ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀರಂಗಪಟ್ಟಣ ದಸರಾ ಉದ್ಘಾಟನೆಗೆ ದೇಶಿಕೇಂದ್ರ ಮಹಾಸ್ವಾಮೀಜಿಗೆ ಆಹ್ವಾನ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಸೆಪ್ಟೆಂಬರ್‌, 23: ಜಿಲ್ಲಾಡಳಿತದ ವತಿಯಿಂದ ಸೆಪ್ಟೆಂಬರ್‌ 28ರಿಂದ ಅಕ್ಟೋಬರ್‌ 2ರವರೆಗೆ ಶ್ರೀರಂಗಪಟ್ಟಣ ದಸಾರಾ ನಡೆಯಲಿದೆ. ಐತಿಹಾಸಿಕ ವೈಭವಯುತ ಶ್ರೀರಂಗಪಟ್ಟಣ ದಸರಾ 2022ರ ಉದ್ಘಾಟನೆಗೆ ಶ್ರೀ ಸುತ್ತೂರು ಮಹಾಸಂಸ್ಥಾನದ ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರನ್ನು ಆಹ್ವಾನಿಸಲಾಯಿತು.

ಬೆಂಗಳೂರಿನ ಬನಶಂಕರಿಯಲ್ಲಿರುವ ಮಠದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹಾಗೂ ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಶ್ರೀಗಳನ್ನು ಭೇಟಿ ಮಾಡಿ ದಸರಾ ಉದ್ಘಾಟನೆಗೆ ಆಹ್ವಾನಿಸಿದರು. ಶ್ರೀರಂಗಪಟ್ಟಣ ದಸರಾ ಮಹೋತ್ಸವ 2022ರ ಪೋಸ್ಟರ್‌ ಅನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಬಿಡುಗಡೆ ಮಾಡಿದರು.

ಶ್ರೀರಂಗಪಟ್ಟಣ ದಸರಾ 2022; ಅದ್ದೂರಿ ಆಚರಣೆಗೆ ಸಿದ್ಧತೆಗಳುಶ್ರೀರಂಗಪಟ್ಟಣ ದಸರಾ 2022; ಅದ್ದೂರಿ ಆಚರಣೆಗೆ ಸಿದ್ಧತೆಗಳು

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್. ಅಶ್ವತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತಾ ಹುಲ್ಮನಿ, ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕುಸ್ತಿ ಸ್ಪರ್ಧೆಗೆ ಭಾಗವಹಿಸುವ ಟೀಂಗಳ ಸಂಖ್ಯೆ
ಶ್ರೀರಂಗಪಟ್ಟಣ ದಸರಾದಲ್ಲಿ ಈ ಬಾರಿ ದೇಸಿ ಕುಸ್ತಿ ಗಮನ ಸೆಳೆಯಲಿದೆ. ಅಕ್ಟೋಬರ್‌ 1ರಂದು ಪಟ್ಟಣದ ಸೆಂದಿಲ್‌ ಕೋಟೆ ಆವರಣದಲ್ಲಿ ಮಧ್ಯಾಹ್ನ ಮೂರು ಗಂಟೆಗೆ 30 ಕುಸ್ತಿ ಟೀಂಗಳು ಸಜ್ಜಾಗಲಿವೆ. ಕುಸ್ತಿ ಅಂಗವಾಗಿ ಪಟ್ಟಣದ ಶ್ರೀರಂಗ ಕ್ರೀಡಾಂಗಣದಲ್ಲಿ ಕುಸ್ತಿಗೆ ಪೈಲ್ವಾನರ ಜೋಡಿ ಕಟ್ಟುವುದಕ್ಕೆ ಈಗಾಗಲೇ ಚಾಲನೆ ನೀಡಿದ್ದಾರೆ. ಮಂಡ್ಯ ಜಿಲ್ಲಾ ಭಾರತೀಯ ಶೈಲಿ ಕುಸ್ತಿ ಸಂಘ ಸ್ಪರ್ಧೆಯ ಹೊಣೆಗಾರಿಕೆ ವಹಿಸಿಕೊಂಡಿದೆ. ಹಿರಿಯ ಪೈಲ್ವಾನರಾದ ಪಾಲಹಳ್ಳಿ ಮುಕುಂದ, ಶ್ರೀಕಂಠು, ಸತ್ಯಪ್ಪ, ಲಕ್ಷತ್ರ್ಮಣ ಸಿಂಗ್‌, ಬಾಲಸುಬ್ರಮಣ್ಯ, ಮಲ್ಲುಸ್ವಾಮಿ, ಹೊಸಳ್ಳಿ ಶಿವು, ಸುಬ್ಬಣ್ಣ, ಶಂಕರ್‌ಜಾನಿ ಪಂದ್ಯಾವಳಿಯ ನೇತೃತ್ವವನ್ನು ವಹಿಸಿಕೊಂಡಿದ್ದಾರೆ.

