂಕವಿಲ್ಲ, ಹೋರಾಡುವೆ: ಸಿಎಸ್ ಪುಟ್ಟರಾಜು ಐಟಿ ದಾಳಿ ನಿರೀಕ್ಷಿತ, ಆತಂಕವಿಲ್ಲ, ಹೋರಾಡುವೆ: ಸಿಎಸ್ ಪುಟ್ಟರಾಜು

ಐಟಿ ಅಧಿಕಾರಿಗಳು ಸತತ ಮೂರ್ನಾಲ್ಕುತಿಂಗಳುಗಳ ಕಾಲ ಒಬ್ಬರ ಮೇಲೆ ನಿಗಾ ಇಟ್ಟು ಅವರ ವಿರುದ್ಧ ಇರುವ ಆರೋಪದಲ್ಲಿ ಹುರುಳಿದೆಯೇ ಎಂದು ತಿಳಿದುಕೊಂಡು ದಾಖಲೆ ಸಮೇತರಾಗಿ ದಾಳಿ ಮಾಡುತ್ತಾರೆ. ನಾವು ಅಂದುಕೊಂಡಾಕ್ಷಣ ದಾಳಿ ನಡೆಯುವುದಿಲ್ಲ. ಹಾಗಾದರೆ ಯಶ್ ಮನೆಯ ಮೇಲೂ ದಾಳಿ ನಡೆದಿದೆ ಅದನ್ನು ಮೈತ್ರಿ ಪಕ್ಷದ ಕುತಂತ್ರ ಎಂದು ಕರೆಯಲಾಗುತ್ತದೆಯೇ ಎಂದು ಪ್ರಶ್ನಿಸಿದರು.

ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ ಮನೆ ಮೇಲೆ ಐಟಿ ದಾಳಿಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ ಮನೆ ಮೇಲೆ ಐಟಿ ದಾಳಿ

ಸಿಎಂ ಕುಮಾರಸ್ವಾಮಿ ಅವರ ಬಳಿಯೇ ಎಲ್ಲಾ ಗುಪ್ತಚರ ಇಲಾಖೆ ಇದೆ. ಪ್ರತಿಯೊಂದು ಮಾಹಿತಿಯೂ ಕೂಡ ಅವರಿಗೆ ಸಿಗುತ್ತದೆ. ಅದೆಲ್ಲವನ್ನೂ ಉಪಯೋಗಿಸಿ ದಾಳಿ ಬಗ್ಗೆ ತಿಳಿದುಕೊಳ್ಳಲಿ, ಪುಟ್ಟರಾಜು ಅವರು ಯಾವ ಲಾಜಿಕ್‌ ಮೇಲೆ ಈ ಹೇಳಿಕೆ ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ ಎಂದರು.

English summary
Sumalatha Ambareesh reacts to minister CS puttaraju allegation on IT raid. She says It officers are not my labours. They are central body.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X