ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ 150 ಕೋಟಿಯ ಆಡಿಯೋ ಸಿಡಿ ವಿಧಿವಿಜ್ಞಾನ ಪರೀಕ್ಷೆಗೆ

|
Google Oneindia Kannada News

ಮಂಡ್ಯ, ಏಪ್ರಿಲ್ 17 : ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಬಾರಿ ಸದ್ದು ಮಾಡಿದ ಆಡಿಯೋ ಪ್ರಕರಣ ಈಗ ವಿಧಿ ವಿಜ್ಞಾನ ಪ್ರಯೋಗಾಲಯ ತಲುಪಲಿದೆ. ಏ.18ರ ಗುರುವಾರ ಮಂಡ್ಯದಲ್ಲಿ ಚುನಾವಣೆ ನಡೆಯಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಂಡ್ಯದ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲ್ಲಿಸಲು 150 ಕೋಟಿ ಹಣ ಖರ್ಚು ಮಾಡಲಾಗುತ್ತಿದೆ ಎಂಬ ಆಡಿಯೋ ಎರಡು ದಿನಗಳ ಹಿಂದೆ ಬಾರಿ ಸದ್ದು ಮಾಡಿತ್ತು. ಐಟಿ ಇಲಾಖೆ ಈ ಬಗ್ಗೆ ತನಿಖೆ ಕೈಗೊಂಡಿದೆ.

ನಿಮ್ಮ ರಾಜಕೀಯ ಜ್ಞಾನವನ್ನು ಒರೆಗೆ ಹಚ್ಚುವ ರಸಪ್ರಶ್ನೆ

ಮಂಡ್ಯ ಸಂಸದ ಎಲ್.ಆರ್.ಶಿವರಾಮೇಗೌಡ ಪುತ್ರ ಚೇತನ್ ಗೌಡ ಮತ್ತು ಜೆಡಿಎಸ್ ಮುಖಂಡರಾಗಿದ್ದ ಪಿ.ರಮೇಶ್ ನಡುವೆ ನಡೆದಿದೆ ಎಂಬ ಮಾತುಕತೆ ವೇಳೆ 150 ಕೋಟಿ ರೂ. ಹಣದ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ಆಡಿಯೋ ಬಗ್ಗೆ ಐಟಿ ತನಿಖೆ ಆರಂಭಸಿದೆ.

ಮಂಡ್ಯ ರಾಜಕೀಯಕ್ಕೆ ಹೊಸ ತಿರುವು, ಮತ್ತೊಂದು ಆಡಿಯೋ ಸ್ಫೋಟ! ಮಂಡ್ಯ ರಾಜಕೀಯಕ್ಕೆ ಹೊಸ ತಿರುವು, ಮತ್ತೊಂದು ಆಡಿಯೋ ಸ್ಫೋಟ!

IT dept may submit audio tape to forensic lab

ಬುಧವಾರ ಚೇತನ್ ಗೌಡ ಮತ್ತು ಪಿ.ರಮೇಶ್ ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ಇಬ್ಬರನ್ನು ಮುಖಾಮುಖಿಯಾಗಿ ಕೂರಿಸಿ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಆಡಿಯೋ ಪ್ರಕರಣದ ಸತ್ಯಾಸತ್ಯತೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಮಂಡ್ಯ ರಾಜಕೀಯಕ್ಕೆ ಹೊಸ ತಿರುವು, ಮತ್ತೊಂದು ಆಡಿಯೋ ಸ್ಫೋಟ! ಮಂಡ್ಯ ರಾಜಕೀಯಕ್ಕೆ ಹೊಸ ತಿರುವು, ಮತ್ತೊಂದು ಆಡಿಯೋ ಸ್ಫೋಟ!

ಇಬ್ಬರ ವಿಚಾರಣೆ ಬಳಿಕ ಆಡಿಯೋವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲು ಐಟಿ ಇಲಾಖೆ ಮುಂದಾಗಿದೆ. ಧ್ವನಿ ಪರೀಕ್ಷೆಗಾಗಿ ಆಡಿಯೋವನ್ನು ಕಳಿಸಲಾಗುತ್ತಿದೆ. ವರದಿ ಬಂದ ಬಳಿಕ ಮುಂದಿನ ತನಿಖೆಯ ಬಗ್ಗೆ ಐಟಿ ತೀರ್ಮಾನ ಕೈಗೊಳ್ಳಲಿದೆ.

English summary
Chetan Gowda and P.Ramesh audio tape regarding Mandya election may submit to forensic lab. Income tax department probing the case of audio tape.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X