Invite to Sutturu Deshikendra Mahaswamiji to inaugurate Srirangapatna Dasara

ಈ ಬಾರಿ ಶ್ರೀರಂಗಪಟ್ಟಣ ದಸರಾ ಕುಸ್ತಿ ಸಮಿತಿಗೆ 4 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಪೈಲ್ವಾನರ ಜೋಡಿ ಕಟ್ಟಲು ಚಾಲನೆ ನೀಡಲಾಗಿದೆ. ಮೈಸೂರು, ಮಂಡ್ಯ, ಕನಕಪುರ, ಬೆಂಗಳೂರು, ಬೆಳಗಾವಿ, ದಾವಣಗೆರೆ, ಕೊಲ್ಲಾಪುರ, ತುಮಕೂರು ಜಿಲ್ಲೆಗಳಿಂದ ಪೈಲ್ವಾನರು ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಸುತ್ತಮುತ್ತಲಿನ ಜಿಲ್ಲೆಗಳು ಹಾಗೂ ಸ್ಥಳೀಯ ಪೈಲ್ವಾನರಿಗೂ ದಸರಾ ಕುಸ್ತಿಯಲ್ಲಿ ಅವಕಾಶ ನೀಡಲಾಗುವುದು ಎಂದು ಪೈಲ್ವಾನ್‌ ಹೊಸಳ್ಳಿ ಶಿವು ತಿಳಿಸಿದ್ದಾರೆ.

ಕುಸ್ತಿ ಸ್ಪರ್ಧೆಗೆ ಹೆಸರುವಾಸಿಯಾದ ಶ್ರೀರಂಗಪಟ್ಟಣ
ಮೈಸೂರು ಸಂಸ್ಥಾನದ ರಾಜಧಾನಿ ಆಗಿದ್ದ ಶ್ರೀರಂಗಪಟ್ಟಣ ಕುಸ್ತಿ ಸ್ಪರ್ಧೆಗೆ ಹೆಸರುವಾಸಿ ಆಗಿದೆ. ಶ್ರೀರಂಗಪಟ್ಟಣ, ಗಂಜಾಂ, ಪಾಲಹಳ್ಳಿ, ಹೊಸಹಳ್ಳಿ, ಪಾಂಡವಪುರ ತಾಲೂಕು ಕ್ಯಾತನಹಳ್ಳಿಗಳಲ್ಲಿ ಇಂದಿಗೂ ಗರಡಿಮನೆಗಳು ಜೀವಂತವಾಗಿವೆ. ಶ್ರೀರಂಗಪಟ್ಟಣ ಪುರಸಭೆಗೆ ಸೇರಿದ ಗಂಜಾಂ ಒಂದರಲ್ಲಿಯೇ ದಾದಾ ಸಾಹೇಬರ ಗರಡಿ, ಕಲಕಾರ್‌ ಬೀದಿ ಹತ್ತು ಜನಗಳ ಗರಡಿ, ಸಂಜೀವ ರಾಯಸ್ವಾಮಿ ಗರಡಿ, ಚಲುವರಾಯಸ್ವಾಮಿ ಗರಡಿ, ಶುಕ್ರವಾರ ಪೇಟೆ ಗರಡಿ, ಒಲೆ ಕೊಯ್ಯುವ ಬೀದಿ ಗರಡಿ, ಅಂಬೇಡ್ಕರ್‌ ಬೀದಿ ಗರಡಿ, ಪೇಟೆ ಬೀದಿ ಗರಡಿ ಸೇರಿ 10 ಗರಡಿ ಮನೆಗಳು ಇವೆ. ಶ್ರೀರಂಗಪಟ್ಟಣ ಟೌನ್‌ನಲ್ಲಿ ಜಟ್ಟಪ್ಪನ ಗರಡಿ, ದೊಡ್ಡಗರಡಿ, ವಜೀರ್‌ ತಿಮ್ಮಪ್ಪನ ಗರಡಿಗಳು ಇವೆ. ಪ್ರತಿನಿತ್ಯ ಯುವ ಪೈಲ್ವಾನರು ಹಿರಿಯ ಪೈಲ್ವಾನರ ಮಾರ್ಗದರ್ಶನದಲ್ಲಿ ಕುಸ್ತಿಯ ಪಟ್ಟುಗಳನ್ನು ತಯಾರು ಮಾಡುತ್ತಾರೆ.

ಶ್ರೀರಂಗಪಟ್ಟಣದವರೇ ಆದ 25 ವಯಸ್ಸಿನ ಆಸುಪಾಸಿನಲ್ಲಿರುವ ಗಂಜಾಂನ ತೇಜಸ್‌, ರವಿಚಂದ್ರ, ಕೆಂಚಮಂಜ ಮೈಸೂರು ದಸರಾ ಕುಸ್ತಿ ಮಾತ್ರವಲ್ಲದೇ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿದ್ದಾರೆ. ಈ ಬಾರಿ ಶ್ರೀರಂಗಪಟ್ಟಣ ದಸರಾ ಕುಸ್ತಿಯಲ್ಲಿಇವರು ರಾಜ್ಯಮಟ್ಟದ ಪೈಲ್ವಾನರ ನಡುವೆ ಸೆಣೆಸಾಟ ನಡೆಸಲಿದ್ದಾರೆ. ಜಿಲ್ಲಾಉಸ್ತುವಾರಿ ಸಚಿವ, ಸ್ಥಳೀಯ ಶಾಸಕ, ಜಿಲ್ಲಾಧಿಕಾರಿಗಳು ಕುಸ್ತಿಗೆ ಅಂದು ಚಾಲನೆ ನೀಡಲಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಿಂದ ಕುಸ್ತಿ ವೀಕ್ಷಣೆಗೆ ಜನ ಆಗಮಿಸುತ್ತಾರೆ ಎಂದು ಆಯೋಜಕರು ತಿಳಿಸಿದ್ದರು.

English summary
Srirangapatna Dasara from September 28th, Deshikendra Mahaswamiji invited to inaugurate Dasara, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X